ಮೈಸೂರು:( ನ.8): Kannada Rajyothsava: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಕರ್ನಾಟಕ ಸರ್ಕಾರ ಹಾಗೂ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ಮತ್ತು ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಹಾಗೂ ಹೊಯ್ಸಳ ಕರ್ನಾಟಕ ಸಂಘದ ಸಹಯೋಗದೊಂದಿಗೆ 66ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಹೊಯ್ಸಳ ಕರ್ನಾಟಕ ಸಂಘದ ಸಭಾಂಗಣದಲ್ಲಿ 66 ನೇ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ವಿಪ್ರ ಸಮುದಾಯದ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ:
ಅಭಿನಂದನೆ ಸ್ವೀಕರಿಸಿದ ಎಂಎಸ್ ವೆಂಕಟರಾಮು ,ಡಿ ಟಿ ಪ್ರಕಾಶ್ ,ಡಾ. ರಂಗನಾಥ್ ,ಡಿ ಎನ್ ಕೃಷ್ಣಮೂರ್ತಿ ,
ನಾಗಚಂದ್ರ ,ಪುಷ್ಪಾ ಅಯ್ಯಂಗಾರ್ ,ಸುಮನಾ, ಎಚ್ ವಿ ಭಾಸ್ಕರ್ ,ವಿಜೇಂದ್ರ ವೈ ಜಿ ರವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು
ಪರಮಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ ,ಧಾರ್ಮಿಕ ಮುಖಂಡರಾದ ಭಾನುಪ್ರಕಾಶ್ ಶರ್ಮಾ ,ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್ ,ಮೈಲಾಕ್ ಅಧ್ಯಕ್ಷ ಎನ್ ವಿ ಫಣೀಶ್ ,ಬಿಜೆಪಿ ನಗರಾಧ್ಯಕ್ಷ ಟಿ ಎಸ್ ಶ್ರೀವತ್ಸ ,ಗ್ರಾಮಾಂತರ ಅಧ್ಯಕ್ಷ ಗೋಪಾಲ್ ರಾವ್, ಬಿಜೆಪಿ ಮುಖಂಡರಾದ ಮೈ ವಿ ರವಿಶಂಕರ್ ,ಎಚ್ ಜಿ ಗಿರಿಧರ್ ,
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ರಾಜ್ಯ ನಿರ್ದೇಶಕರಾದ ಎಂ ಆರ್ ಬಾಲಕೃಷ್ಣ,
ನಗರಪಾಲಿಕೆ ಸದಸ್ಯ ಮಾ ವಿ ರಾಮಪ್ರಸಾದ್ ,ಕಾಂಗ್ರೆಸ್ ಯುವ ಮುಖಂಡ ಎಂ ಎನ್ ನವೀನ್ ಕುಮಾರ್ ,
ಬ್ರಾಹ್ಮಣ ಯುವವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಮಾಜಿ ನಗರ ಪಾಲಿಕೆ ಸದಸ್ಯರಾದ ಸೌಭಾಗ್ಯ ಮೂರ್ತಿ ,ಮುಳ್ಳೂರು ಗುರುಪ್ರಸಾದ್ ,ಅಜಯ್ ಶಾಸ್ತ್ರಿ ,ಶುಚೀಂದ್ರ, ರಂಗನಾಥ್ ,ಕಡಕೊಳ ಜಗದೀಶ್ ,ಪ್ರಶಾಂತ್ ,ಚಕ್ರಪಾಣಿ ,ಜ್ಯೋತಿ ,ಲತಾ ಬಾಲಕೃಷ್ಣ ,ಲತಾ ಮೋಹನ್ ,ಹಾಗೂ ಇನ್ನಿತರರು ಹಾಜರಿದ್ದರು.