Did You Know – ಆತ್ಮಿಯರೇ ಅಂತರಿಕ್ಷದ ಬಗ್ಗೆ ನಮ್ಮ ನಿಮ್ಮೆಲ್ಲರ ಊಹೆಗೂ ನಿಲುಕದ ಹಲವಾರು ಕುತುಹಲಕಾರಿ ಅಂಶಗಳಿವೆ. ಈ ಬ್ರಹ್ಮಾಂಡದ (Universe) ಶೇ 0.0000001 ಕೂಡ ಆಧುನಿಕ ಮಾನವ ಭೇಧಿಸಿಲ್ಲ. ಅಷ್ಟೊಂದು ಅಗಾಧ ರಹಸ್ಯಗಳನ್ನು ನಮ್ಮ ಈ ಬ್ರಹ್ಮಾಂಡ ಹೊಂದಿದೆ.

ಅಂತರಿಕ್ಷವೆಂಬುದು ಕೊನೆಯೇ ಇಲ್ಲದ ವಿಶಾಲವಾದ ಒಂದು ಸ್ಥಳ ಅದಕ್ಕೆ ಅದನ್ನು ಸ್ಪೇಸ್ ಎನ್ನುತ್ತಾರೆ. ಪ್ರತಿದಿನವೂ ಭೂಮಿಯಲ್ಲಿ ಆಧುನಿಕ ವಿಜ್ಞಾನಿಗಳು (Scientists) ನಿರಂತರವಾಗಿ ಅಂತರಿಕ್ಷದ ಬಗ್ಗೆ ಅಧ್ಯಯನ ನಡೆಸುತ್ತಲೇ ಇರುತ್ತಾರೆ ಆದರೂ ಕೂಡ ನಾವಿರುವ ಸೌರಮಂಡಲ (Galaxy System) ವನ್ನೇ ಇನ್ನು ಸಂಪೂರ್ಣವಾಗಿ ಎಕ್ಸ್‌ಪ್ಲೋರ್ ಮಾಡಲಾಗಿಲ್ಲ. ಇಂದಿನ ಈ ವಿಶೇಷ ಲೇಖನದಲ್ಲಿ ಅಂತರಿಕ್ಷದ ಬಗ್ಗೆ ಕೆಲ ಮಾಹಿತಿಗಳನ್ನು ಹಂಚಿಕೋಳ್ಳುತ್ತೇವೆ.

01. ಅಂತರಿಕ್ಷದಲ್ಲಿ ಯಾವಾಗಲೂ ಗಾಢವಾದ ನಿಶ್ಯಬ್ಧವಿರುತ್ತದೆ – ಹೌದು ಸ್ನೇಹಿತರೇ, ಅಂತರಿಕ್ಷದಲ್ಲಿ ಯಾವುದೇ ತರಹದ ವಾಯುಮಂಡಲ ಇಲ್ಲವಾದುದರಿಂದ ಯಾವಾಗಲೂ ನಿಶ್ಯಬ್ಧವಿರುತ್ತದೆ. ಇದಕ್ಕೆ ಕಾರಣ ಧ್ವನಿಯ ತರಂಗಗಳು ಸಂಚರಿಸಲು ಕೆಲವು ನಿರ್ಧೀಷ್ಟ ಮಾಧ್ಯಮ ಬೇಕು, ವಾಯುಮಂಡಲವಿಲ್ಲದ ಅಂತರಿಕ್ಷದಲ್ಲಿ ಧ್ವನಿ ಉತ್ಪತ್ತಿಯಾದರು ಅದು ಯಾರಿಗೂ ಕೇಳಿಸುವುದಿಲ್ಲ.

02. ಬರೊಬ್ಬರಿ 1.3 ಮಿಲಿಯನ್ ಭೂಮಿಗಳು ಸೂರ್ಯನಲ್ಲಿ ಫಿಟ್ ಆಗುತ್ತವೆ. – ಸೂರ್ಯನ ಗಾತ್ರವೂ ಭೂಮಿಗೆ ಹೋಲಿಸಿದರೆ ಬಹಳ ದೊಡ್ಡದು, ಸೂರ್ಯನ ಗಾತ್ರವನ್ನು ಕಲ್ಪನೆ ಮಾಡಿಕೊಳ್ಳಲು ಒಂದು ವೇಳೆ ಭೂಮಿಯನ್ನು ಅದರ ಒಳಗೆ ಇಟ್ಟರೆ ಬರೊಬ್ಬರಿ 1.3 ಮಿಲಿಯನ್ ಅಂದರೆ ಅಂದಾಜು 13 ಲಕ್ಷ ಭೂಮಿಗಳು ಸೂರ್ಯನಲ್ಲಿ ತುಂಬಬಹುದು.

03. ಭೂಮಿಯ ಮೇಲಿರುವ ಪ್ರತಿಯೊಂದು ಮಣ್ಣಿನ ಕಣಗಳನ್ನು ಎಣಿಸಿದರೆ ಅದಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಅಂತರಿಕ್ಷದಲ್ಲಿ ನಕ್ಷತ್ರಗಳಿವೆ.

04. ವಿನಸ್ ಗ್ರಹದ ಒಂದು ದಿನವೂ ಭೂಮಿಯ 243 ದಿನಗಳಿಗೆ ಸಮ – ವಿನಸ್ ನ ತನ್ನ ಯಾಕ್ಸಿಸ್ ಮೇಲೆ ಸುತ್ತುವಿಕೆ ವೇಗವೂ ಭೂಮಿಯ ಸುತ್ತುವಿಕೆ ವೇಗಕ್ಕಿಂತಲೂ ಎಷ್ಟೋ ಪಟ್ಟು ಕಡಿಮೆ.

ಹಾಗಾಗಿ ಭೂಮಿ ತನ್ನ ಯಾಕ್ಸಿಸ್‌ನಲ್ಲಿ ತನ್ನ ಸುತ್ತ ಸಂಪೂರ್ಣವಾಗಿ ಒಂದು ಸುತ್ತು ತಿರುಗಲು 24 ಘಂಟೆ ಅಂದರೆ ಭೂಮಿಯ ಒಂದು ದಿನ ತೆಗೆದುಕೊಂಡರೆ ವಿನಸ್ ಬರೋಬ್ಬರಿ ಒಂದು ಸುತ್ತು ಸುತ್ತಲೂ ಭೂಮಿಯ 243 ದಿನಗಳಷ್ಟು ಸಮಯ ತೆಗೆದುಕೊಳ್ಳುತ್ತದೆ.

05. ಅಂತರಿಕ್ಷಕ್ಕೆ ಹೋಗಲು ವಿಶೇಷವಾದ ಪೋಷಾಕುಗಳನ್ನು ಧರಿಸಬೇಕು ಅದನ್ನು ಸ್ಪೇಸ್ ಸ್ಯೂಟ್ ಅಂತಲೂ ಕರೆಯಬಹುದು. ಇದನ್ನು ಪ್ರಥಮ ಬಾರಿ ತಯಾರಿಸಿದ್ದು 1974 ರಲ್ಲಿ ಅಮೆರಿಕಾದ ನಾಸಾ ಸಂಸ್ಥೆ. ಆಗ ಅದರ ಬೆಲೆಯನ್ನು ಕೇಳಿದರೆ ನೀವು ನಿಜಕ್ಕೂ ಮೂರ್ಛೆ ಹೋಗುತ್ತಿರಾ. ಅಂತರಿಕ್ಷದ ಆ ವಿಶೇಷವಾದ ಪೋಷಾಕಿನ ಬೆಲೆ ಬರೊಬ್ಬರಿ 12 ಮಿಲಿಯನ್ ಅಮೆರಿಕನ್ ಡಾಲರ್. ಇಂದಿನ ಬೆಲೆಗೆ ಹೋಲಿಸಿದರೆ ಅಂದಾಜು 150 ಮಿಲಿಯನ್ ಯುಎಸ್ ಡಾಲರ್ ಆಗುತ್ತದೆ.

06. ನಮ್ಮ ಸೌರಮಂಡಲದ ಅತ್ಯಂತ ಹೆಚ್ಚು ಶಾಖ ಹೊಂದಿರುವ ಗ್ರಹ ವಿನಸ್ – ಮರ್‌ಕ್ಯೂರಿ ಗ್ರಹದ ಬಳಿಕ ಸೂರ್ಯನಿಗೆ ಅತ್ಯಂತ ಸಮೀಪವಿರುವ ಗ್ರಹವಾಗಿದ್ದರಿಂದ ಅಲ್ಲಿಯ ಸಾಮಾನ್ಯ ಉಷ್ಣಾಂಶ ಅಂದಾಜು 450 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದ ಕಾರಣ ಇದನ್ನು ಹಾಟೇಸ್ಟ್ ಪ್ಲಾನೆಟ್ ಎಂತಲೂ ಕರೆಯುತ್ತಾರೆ. ಮರ್‌ಕ್ಯೂರಿಯಲ್ಲಿ ಯಾವುದೇ ರೀತಿಯ ವಾತಾವರಣ ಇಲ್ಲದೇ ಇರುವುದರಿಂದ ಅಲ್ಲಿ ಹೆಚ್ಚಿನ ಶಾಖ ಇರುವುದಿಲ್ಲ.