ಬೆಂಗಳೂರು:(ನ.8) Avathara Purusha: ಶರಣ್ ಮತ್ತು ಸಿಂಪಲ್ ಸುನಿ ನಿರ್ದೇಶನವಿರುವ ಅವತಾರ ಪುರುಷ ಚಿತ್ರ ಪ್ರೇಕ್ಷಕರಲ್ಲಿ ಏಕಕಾಲಕ್ಕೆ ಭಯ ಮತ್ತು ಕಾಮಿಡಿ ಅನ್ನು ಹೊರಹಾಕಲಿದೆ. ಅವತಾರ ಪುರುಷ ಸಿನಿಮಾ ಡಿಸೆಂಬರ್ 10 ರಂದು ರಿಲೀಸ್ ಆಗಲಿದೆ ಎಂದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೇಳಿದ್ದಾರೆ.
ಬಹು ತಾರಾಗಣವನ್ನು ಹೊಂದಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಆಶಿಕಾ ರಂಗನಾಥ್ ಅವರು ನಟಿಸಿದ್ದಾರೆ. ಸಾಯಿಕುಮಾರ್, ಸುಧಾರಾಣಿ, ಅಯ್ಯಪ್ಪ,ಭವ್ಯ, ಸಾಧುಕೋಕಿಲ, ಶ್ರೀನಗರ ಕಿಟ್ಟಿ ಸೇರಿದಂತೆ ಹಲವಾರು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಎರಡು ಭಾಗಗಳಲ್ಲಿ ಚಿತ್ರ:
‘ಅವತಾರ ಪುರುಷ 1’ ಮತ್ತು ‘ಅವತಾರ ಪುರುಷ 2’ ಹೆಸರಿನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ಎರಡೂ ಚಿತ್ರಗಳಿಗೆ ಟ್ಯಾಗ್‌ಲೈನ್ ಮಾತ್ರ ಬೇರೆ ಇಡಲಾಗುತ್ತಿದೆ. ಚಿತ್ರದ ಮೊದಲ ಭಾಗಕ್ಕೆ ಅಷ್ಟದಿಗ್ಬಂಧನ ಮಂಡಲಕ ಹಾಗೂ ಎರಡನೇ ಭಾಗಕ್ಕೆ ತ್ರಿಶಂಕು ಎನ್ನುವ ಟ್ಯಾಗ್‌ಲೈನ್ ಇಡಲಾಗಿದೆ ಎಂದು ಚಿತ್ರತಂಡ ಹೇಳಿದೆ.

ಕರೋನ ಹಿನ್ನೆಲೆಯಲ್ಲಿ 5 ತಿಂಗಳಿಂದ ಚಿತ್ರಮಂದಿರಗಳನ್ನು ಬಂದು ಮಾಡಿತ್ತು. ಇದೀಗ ಕರೋನಾ ದೂರವಾಗುತ್ತಿದ್ದಂತೆಯೇ ಚಿತ್ರಗಳು ಒಮ್ಮಿಂದೊಮ್ಮೆಲೆ ರಿಲೀಸ್ ಕಾಣುತ್ತಿದೆ. ಚುಟುಚುಟು ಅಂತ ಹಾಡಿಗೆ ಹೆಜ್ಜೆಹಾಕಿದ್ದ ಆಶಿಕಾ ರಂಗನಾಥ್ ಅವತಾರ ಪುರುಷದಲ್ಲಿಯೂ ಶರಣ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ವಿಕ್ರಮ್ ಮೊರ್ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ. ವಿಲಿಯಮ್ ಡೇವಿಡ್ ಛಾಯಾಗ್ರಹಣದಲ್ಲಿ ಚಿತ್ರ ಮೂಡಿ ಬಂದಿದೆ.
ಸಿನಿಮಾ ಹಾರರ್, ಕಾಮಿಡಿ, ಎಲಿಮೆಂಟ್ ಜೊತೆಗೆ ಥ್ರಿಲ್ಲಿಂಗ್ , ಸಸ್ಪೆನ್ಸ್ , ಟ್ವಿಸ್ಟ್ ಗಳ ಹೂರಣ ಹೊಂದಿದೆ.
ಕೆಜಿಎಫ್ ಸಿನಿಮಾದ ಯಶಸ್ಸಿನ ಸೂತ್ರ ಅಳವಡಿಸಿಕೊಳ್ಳುತ್ತಿರುವ ಚಿತ್ರತಂಡ ದೊಡ್ಡ ಮಟ್ಟದಲ್ಲೇ ಈ ಚಿತ್ರದ ಬಗ್ಗೆ ಯೋಜನೆ ಹಾಕಿಕೊಂಡಿದೆ. ಈ ಚಿತ್ರ ಶರಣ್ ಅವರಿಗೆ ಹೊಸ ಮೈಲೇಜ್ ನೀಡುವ ಭರವಸೆಯನ್ನು ಚಿತ್ರತಂಡ ಹೊಂದಿದೆ.