ಶಿವಮೊಗ್ಗ: (ನ.೬) ; ಶಿವಮೊಗ್ಗ: (Shimoga) ಜಿಲ್ಲೆಯಲ್ಲಿ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯ ವಿಲೇವಾರಿಯಲ್ಲಿ ಮಹಾನಗರ ಪಾಲಿಕೆ ನಿರ್ಲಕ್ಷ್ಯ ತೋರುತ್ತಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವುದರ ಪರಿಣಾಮ ಜಾನುವಾರುಗಳು ಬಲಿಯಾಗುತ್ತಿರುವ ಘಟನೆ ನಡೆದಿದೆ.
ಅಸಮರ್ಪಕ ತ್ಯಾಜ್ಯ ವಿಲೇವಾರಿ:
ಶಿವಮೊಗ್ಗ(shimoga) ಮಹಾನಗರ ಪಾಲಿಕೆ ಘನತಾಜ್ಯವನ್ನು ಅಸಮರ್ಪಕ ವಿಲೇವಾರಿ ಮಾಡುತ್ತಿರುವ ಪರಿಣಾಮ ಮೂಕ ಪ್ರಾಣಿಗಳು ಬಲಿಯಾಗುತ್ತವೆ. ಘನ ತ್ಯಾಜ್ಯವನ್ನು ಸಂಗ್ರಹಿಸಿ ಡಂಪಿಂಗ್ ಯಾರ್ಡ್ ಬದಲು ಕಾಲುವೆ ಪಕ್ಕದ ಕಾರ್ಯ ಜಾಗದಲ್ಲಿ ಹಾಕುತ್ತಿರುವುವುದಾಗಿ ತಿಳಿದುಬಂದಿದೆ.ಶಿವಮೊಗ್ಗ (Shimoga) ನಗರದ ಸಮೀಪದಲ್ಲಿರುವ ಅನುಪಿನಕಟ್ಟೆ ಬಳಿ ಇರುವ ತುಂಗಾ ಎಡದಂಡೆ ಕಾಲುವೆ ಬಳಿ ಇರುವ ಖಾಲಿ ಜಾಗದಲ್ಲಿ ಘನ ತ್ಯಾಜ್ಯದ ವಿಲೇವಾರಿ ನಡೆಯುತ್ತದೆ.
ಪಾಲಿಕೆಯ ವಾಹನ ಚಾಲಕರ ನಿರ್ಲಕ್ಷ್ಯ
ಶಿವಮೊಗ್ಗ ಮಹಾನಗರ ಪಾಲಿಕೆಯ ವಾಹನ ಚಾಲಕರು ಘನತಾಜ್ಯಗಳು, ಕಟ್ಟಡ ನಿರ್ಮಾಣದ ತ್ಯಾಜ್ಯಗಳು, ಕಲ್ಯಾಣ ಮಂಟಪ ಹಾಗೂ ಹೋಟೆಲ್ (Hotel) ತ್ಯಾಜ್ಯಗಳನ್ನು ತಂದು ರಸ್ತೆಬದಿಯಲ್ಲೇ ವಿಲೇವಾರಿ ಮಾಡುತ್ತಾರೆ
ಇದರಿಂದ ಜಾನುವಾರುಗಳು ತ್ಯಾಜ್ಯಗಳನ್ನು ತಿಂದು ಸಾವನ್ನಪ್ಪುತ್ತಿದೆ.

ಐದಕ್ಕೂ ಹೆಚ್ಚು ಜಾನುವಾರುಗಳ ದಾರುಣ ಸಾವು:
ರಸ್ತೆಬದಿಯಲ್ಲಿ ಸುರಿದ ತ್ಯಾಜ್ಯಗಳನ್ನು ತಿಂದು ಅನುಪಿನಕಟ್ಟೆ ಗ್ರಾಮದಲ್ಲಿ ಕಳೆದ ಎರಡು ದಿನದಲ್ಲಿ ಐದಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿದೆ. ಗ್ರಾಮದ ರತ್ನಮ್ಮ ಬೋರೇಗೌಡ ಸೇರಿದಂತೆ ಚಿತ್ರ ಪ್ರಕಾಶ್ ಅವರ ಮನೆಯ ಜಾನುವಾರುಗಳು ತ್ಯಾಜ್ಯವನ್ನು ತಿಂದು ಸಾವನ್ನಪ್ಪಿದೆ ಎಂದು ದೂರು ನೀಡಿದ್ದಾರೆ.
ಶಿವಮೊಗ್ಗ ನಗರದಲ್ಲಿ ಈ ರೀತಿಯ ಘನತ್ಯಾಜ್ಯ ವಿಲೇವಾರಿ ( solid waste disposal) ಎಲ್ಲೆಂದರಲ್ಲಿ ಮಾಡುತ್ತಿರುವುದರಿಂದ ಜಾನುವಾರುಗಳ ಸಾವನ್ನಪ್ಪುತ್ತಿರುವುದರ ಜೊತೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಕಾಲುವೆ ಅಕ್ಕಪಕ್ಕ ಗ್ರಾಮಗಳು ಇರುವುದರಿಂದ ಸೋಂಕುಗಳು ಹೆಚ್ಚಾಗುವ ಸಾಧ್ಯತೆಗಳಿವೆ. ತ್ಯಾಜ್ಯಗಳಿಂದ ಕೆಟ್ಟ ವಾಸನೆ ಹೊರಸೂಸುತ್ತಿದ್ದು, ಗ್ರಾಮಸ್ಥರು ಹಾಗೂ ವಾಹನ ಸವಾರರು ಮೂಗುಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಾನುವಾರುಗಳಲ್ಲದೆ ಇತರ ಸಾಕುಪ್ರಾಣಿಗಳು ಹಾಗು ಪಕ್ಷಿಗಳು ತ್ಯಾಜ್ಯದಲ್ಲಿರುವ ಪ್ಲಾಸ್ಟಿಕ್ (Plastic) ಹಾಗೂ ಇನ್ನಿತರ ವಸ್ತುಗಳನ್ನು ತಿಂದು ಅನಾರೋಗ್ಯಕ್ಕೆ ತುತ್ತಾಗುತ್ತವೆ. ಶಿವಮೊಗ್ಗ ಮಹಾನಗರ ಪಾಲಿಕೆಯ ನಿರ್ಲಕ್ಷಕ್ಕೆ ಅನುಪಿನಕಟ್ಟೆ (Anupinakatte) ಗ್ರಾಮಸ್ಥರು ನಗರ ಪಾಲಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಘನ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.