ಬೆಂಗಳೂರು: ಪುನೀತ್ ರಾಜಕುಮಾರ್ ಅವರ ಸಾವಿನ ಹಿಂದೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಅಭಿಮಾನಿಗಳು ಪೊಲೀಸರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಡಾ. ರಾಜಕುಮಾರ್ ಅವರ ಕುಟುಂಬದ ವೈದ್ಯರಾದ ಡಾ. ರಮಣರಾವ್ ಅವರ ನಿವಾಸಕ್ಕೆ ಇಂದು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ವೈದ್ಯರನ್ನು ಬಂಧಿಸುವಂತೆ ಪ್ರತಿಭಟನೆ:
ಪುನೀತ್ ರಾಜಕುಮಾರ್ ಅವರ ಕೊನೆಯ ದಿನದಂದು ಡಾ. ರಮಣರಾವ್ ಅವರ ಕ್ಲಿನಿಕ್ ನಲ್ಲಿ ಪ್ರಥಮವಾಗಿ ಚಿಕಿತ್ಸೆ ಮಾಡಿದ್ದರು ಆದರೆ ಅವರ ನಿರ್ಲಕ್ಷತೆಯಿಂದ ಪುನೀತ್ ಅವರನ್ನು ಕಳೆದುಕೊಂಡಿದ್ದೇನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈಗಾಗಲೇ ಕೆಲವು ಮನೆಗಳು ವೈದ್ಯರನ್ನು ಬಂಧಿಸಬೇಕು ಎಂದು ಒತ್ತಡ ಹೇರುತ್ತಿದ್ದು, ಪ್ರತಿಭಟನೆಗಳು ಕೂಡಾ ಕೇಳಿ ಬರುತ್ತಿದೆ. ನಗರದ ಹಲವು ಸಂಘಟನೆಗಳಿಂದ ವೈದ್ಯರ ನಿವಾಸದ ಬಳಿ ಹಾಗೂ ಕ್ಲಿನಿಕ್ ಬಳಿ ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ ಎಂದು ಮುನ್ನಚ್ಚರಿಕೆ ಕ್ರಮವಾಗಿ ಪೊಲೀಸರು ಬಿಗಿಭದ್ರತೆಯನ್ನು ಮಾಡಿದ್ದಾರೆ.

35 ವರ್ಷಗಳಿಂದ ರಾಜ್ ಕುಟುಂಬಕ್ಕೆ ವೈದ್ಯಕೀಯ ಸೇವೆ:
ಪುನೀತ್ ರವರ ಸಾವಿನ ಬಗ್ಗೆ ವೈದ್ಯರ ಸ್ಪಷ್ಟನೆ ಏನು?
ಪುನೀತ್ ರಾಜಕುಮಾರ್ ಅವರ ಕುಟುಂಬದ ವೈದ್ಯರಾದ ರಮಣರಾವ್ ಅವರು ಹೇಳಿರುವ ಮಾಹಿತಿಯ ಪ್ರಕಾರ,ಪುನೀತ್ ರಾಜಕುಮಾರ್ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಅವರು ನಮ್ಮ ಕ್ಲೀನಿಕ್ ಗೆ ಬಂದಾಗ ಪ್ರಾರ್ಥಮಿಕ ಚಿಕಿತ್ಸೆಯನ್ನು ನೀಡಿದ್ದೇವೆ ಎಂದು ತಿಳಿಸಿದ್ದಾರೆ. ಕಳೆದ 35 ವರ್ಷಗಳಿಂದ ಡಾ. ರಾಜ್ ಕುಟುಂಬದವರಿಗೆ ವೈದ್ಯಕೀಯ ಸೇವೆಯನ್ನು ಸಲ್ಲಿಸುತ್ತಿದ್ದೇನೆ. ನನ್ನಿಂದ ಅವರ ಕುಟುಂಬಕ್ಕೆ ಯಾವುದೇ ಲೋಪವಾಗಿಲ್ಲ. ಅಂದು ಅಪ್ಪು ಅವರು ಬಂದಾಗ ಇಸಿಜಿ ಮಾಡಿದ್ದೆ, ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡು ಬಂದಿರಲಿಲ್ಲ ಆದರೆ ಹೃದಯಾಘಾತ ಆಗಿರಬಹುದು ಎಂಬ ಅನುಮಾನದಲ್ಲಿ ವಿಕ್ರಮ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಂಜಿಯೋಗ್ರಾಮ್ ಮಾಡಲು ತಿಳಿಸಿದ್ದೆ. ವಿಕ್ರಮ್ ಆಸ್ಪತ್ರೆಯಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.
ಕಾರಿನಲ್ಲೇ ಚಿಕಿತ್ಸೆ ನೀಡಲಾಗಿತ್ತು:
ಕಾರಿನತ್ತ ಬಂದಾಗ ಪುನೀತ್ ಅವರಿಗೆ ತಲೆಸುತ್ತು ಬಂದಿತ್ತು ಕಾರಿನಲ್ಲೇ ಪುನೀತ್ ಅವರನ್ನು ಕೂರಿಸಿ ನಾಲ್ಕೈದು ನಿಮಿಷದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಕಾರಿನಲ್ಲಿ ಯು ಚಿಕಿತ್ಸೆ ನೀಡಿದರು ಸಫಲವಾಗಲಿಲ್ಲ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ.
ಪುನೀತ್ ರಾಜಕುಮಾರ್ ಅವರ ಸಮಾಧಿ ದರ್ಶನಕ್ಕೆ ರಾಜ್ಯದ ವಿವಿಧೆಡೆ ಅಭಿಮಾನಿಗಳು ಆಗಮಿಸುತ್ತಿದ್ದು. ಇಷ್ಟು ಬೇಗ ನಮ್ಮನ್ನಗಲಿದ ಪುನೀತ್ ಮುಂದೆ ಕಣ್ಣೀರು ಹಾಕಿ ಮೌನ ಆಚರಿಸುತ್ತಿದ್ದಾರೆ.