ಮೈಸೂರು(ನ.6); ಪುನರ್ ನಿರ್ಮಾಣಗೊಂಡ ಶಂಕರಾಚಾರ್ಯರ ಸಮಾಧಿಯನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಉದ್ಘಾಟಿಸಿದರು. ಆಕರ್ಷಕವಾದ ಅಪರೂಪದ ಶಂಕರಾಚಾರ್ಯರ ಬೃಹತ್ ಪ್ರತಿಮೆಯು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj ) ಅವರ ಕೈಚಳಕದಿಂದ ಮೂಡಿಬಂದಿತ್ತು.
ಅರುಣ್ ಯೋಗಿರಾಜ್ (Arun Yogiraj ) ಅವರ ಪುಟ್ಟ ಪರಿಚಯ:
ಅರುಣ್ ಯೋಗಿರಾಜ ಅವರಿಗೆ ತಂದೆಯೇ ಮೊದಲ ಗುರು. 37 ವರ್ಷದ ಆರು ನವರು ಚಿಕ್ಕವಯಸ್ಸಿನಲ್ಲೇ ಸಾಧನೆ ಮಾಡಿರುವುದು ಅದ್ಭುತ. ಅರುಣ ತಂದೆ ಖ್ಯಾತ ಶಿಲ್ಪ ಕಲಾವಿದರು.ಮುತ್ತಜ್ಜ ಎಲ್ಲರಿಗೂ ಶಿಲ್ಪಕಲೆ ಒಲಿದುಬಂದಿತ್ತು. ಪೂರ್ವಜರಾದ ಚೌಡಪ್ಪಚಾರ್, ಬಸವಣ್ಣ ಆಚಾರ್,ಬಸವಣ್ಣ ಶಿಲ್ಪಿ ಹಾಗೂ ಯೋಗರಾಜ್ ಶಿಲ್ಪಿ ಜನಪ್ರಿಯ ಶಿಲ್ಪಿಗಳಾಗಿದ್ದರು ಅದರಲ್ಲೂ ಬಸವಣ್ಣನವರು ಮೈಸೂರಿನ ಮೈಸೂರಿನ ರಾಜಾಶ್ರಯ ಪಡೆದ ಶಿಲ್ಪಿ ಎಂದೇ ಪ್ರಖ್ಯಾತರು. ಹಾಗಾಗಿ ಶಿಲ್ಪಕಲೆ ರಕ್ತದಲ್ಲೇ ಬೆರೆತುಹೋಗಿತ್ತು. ಇದನ್ನೂ ಓದಿ : ದೀಪಾವಳಿಯಂದು ಶ್ರೀಲಂಕಾಗೆ ಭಾರತ ರಫ್ತು ಮಾಡಿದೆ ೧೦೦ ಟನ್ ನ್ಯಾನೋ ರಸಗೊಬ್ಬರ!

ಚಿಕ್ಕ ವಯಸ್ಸಿನಿಂದಲೇ ಶಿಲ್ಪಕಲೆಗೆ ಆಕರ್ಷಿತರಾಗಿದ್ದ ಅರುಣ್ (Arun Yogiraj ) ಅವರು ಕಲ್ಲೊಂದು ಹೇಗೆ ಸುಂದರ ರೂಪ ಪಡೆದುಕೊಳ್ಳುತ್ತದೆ ಎನ್ನುವುದು ಅವರ ಮನಸ್ಸಿನಲ್ಲಿ ಸದಾ ಕಾಡುತ್ತಿತ್ತು. ಆಟವಾಡುವ ಬದಲು ಅಪ್ಪ, ಅಜ್ಜ ಮಾಡುವ ಶಿಲ್ಪಕಲೆ ಕೆಲಸಕ್ಕೆ ಸಹಾಯ ಮಾಡುತ್ತಿದ್ದರು.
ಕೆಲವೊಂದು ಬಾರಿ ತಾವೇ ಗೂಳಿ ಹಿಡಿದು ಕಲ್ಲು ಕೆತ್ತಲು ಮುಂದಾಗುತ್ತಿದ್ದರು. ಶಾಲೆಯಿಂದ ಬಂದ ಕೂಡಲೇ ಶಿಲ್ಪಕಲೆಗೆ ಒತ್ತು ಕೊಡುತ್ತಿದ್ದಾರೆ ಇವರು ಸತತ ಪ್ರಯತ್ನದಿಂದಾಗಿ ಕಾಲೇಜು ದಿನಗಳಲ್ಲಿ ಉತ್ತಮ ಶಿಲ್ಪ ಕಲಾವಿದನಾಗಿ ಹೊರಬಂದರು. ಇದನ್ನೂ ಓದಿ : Karwar;ಮೀನುಗಾರರಿದ್ದ ಬೋಟ್ ನಲ್ಲಿ ಬೆಂಕಿ ಅವಘಡ : 7 ಮಂದಿ ಮೀನುಗಾರರ ರಕ್ಷಣೆ
ಶಂಕರಾಚಾರ್ಯರಿಗೆ ಕೃಷ್ಣ ಶಿಲೆ
ಕೇದಾರನಾಥದಲ್ಲಿ ಪ್ರತಿಷ್ಠಾಪನೆಯಾಗುವ ಶಂಕರಾಚಾರ್ಯರ ಮೂರ್ತಿ ಕಿಟ್ಟನಿಗೆ ಕೃಷ್ಣ ಶಿಲೆಯನ್ನು ಬಳಸಲಾಗಿದ್ದು ಸುಮಾರು 80 ಕೃಷ್ಣ ಶಿಲೆಯನ್ನು ಕೆತ್ತನೆ ಗಾಗಿ ಬಳಸಲಾಗಿದೆ. ಶಂಕರಾಚಾರ್ಯರ ಮೂರ್ತಿ ಒಟ್ಟು 28 ಟನ್ ತೂಕ ತೂಗುತ್ತದೆ. ಮೈಸೂರಿನ ಹೆಚ್ ಡಿ ಕೋಟೆ ತಾಲೂಕಿನಿಂದ ಕೃಷ್ಣ ಶಾಲೆಯನ್ನು ಇದಕ್ಕೆ ಬಳಸಲಾಗಿದೆ. ಅಂದಹಾಗೆ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj ) ಅವರ ತಂಡದಲ್ಲಿ ಏಳು ಜನರಿದ್ದು ಮೂರ್ತಿ ಕೆತ್ತನೆ ಗಾಗಿ ಹಗಲಿರುಳು ನೋಡದೆ ಕೆಲಸ ಮಾಡಿದ್ದಾರೆ. 2020 ಸೆಪ್ಟಂಬರ್ ತಿಂಗಳಿನಲ್ಲಿ ಮೂರ್ತಿಯ ಕೆತ್ತನೆ ಕೆಲಸ ಆರಂಭವಾಗಿದ್ದು 9 ತಿಂಗಳ ಬಳಿಕ ಶಂಕರಾಚಾರ್ಯರ ಮೂರ್ತಿ ಕೆಲಸ ಪೂರ್ಣಗೊಂಡಿತು.

ವಿಶೇಷ ವಿಮಾನದ ಮೂಲಕ ಹೊರಟಿತು ಪ್ರತಿಮೆ:
ಶಂಕರಾಚಾರ್ಯರ ಮೂರ್ತಿಯನ್ನು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಉತ್ತರಕಾಂಡದ ಚಮೌಲಿಗೆ ಕಳುಹಿಸಲಾಯಿತು. ನಂತರ ಪ್ರತಿಮೆಯನ್ನು ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಕೇದಾರನಾಥಕ್ಕೆ ತಲುಪಿಸಲಾಯಿತು. ಮೂರ್ತಿಗೆ ಯಾವುದೇ ಹಾನಿಯಾಗದಂತೆ ತಡೆಯುವ ಶಕ್ತಿ ಹೊಂದಿದ್ದು ಕೃಷ್ಣಶಿಲೆಯ ವಿಶೇಷತೆಯಾಗಿದೆ. ಕೃಷ್ಣಶಿಲೆಯ ಬೆಂಕಿ ಮತ್ತು ಆಸಿಡ್ ಗಾಳಿ ನೀರು ಸೇರಿದಂತೆ ಯಾವುದರಿಂದಲೂ ಹಾನಿಯಾಗದಂತೆ ತಡೆಯುತ್ತದೆ.
ಅರುಣ್ ಯೋಗಿರಾಜ್ ಅವರಿಗೆ ಸಿಕ್ಕ ಅವಕಾಶ:
ಆದಿ ಶಂಕರಾಚಾರ್ಯರ ಅವರ ಪ್ರತಿಮೆಯನ್ನು ಕೆತ್ತಲು ದೇಶದ ವಿವಿಧ ರಾಜ್ಯದ ಕಲಾವಿದರಿಗೆ ಅವಕಾಶ ನೀಡಲಾಗಿತ್ತು. ಅದರಲ್ಲಿ ಅರುಣ್ (Arun Yogiraj ) ಅವರು ಸಹ ಒಬ್ಬರಾಗಿದ್ದು 2ಅಡಿ ಮಾದರಿ ಮೂರ್ತಿಯನ್ನು ಸಿದ್ಧಪಡಿಸಿ ಕಳುಹಿಸಿದ್ದರು.ಕೇಂದ್ರ ಸರ್ಕಾರ ಮಾದರಿಯನ್ನು ಪರಿಶೀಲಿಸಿ ಐತಿಹಾಸಿಕ ಮೂರ್ತಿಯ ತಯಾರಿಕೆಯ ಜವಾಬ್ದಾರಿಯನ್ನು ಅರುಣ್ ಯೋಗಿರಾಜ ಅವರಿಗೆ ನೀಡಲಾಯಿತು. ಅರುಣ್ ಯೋಗಿರಾಜ್ ಅವರಿಗೆ ಸಿಕ್ಕ ಜವಾಬ್ದಾರಿ ಸಂತೋಷವಾದರೂ ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಅರುಣ್ ಯೋಗಿರಾಜ್ (Arun Yogiraj ) ಅವರ ಪರಿಶ್ರಮಕ್ಕೆ ತಕ್ಕಂತೆ ಅದ್ಭುತವಾದ ಸುಂದರ ಮೂರ್ತಿ ಮೂಡಿಬಂದಿತು.

ಅರುಣ್ ಕೈಯಲ್ಲಿ ಅರಳಿದ ಶಿಲ್ಪಕಲೆಗಳು:
ಅರುಣ್ ಯೋಗಿರಾಜ್ (Arun Yogiraj ) ಅವರು ಕೇದಾರನಾಥಕ್ಕೆ ಮಾತ್ರವಲ್ಲದೆ ರಾಜ್ಯದ ಮೂಲೆಮೂಲೆಗಳಲ್ಲಿಯೂ ಇವರ ಶಿಲ್ಪಕಲೆ ಹೆಸರು ಮಾಡಿದೆ. ಮೈಸೂರು:ರಾಮಕೃಷ್ಣ ಪರಮಹಂಸರ ಅಮೃತಶಿಲೆ ಮೂರ್ತಿ. ಆರು ಅಡಿ ಎತ್ತರದ ನಂದಿಯ ಏಕಶಿಲಾ ಪ್ರತಿಮೆ.
ಆರು ಅಡಿ ಎತ್ತರದ ಬನಶಂಕರಿ ದೇವಿ ಮೂರ್ತಿ, ಐದು ಅಡಿ ಎತ್ತರದ ಶಿವಕುಮಾರ ಸ್ವಾಮೀಜಿಗಳ ಪ್ರತಿಮೆ,
ಡಾ.ಬಿಆರ್ ಅಂಬೇಡ್ಕರ್ ಅವರ ಬಿಳಿ ಅಮೃತಶಿಲೆ ಪ್ರತಿಮೆ, ಮೈಸೂರನಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅವರ 14.5 ಅಡಿಯ ಬಿಳಿ ಅಮೃತಶಿಲೆಯ ಪ್ರತಿಮೆ,ದೇವಸ್ಥಾನದ ಮಂಟಪಗಳು, ಬಸದಿಗಳು, ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೋಪ್ ಸ್ಟೋನ್ ಬಳಸಿ ಶಿಲ್ಪಕಲೆ, ಗರುಡ ದೇವ ಪ್ರತಿಮೆ, ಕೆಆರ್ ನಗರದಲ್ಲಿ 7 ಅಡಿ ಎತ್ತರದ ಯೋಗನರಸಿಂಹಸ್ವಾಮಿ ಪ್ರತಿಮೆ, ಆಂಧ್ರಪ್ರದೇಶದಲ್ಲಿ 7ಅಡಿ ಎತ್ತರದ ಮಹೇಶ್ವರಿ ದೇವಿಯ ಪ್ರತಿಮೆ, ಸರ್ ಎಂ ವಿಶ್ವೇಶ್ವರಯ್ಯ ಅವರ ಪ್ರತಿಮೆಗಳು, ಡಾ.ಬಿಆರ್ ಅಂಬೇಡ್ಕರ್ ಪ್ರತಿಮೆಗಳು, ಪಂಚಮುಖಿ ಗಣಪತಿ ದೇವರ ಪ್ರತಿಮೆ, ಸಾಬೂನು ಕಲ್ಲಿನಲ್ಲಿ 7 ಅಡಿ ಎತ್ತರದ ಭಗವಾನ್ ಮಹಾವಿಷ್ಣುವಿನ ಪ್ರತಿಮೆ,ಬುದ್ಧನ ಪ್ರತಿಮೆ,ಸಾಬೂನು ಕಲ್ಲಿನಲ್ಲಿ 6 ಅಡಿ ಎತ್ತರದ ಶಿವನ ಪ್ರತಿಮೆ,ಭಾರತೀಯ ಗೂಳಿಯ ಏಕಶಿಲೆಯ ಪ್ರತಿಮೆ ಸಾಬೂನು ಕಲ್ಲಿನ ನಂದಿ,ಸಾಬೂನು ಕಲ್ಲಿನಲ್ಲಿ 6 ಅಡಿ ಎತ್ತರದ ಶಿವನ ಪ್ರತಿಮೆ,ಸಾಬೂನು ಕಲ್ಲಿನಲ್ಲಿ 5 ಅಡಿ ಎತ್ತರದ ಸ್ವಾಮಿ ಶಿವಬಾಲ ಯೋಗಿಗಳ ಪ್ರತಿಮೆ ಹೀಗೆ ಹಲವಾರು ಪ್ರತಿಮೆಗಳು ಇವರ ಕೈಯಿಂದ ಮೂಡಿಬಂದಿದೆ
ಅರುಣ್ ಅವರಿಗೆ ಸಂದ ಪ್ರಶಸ್ತಿಗಳು:
2014ರಲ್ಲಿ ಕೇಂದ್ರ ಸರ್ಕಾರದಿಂದ ಯುವ ಪ್ರತಿಭೆ ಪ್ರಶಸ್ತಿ, ಮೈಸೂರು ಜಿಲ್ಲಾ ಪ್ರಾಧಿಕಾರ ಮತ್ತು ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ಶಿಲ್ಪಕಲಾ ಸಂಘದಿಂದ ಶಿಲ್ಪ ಕೌಸ್ತುಭ ಪ್ರಶಸ್ತಿ,ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸನ್ಮಾನ,ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಅವರು ಅರುಣ್ ಯೋಗಿರಾಜ್ ಅವರ ಕೆಲಸದ ಸ್ಥಳಕ್ಕೆ ಭೇಟಿ ನೀಡಿ ಶ್ಲಾಘನೆ, ಮೈಸೂರು ರಾಜಮನೆತನದಿಂದ ಸನ್ಮಾನ ಗೌರವ ಸಮರ್ಪಣೆ, ಮೈಸೂರು ಜಿಲ್ಲಾ ಕ್ರೀಡಾ ಅಕಾಡೆಮಿಯಿಂದ ಸನ್ಮಾನ,ಅಮರ ಶಿಲ್ಪಿ ಜಕಣಾಚಾರಿ ಟ್ರಸ್ಟ್ ವತಿಯಿಂದ ಸನ್ಮಾನ, ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಿಂದ ಸನ್ಮಾನ.

ಸಾಧನೆ ನೋಡಲು ತಂದೆ ಇಲ್ಲ:
ಶಂಕರಾಚಾರ್ಯರ ಮೂರ್ತಿ ಪೂರ್ಣವಾಗುವವರೆಗೆ ಜೊತೆಯಲ್ಲಿದ್ದ ತಂದೆ ಕಳೆದ ಸೆಪ್ಟೆಂಬರ್ ನಲ್ಲಿ ಲಲಿತ ಮಹಲ್ ಬಳಿ ನಡೆದ ಅಪಘಾತದಲ್ಲಿ ಕೊನೆ ಉಸಿರೆಳೆದರು.ಒಟ್ಟಾರೆ ಕೇದಾರನಾಥದಲ್ಲಿ ಪೂರ್ತಿ ಅನಾವರಣಗೊಂಡಿರುವುದು ಶಿಲ್ಲಿ ಅರುಣ್ ಯೋಗಿರಾಜ್ (Arun Yogiraj ) ಅವರಿಂದ ಮೈಸೂರಿಗೆ ಕೀರ್ತಿ ತಂದಿದೆ.
ಯೋಗಿರಾಜ್ (Arun Yogiraj ) ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ್ದರು ವಿಶ್ವವಿಖ್ಯಾತಿ ಗಳಿಸಿದ್ದರು ಅರುಣ್ ಮಾತ್ರ ಸರಳ ಸಜ್ಜನಿಕೆಯನ್ನು ಮರೆತಿಲ್ಲ. ಈಗಲೂ ಅಷ್ಟೇ ಸರಳವಾಗಿದ್ದಾರೆ. ಮಿತಭಾಷಿಯಾಗಿರುವ ಅರುಣ್ ಇದೆಲ್ಲಾ ದೈವ ಇಚ್ಚೇ ಅಂತಾರೆ. ಒಟ್ಟಾರೆ ದೇಶದ ಗಮನ ಸೆಳೆದು ಸಾಂಸ್ಕೃತಿಕ ನಗರಿ ಮೈಸೂರಿಗೆ ಕೀರ್ತಿ ತಂದ ಅರುಣ್ ಯೋಗಿರಾಜ್ (Arun Yogiraj ) Prime Minister Narendra Modi ಅವರಿಂದ ನಾಡಿಗೆ ಕೀರ್ತಿ ತರುವಂತಹ ಮತ್ತಷ್ಟು ಕಲಾಕೃತಿಗಳು ಮೂಡಲಿ ವಿಶ್ವದಾದ್ಯಂತ ಸಾಂಸ್ಕೃತಿಕ ಕೀರ್ತಿ ಪತಾಕೆ ಹಾರಲಿ ಅನ್ನೋದೆ ನಮ್ಮ ಆಶಯ.