ಸ್ಯಾಂಡಲ್ವುಡ್ ಕೃಷ್ಣ ಎಂದೇ ಪ್ರಸಿದ್ಧವಾಗಿರುವ ಅಜಯ್ ರಾವ್ ಹಾಗೂ ರಚಿತಾ ರಾಮ್ ನಟ ನಟಿಸಿರುವ ಲವ್ ಯೂ ರಚ್ಚು ಚಿತ್ರದ ‘ಮುದ್ದು ನೀನು’ ವಿಡಿಯೋ ಸಾಂಗ್ ನವೆಂಬರ್ 9ರಂದು ಬಿಡುಗಡೆಯಾಗಲಿದೆ.
ಚಿತ್ರದ ರೋಮ್ಯಾಂಟಿಕ್ ಸಾಂಗ್ ನ್ನು ಸಿಡ್ ಶ್ರೀರಾಮ್ ಹಾಡಿದ್ದಾರೆ. ಶೂಟಿಂಗ್ ವೇಳೆಯಿಂದ ಸದ್ದು ಮಾಡಿದ ಚಿತ್ರದ ವಿಡಿಯೋ ಸಾಂಗ್ ಬಿಡುಗಡೆಗೆ ಚಿತ್ರ ಪ್ರೇಮಿಗಳು ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ: ಮೈಸೂರು ಶಿಲ್ಪಿಯಿಂದ ಪುನರ್ ನಿರ್ಮಾಣಗೊಂಡ ಶಂಕರಾಚಾರ್ಯರ ಪ್ರತಿಮೆ ಉದ್ಘಾಟಿಸಿದ ಪ್ರಧಾನಿ ಮೋದಿ
ಗುರು ದೇಶಪಾಂಡೆ ಚಿತ್ರಕ್ಕೆ ಶಂಕರ್ ನಿರ್ದೇಶನ:
ಜಿ ಸಿನಿಮಾ ಬ್ಯಾನರ್ ಅಡಿಯಲ್ಲಿ ಲವ್ ಯು ರಚ್ಚು ಸಿನಿಮಾ ಮೂಡಿಬರುತ್ತಿದೆ. ಜನವರಿ 24ರಂದು ಅಜಯ್ ರಾವ್ ರವರ ಜನ್ಮ ದಿನದಂದು ಚಿತ್ರದ ಮುಹೂರ್ತ ಕೂಡ ನೆರವೇರಿತ್ತು.ಶಂಕರ್ ನಿರ್ದೇಶನದ ಲವ್ ಯು ರಚ್ಚು ಚಿತ್ರವನ್ನು ಗುರು ದೇಶಪಾಂಡೆ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ.
ಈ ಹಿಂದೆ ಲವ್ ಯೂ ರಚ್ಚು ಚಿತ್ರದ ಶೂಟಿಂಗ್ ವೇಳೆ ಫೈಟ್ ಮಾಸ್ಟರ್ ಸ್ಟಂಟ್ ಮಾಡುವಾಗ ವಿದ್ಯುತ್ ತಗುಲಿ ಸಾವನ್ನಪ್ಪುವ ಮೂಲಕ ವಿವಾದ ಉಂಟಾಗಿತ್ತು.
ಬಿಡದಿ ಬಳಿಯ ಜೋಗನಪಾಳ್ಯ ಗ್ರಾಮದಲ್ಲಿ ‘ಲವ್ ಯೂ ರಚ್ಚು’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ವಿದ್ಯುತ್ ಅವಘಡ ಸಂಭವಿಸಿ ಫೈಟರ್ ವಿವೇಕ್ ಮೃತಪಟ್ಟಿದ್ದರು. ಈ ವೇಳೆ ಮತ್ತೊಬ್ಬ ಸಾಹಸ ಕಲಾವಿದ ರಂಜಿತ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ಎಫ್‌ಐಆರ್ ಹಾಕಲಾಗಿತ್ತು.

ಜಾಮೀನು ಪಡೆದ ಸಾಹಸ ನಿರ್ದೇಶಕ:
ಫೈಟರ್ ವಿವೇಕ್ ಅವರು ಮೃತಪಟ್ಟ ಹಿನ್ನೆಲೆಯಲ್ಲಿ
ಚಿತ್ರದ ನಿರ್ದೇಶಕ ಶಂಕರ್, ಕ್ರೇನ್ ಆಪರೇಟರ್ ಮಹಾದೇವ್, ಸಾಹಸ ನಿರ್ದೇಶಕ ವಿನೋದ್ ನ್ಯಾಯಾಂಗ ಬಂಧನದಲ್ಲಿದ್ದರು. ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು. ಪ್ರೊಡಕ್ಷನ್ ಮ್ಯಾನೇಜರ್ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ನಾಪತ್ತೆಯಾಗಿ ನಿರೀಕ್ಷಣಾ ಜಾಮೀನು ಪಡೆದು ಬಂಧನದಿಂದ ತಪ್ಪಿಸಿಕೊಂಡಿದ್ದರು.
ಸದ್ಯ ಚಿತ್ರದ ವಿಡಿಯೋ ಸಾಂಗ್ ನ.9 ರಂದು ಬಿಡುಗಡೆಯಾಗುತ್ತಿರುವುದು ವಿಶೇಷ. ಹೊಸದಾಗಿ ಮದುವೆಯಾದ ಜೋಡಿಯ ಪ್ರೀತಿ ಪ್ರೇಮದ ಕಥೆ ವಿಚಿತ್ರದಲ್ಲಿ ಈ ಸಿನಿಮಾಕ್ಕಾಗಿ ರೋಮ್ಯಾಂಟಿಕ್ ಆಗಿ ಮಾಡಿರುವ ಫೋಟೋಶೂಟ್ ಗಳು ಕೂಡ ಫೇಮಸ್ ಆಗಿತ್ತು.ವಿವಾದದ ಹಿನ್ನೆಲೆಯಲ್ಲಿ ಚಿತ್ರವು ಬಿಡುಗಡೆಯ ನಂತರ ಪ್ರೇಕ್ಷಕರ ಮನ ಗೆಲ್ಲುವುದೋ ಇಲ್ಲವೋ ಎಂದು ಕಾದು ನೋಡಬೇಕಿದೆ.