ಕಾರವಾರ:(ನ.6) ಕಾರವಾರದ (Karwar) ಲೈಟ್ ಅಸ್ಬಲಿ ಸಮುದ್ರದಲ್ಲಿ ತಡರಾತ್ರಿ ಬೆಂಕಿ ಅವಘಡಕ್ಕೆ ಒಳಗಾಗಿ ದೋಣಿಯಲ್ಲಿದ್ದ ಏಳು ಮಂದಿ ಮೀನುಗಾರರನ್ನು ಕೋಸ್ಟ್ ಗಾರ್ಡ್(Coast Guard) ಸಿಬ್ಬಂದಿಗಳು ರಕ್ಷಿಸಿದ್ದಾರೆ.ದೋಣಿಯು ಲೈಟ್ ಹೌಸ್ ನಡುಗಡ್ಡೆ ಇಂದ 10 ನಾಟಿಕಲ್ ಮೈಲು ಅಂದರೆ ಸುಮಾರು 19 ಕಿಮೀ ದೂರದಲ್ಲಿತ್ತು.
ಶಾರ್ಟ್ ಸಕ್ಯೂಟ್‌ನಿಂದ ಬೆಂಕಿ
ಮೀನುಗಾರಿಕೆಗಾಗಿ ತೆರಳಿದ್ದ ಬೋಟಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅರ್ಧ ಸುಟ್ಟುಹೋಗಿ ಕರಕಲಾಗಿದೆ.ಮಲ್ಪೆ ಮೂಲದ ವರದವಿನಯಕ ಎಂಬ ಬೋಟಿನಿಂದ ರೂಮ್ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿತ್ತು.
ನೋಡುನೋಡುತ್ತಿದ್ದಂತೆ ಬೆಂಕಿಯ ಜ್ವಾಲೆ ಹೆಚ್ಚಾದ ಪರಿಣಾಮ ತಕ್ಷಣ ಸಮೀಪದಲ್ಲಿದ್ದ ವರದರಾಜ ಬೋಟ್ (Boat) ನವರು ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ಉಡುಪಿ (udupi) ಜಿಲ್ಲೆಯ ಮಲ್ಪೆಯ ವರದ ಹೆಸರಿನ ದೋಣಿಯಲ್ಲಿ (ನೋಂದಣಿ ಸಂಖ್ಯೆ IND KA02 MM 4495) ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿತ್ತು. ಇದನ್ನೂ ಓದಿ: ಕ್ರೂಸ್ ಡ್ರಗ್ ಕೇಸ್: ವಾಂಖೆಡೆ ಆರ್ಯನ್ ಪ್ರಕರಣದ ಮೇಲ್ವಿಚಾರಣೆ ಮಾಡುವುದಿಲ್ಲ, ಎನ್‌ಸಿಬಿ ಎಸ್‌ಐಟಿ ರಚನೆ

ಲಕ್ಷಾಂತರ ರೂಪಾಯಿ ಹಾನಿ:
ಬೋಟ್ ನಲ್ಲಿ ಬೆಂಕಿ ಅವಘಡದಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಎರಡು ಬೋಟಿನ ಮೀನುಗಾರರು ಬೆಂಕಿಯನ್ನು ನಂದಿಸಿದರೂ ಪೂರ್ತಿ ಪ್ರಮಾಣದಲ್ಲಿ ಬೋಟನ್ನು ಉಳಿಸಿಕೊಳ್ಳಲಾಗಲಿಲ್ಲ. ಅವಘಡದ ಬಗ್ಗೆ ಮಾಹಿತಿ ಪಡೆದ ನವ ಮಂಗಳೂರಿನ ಕೋಸ್ಟ್ ಗಾರ್ಡ್ ಅಧಿಕಾರಿಗಳು ತಕ್ಷಣವೇ C 155 ಗಸ್ತು ನೋಕಿಯಾ ಎಲ್ಲಿದ್ದಾರೆ ಕ್ಷಣ ಸಿಬ್ಬಂದಿಗಳನ್ನು ಕಾರವಾರಕ್ಕೆ(karwar) ಕಳುಹಿಸಿದರು. ಇದನ್ನೂ ಓದಿ: ಪಟಾಕಿ ಸ್ಫೋಟದಿಂದ ಮೃತಪಟ್ಟ ತಂದೆ-ಮಗ
ಬೆಂಕಿ ನಂದಿಸುವಲ್ಲಿ ಯಶಸ್ವಿ:
ದೋಣಿಯಲ್ಲಿದ್ದ ಮೀನುಗಾರರನ್ನು ಸಮೀಪದಲ್ಲಿದ್ದ ಮತ್ತೊಂದು ಮೀನುಗಾರಿಕಾ ದೋಣಿ ‘ ವಜ್ರ ‘ (IND KA 02 MM 4705) ಕ್ಕೆ. ರವಾನಿಸಿದರು.ಬಳಿಕ ಬೆಂಕಿಯನ್ನು ನಂದಿಸಿ ರಕ್ಷಣಾ ಕಾರ್ಯದಲ್ಲಿ ಇತರ ಮೀನುಗಾರರು ಸಹ ಕೈಜೋಡಿಸಿದರು. ಎಲ್ಲಾ ಮೀನುಗಾರರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ರಾಷ್ಟ್ರಮಟ್ಟದ ಫೆನ್ಸಿಂಗ್ ಚಾಂಪಿಯನ್‌ಷಿಪ್‌ಗೆ ಕೇಚೆಟ್ಟೀರ ವಿಜಯ್ ದೇವಯ್ಯ ಆಯ್ಕೆ

ಹವಾಮಾನದ ವೈಪರೀತ್ಯದ ಹಿನ್ನೆಲೆಯಲ್ಲಿ ಬೆಂಕಿಯನ್ನು ನಂದಿಸಲು ಒಟ್ಟು 3 ಗಂಟೆಗಳು ಹಿಡಿಯಿತು. ಬೆಂಕಿ ಹೊತ್ತಿಕೊಂಡ ದೋಣಿಯನ್ನು ಕಾರವಾರದ ಬೈತಖೊಲ್ ಮೀನುಗಾರಿಕಾ ಬಂದರಿಗೆ ಎಳೆದು ತರಲಾಗಿದೆ ಹಾಗೂ ಕರಾವಳಿ (karavali) ಭದ್ರತಾ ಪಡೆಯ ಅಧಿಕಾರಿಗಳು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.