ಮಂಗಳೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರನ್ನು ಆಯ್ಕೆ ಮಾಡುವ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಕಲೆಗಳನ್ನು ಮರೆತಿದ್ದಾರೆ ಎಂದು ಸಚಿವ ಯುಟಿ ಖಾದರ್ ಅವರು ಆರೋಪಿಸಿದ್ದಾರೆ.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯು ಟಿ ಖಾದರ್ ಅವರು ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡುವ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಾಂಪ್ರದಾಯಕ ಮತ್ತು ಸಾಂಸ್ಕೃತಿಕ ಕಲೆಯಾದ ಯಕ್ಷಗಾನ ಹಾಗೂ ಭರತನಾಟ್ಯವನ್ನು ಕಡೆಗಣಿಸಿದ್ದಾರೆ.
ಇದನ್ನೂ ಓದಿ: ಮೈಸೂರು ಶಿಲ್ಪಿಯಿಂದ ಪುನರ್ ನಿರ್ಮಾಣಗೊಂಡ ಶಂಕರಾಚಾರ್ಯರ ಪ್ರತಿಮೆ ಉದ್ಘಾಟಿಸಿದ ಪ್ರಧಾನಿ ಮೋದಿ
ದ.ಕ ಜಿಲ್ಲೆಗೆ ಅವಮಾನ:
ಅಧಿಕಾರಕ್ಕೆ ಬರುವಾಗ ಸಂಸ್ಕೃತಿ-ಪರಂಪರೆಗಳ ಬಗ್ಗೆ ಮಾತನಾಡುವ ಇವರು ಈಗ ಎಲ್ಲಿದ್ದಾರೆ? ನಮ್ಮ ಜಿಲ್ಲೆಯವರೇ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದಾರೆ. 100 ವರ್ಷ ಪೂರೈಸಿದ ಬಾಬುರಾಯ ಅವರನ್ನು ಪ್ರಶಸ್ತಿಗೆ ಯಾಕೆ ಪರಿಗಣಿಸಲಿಲ್ಲ. ಜಿಲ್ಲೆಯ ಸಂಸ್ಕೃತಿಯನ್ನು ಕಡೆಗಣಿಸಿ ಜಿಲ್ಲೆಗೆ ಅವಮಾನ ಮಾಡಲಾಗಿದೆ ಎಂದು ಖಾದರ್ ಅವರು ಸರ್ಕಾರವನ್ನು ಟೀಕಿಸಿದ್ದಾರೆ.

ಜನರನ್ನು ಸಮಾಧಾನಿಸಲು ದಿಡೀರ್ ಪೆಟ್ರೋಲ್ ಬೆಲೆ ಇಳಿಕೆ;
ಬಿಜೆಪಿ ರಾಜ್ಯ ಸರ್ಕಾರ ಇಂಧನ ಬೆಲೆಯನ್ನು ಇಳಿಕೆ ಮಾಡಿರುವ ಬಗ್ಗೆ ಪ್ರಶಸ್ತಿ ದವರು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಸ್ವಲ್ಪ ಪ್ರಮಾಣದಲ್ಲಿ ಇಳಿಸಿದ್ದಾರೆ. ಜನರ ಆಕ್ರೋಶಕ್ಕೆ ಮಣಿದು ದೊಣ್ಣೆ ಏಟಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಜನರನ್ನು ಸಮಾಧಾನ ಪಡಿಸಲು ಪ್ರತಿ ಲೀಟರ್ ಪೆಟ್ರೋಲಿಗೆ rs.70 ತಲುಪಲು 20 ವರ್ಷಗಳೇ ಬೇಕಾಯಿತು. ಆದರೆ ಬಿಜೆಪಿ ಸರ್ಕಾರ 7 ವರ್ಷಗಳು ತೆಗೆದುಕೊಂಡಿತ್ತು.
ಗೃಹಬಳಕೆಯ ವಸ್ತುಗಳ ಬೆಲೆ ಕಡಿಮೆಯಾಗಿಲ್ಲ:
ಹಣಕಾಸು ಸಚಿವರು ಇಂಧನ ಬೆಲೆ ಏರಿಕೆ ಮತ್ತು ಇಳಿಕೆಯ ವಿಚಾರದಲ್ಲಿ ಮಾತನಾಡಿ ಇಂದಿನ ಬೆಲೆ ಇಳಿಕೆ ನಮ್ಮ ನಿಯಂತ್ರಣದಲ್ಲಿಲ್ಲ. ಚುನಾವಣೆಯಲ್ಲಿ ಸೋತ ನಂತರ ಬೆಲೆ ಇಳಿಸಿದರು.ಇದು ಆಡಳಿತಾರೂಢ ಬಿಜೆಪಿ ಸರ್ಕಾರದ ಸೋಲು ಹಾಗೂ ಜನಸಾಮಾನ್ಯರ ಗೆಲುವು ಎಂದು ಖಾದರ್ ಅವರು ಹೇಳಿದ್ದಾರೆ. ಇಂಧನ ಬೆಲೆ ಇಳಿಸಿದರು ಆದರೆ ಗೃಹಬಳಕೆಯ ಅಗತ್ಯವಸ್ತುಗಳ ಬೆಲೆ ಇನ್ನೂ ಇಳಿಕೆಯಾಗಿಲ್ಲ. ಈ ವಿಚಾರದಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಅಗತ್ಯವಸ್ತುಗಳ ಬೆಲೆ ಸರ್ಕಾರ ಆದೇಶ ಹೊರಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.