ಇದೇ ನವೆಂಬರ್ 27ರಿಂದ 30ರವರೆಗೆ ಹರಿಯಾಣದ ಪಾನಿಪತ್’ನಲ್ಲಿ ನಡೆಯಲ್ಲಿರುವ ರಾಷ್ಟ್ರೀಯ ಫೆನ್ಸಿಂಗ್ ಚಾಂಪಿಯನ್ ಷಿಪ್ ಹಾಗೂ ಡಿಸೆಂಬರ್ 9ರಿಂದ 12ರವರೆಗೆ ಪಂಜಾಬ್’ನ ಅಮ್ರತ್ ಸರದಲ್ಲಿ ನಡೆಯಲಿರುವ ಹಿರಿಯರ ಫೆನ್ಸಿಂಗ್ ಚಾಂಪಿಯನ್ ಷಿಪ್ ಗೆ ಕೊಡಗು ಮೂಲದ ಕೇಚೆಟ್ಟೀರ ವಿಜಯ್ ಉತ್ತಯ್ಯ ಆಯ್ಕೆಯಾಗುವ ಮೂಲಕ ರಾಷ್ಟ್ರಮಟ್ಟ ಫೆನ್ಸಿಂಗ್ ಕ್ರೀಡೆಯಲ್ಲಿ ಕೊಡಗಿನ ಚಾಪು ಮೂಡಿಸಿದ್ದಾರೆ.
ಅಕ್ಟೋಬರ್ 29 ರಿಂದ ಅಕ್ಟೋಬರ್ 31 ರವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಫೆನ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ಕೇಚೆಟ್ಟೀರ ವಿಜಯ್ ಉತ್ತಯ್ಯ ಒಂದು ಚಿನ್ನ ಹಾಗೂ ಮತ್ತೊಂದು ಬೆಳ್ಳಿ ಪದಕ ಪಡೆಯುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 20 ವರ್ಷದೊಳಗಿನ ವಿಭಾಗದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿಜಯ್ ಹಿರಿಯ ವಿಭಾಗದಲ್ಲಿಯೂ (ಎಪಿ ವಿಭಾಗ) ಭಾಗವಹಿಸಿ ಬೆಳ್ಳಿಯ ಪದಕ ಪಡೆಯುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: ಪುನೀತ್ ಸಮಾಧಿಗೆ ಸೂರ್ಯ ಭೇಟಿ: ಗೆಳೆಯನನ್ನು ಕಳೆದುಕೊಂಡು ಗದ್ಗದಿತರಾದ ತಮಿಳು ನಟ
20 ವರ್ಷದೊಳಗಿನ ವಿಭಾಗದ ಕ್ರೀಡಾಕೂಟ ಇದೇ ತಿಂಗಳು 27ರಿಂದ 30ರವರೆಗೆ ಹರಿಯಾಣ ಸೋನಿಪತ್’ನಲ್ಲಿ ನಡೆಯಲಿದ್ದು, ಹಿರಿಯರ ವಿಭಾಗದ ಕ್ರೀಡಾಕೂಟ ಡಿಸೆಂಬರ್ 9ರಿಂದ 12ರವರೆಗೆ ಪಂಜಾಬ್‌ನ ಅಮ್ರತ್ ಸರದಲ್ಲಿ ನಡೆಲಿದೆ. ಬೆಂಗಳೂರಿನ ಸೆಂಟ್ ಜೋಸೆಫ್ ಕಾನೂನು ಪಧವಿ ಕಾಲೇಜಿನ ಬಿಕಾಂ ಎಲ್‌ಎಲ್‌ಬಿ ವಿಧ್ಯಾರ್ಥಿಯಾದ ವಿಜಯ್ ಉತ್ತಯ್ಯ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಐರನ್ ದೇಬನ್ ಸಿಂಗ್ ಅವರಿಂದ ತರಬೇತಿ ಪಡೆಯುತ್ತಿದ್ದು, ಕೊಡಗು ಜಿಲ್ಲೆಯ ಕಡಗದಾಳು ಮೂಲದ ಕೇಚೆಟ್ಟೀರ ರವಿ ದೇವಯ್ಯ ಹಾಗೂ ರೇಷ್ಮಾ ದೇವಯ್ಯ (ತಾಮನೆ ಬೊಳ್ಳಂಡ) ದಂಪತಿಗಳ ಪುತ್ರರಾಗಿರುತ್ತಾರೆ.