ಕುಶಾಲನಗರ: ಮಾನವೀಯತೆ ಇನ್ನು ಉಳಿದಿರುವುದಕ್ಕೆ ಕುಶಾಲನಗರದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ನಾವು ಅಪ್ಪಿತಪ್ಪಿ ಏನಾದರೂ ಪರ್ಸ್ ಅಥವಾ ಮೊಬೈಲ್ ಅನ್ನು ಬಿಟ್ಟು ಹೋದರೆ ಅದನ್ನು ಹಿಂತಿರುಗಿಸಿ ಕೊಡುವ ಬದಲು ಎತ್ತಿಕೊಂಡು ಹೋಗುವವರೇ ಜಾಸ್ತಿ. ಬಿಟ್ಟಿಯಾಗಿ ವಸ್ತುಗಳು ಸಿಗುವುದಾದರೆ ಜನರು ಬಿಡುತ್ತಾರೆಯೇ? ಆದರೆ ಇನ್ನೊಂದು ಘಟನೆ ಅದಕ್ಕೆ ವಿರುದ್ಧವಾಗಿದೆ.
ಪೆಟ್ರೋಲ್ ಬಂಕ್ ನ ಸೋಮಶೇಖರ್:
ಇಂದು ನಡೆದ ಘಟನೆಯಲ್ಲಿ ಸೋಮಶೇಖರ್ ಎಂಬುವವರು ಪಬ್ಲಿಕ್ ಹೀರೋ ಆಗಿದ್ದಾರೆ. ನಿನ್ನೆ ರಾತ್ರಿ ಸಮಯ 10:00 ಗಂಟೆಗೆ ಸರಿಯಾಗಿ, ಕುಶಾಲನಗರದಲ್ಲಿ ಹಬ್ಬದ ವ್ಯಾಪಾರ ನಡೆಸಿ ಎಲ್ಲರೂ ಮನೆಗೆ ತೆರಳುವ ವಾತಾವರಣ ಸೃಷ್ಟಿಯಾಗಿತ್ತು. ಕುಶಾಲನಗರದ ಹೆದ್ದಾರಿಯಲ್ಲಿರುವ ಟಾಟಾ ಪೆಟ್ರೋಲ್ ಬಂಕ್ ಭಾಗದಲ್ಲಿ , ಒಂದು ಬಸ್ಸು ಬಂದು ನಿಲ್ಲುತ್ತದೆ. ಬಸ್ಸಿನಿಂದ ಇಬ್ಬರು ಮಹಿಳೆಯರು ಇಳಿದು, ಬೇರೆ ಯಾರಿಗೂ ಕಾಯುತ್ತಾ ನಿಂತಿರುತ್ತಾರೆ, ಸ್ವಲ್ಪ ಸಮಯದ ಬಳಿಕ ಒಂದು ಕಾರು ಬಂದು ಅವರನ್ನು ಕರೆದುಕೊಂಡು ಹೋಗುತ್ತಾರೆ. ಇದಿಷ್ಟು ನಡೆದ ಘಟನೆಯಾದರೆ, ಸಮೀಪದಲ್ಲಿದ್ದ ಪಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವ ಸೋಮಶೇಖರ್ ಅವರ ಕಣ್ಣಿಗೆ ಮತ್ತೊಂದು ದೃಶ್ಯ ಕಾಣಿಸುತ್ತದೆ.
ಸೋಮಶೇಖರ್ ಕಣ್ಣಿಗೆ ಬಿದ್ದ ದೃಶ್ಯ ಯಾವುದು?
ಕುಶಾಲನಗರಕ್ಕೆ ಬಂದ ಬಸ್ಸಿನಲ್ಲಿ, ಇಬ್ಬರು ಮಹಿಳೆಯರು ಇಳಿದು ಕಾರಿಗಾಗಿ ಕಾಯುತ್ತ ಇರುತ್ತಾರೆ, ಬಳಿಕ ಬಂದ ಕಾರಿನಲ್ಲಿ ಹತ್ತಿ ಮಹಿಳೆಯರು ಹೋಗುತ್ತಾರೆ. ಪೆಟ್ರೋಲ್ ಬಂಕಿನ ಮುಂಭಾಗದ ಗೇಟನ್ನು ಹಾಕುವ ಸಮಯದಲ್ಲಿ ಅಲ್ಲಿ ಒಂದು ಕಪ್ಪು ಬಣ್ಣದ ಸೂಟ್ ಕೇಸನ್ನು ಸೋಮಶೇಖರ್ ಅವರು ನೋಡುತ್ತಾರೆ. ಕೆಲಕಾಲ ಸೂಟ್ ಕೇಸನ್ನು ನೋಡಿ ದಿಗ್ಭ್ರಾಂತರಾದ ಸೋಮಶೇಖರ್ ಅವರು, ಏನು ಮಾಡದ್ ಎಂದು ತೋಚದೆ, ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಇದನ್ನೂ ಓದಿ: ನೈಟ್ ಕರ್ಫ್ಯೂ ಹಿಂಪಡೆದ ರಾಜ್ಯಸರ್ಕಾರ
ಅನುಮಾನದಿಂದ ಆಗಮಿಸಿದ ಪೊಲೀಸರು:
ಸಾಮಾನ್ಯವಾಗಿ ಯಾರಾದರೂ ಸೂಟ್ಕೇಸ್ ಬಿಟ್ಟು ಹೋದರೆ ತಕ್ಷಣ ಹೊಳೆಯುವುದೇ ”bomb” ಒಳಗೆ ನಾದರೂ ಸ್ಫೋಟಕ ವಸ್ತುಗಳು ಇರುತ್ತವೆ ಎಂಬ ಭಯ ಎಲ್ಲರನ್ನೂ ಕಾಡುತ್ತದೆ. ಅದೇ ರೀತಿ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೂ ಕೆಲಕಾಲ ಸಂದೇಹ ವ್ಯಕ್ತವಾಗಿತ್ತು. ಡಿವೈಎಸ್ ಪಿ.ಶೈಲೇಂದ್ರ ಮತ್ತು ಸಿ.ಐ ಮಹೇಶ್ ಹಾಗೂ ಸ್ಥಳಕ್ಕೆ.ಸಹಾಯಕ ಸಬ್ ಇನ್ಸ್‌ಪೆಕ್ಟರ್ .ಮಂಜುನಾಥ್. ಎಸ್.ಎನ್.ಜಯಪ್ರಕಾಶ್. ಬಿಜ್ಜಳ ಅವರು ಸೂಟ್ಕೇಸ್ ಅನ್ನು ಸುರಕ್ಷಿತವಾಗಿ ಪೊಲೀಸ್ ಠಾಣೆಗೆ ತರುತ್ತಾರೆ.
ಸೂಟ್ಕೇಸ್ ನಲ್ಲಿ ಕಾದಿತ್ತು ಶಾಕ್!!
ಎಲ್ಲರ ಸಮ್ಮುಖದಲ್ಲಿ ಸೂಟ್ಕೇಸ್ ಅನ್ನು ಓಪನ್ ಮಾಡಿದಾಗ ಕಾದಿತ್ತು ಶಾಕ್!! ಕಪ್ಪು ಬಣ್ಣದ ಸೂಟ್ ಕೇಸ್ ನಲ್ಲಿ ಬೆಲೆಬಾಳುವ ಚಿನ್ನ ಹಾಗೂ ದೊಡ್ಡ ಮೊತ್ತದ ಹಣವಿತ್ತು. ಕೆಲಕಾಲ ಭಯದ ವಾತಾವರಣ ಸೃಷ್ಟಿಯಾಗಿದ್ದ ವೇಳೆ ಸೂಟ್ಕೇಸ್ ಓಪನ್ ಮಾಡಿದ ತಕ್ಷಣ ಗಾಬರಿಯಾಗಿದ್ದ ಎಲ್ಲರಿಗೂ ಸಮಾಧಾನವೆನಿಸಿತು. ಸೂಟ್ಕೇಸ್ ನಲ್ಲಿ ದೊರೆತ ದೂರವಾಣಿ ಸಂಖ್ಯೆಗೆ ಕರೆ ಮಾಡಿ, ನಡೆದ ವಿಷಯವನ್ನೆಲ್ಲ ತಿಳಿಸಿದರು. ಠಾಣೆಗೆ ಆಗಮಿಸಿದ ವಾರಸುದಾರರು ವಿಷಯ ತಿಳಿದ ಬಳಿಕ ಪೊಲೀಸ್ ಠಾಣೆಗೆ ಆಗಮಿಸಿದ ವಾರಸುದಾರರು, ಸೂಟ್ಕೇಸ್ ಮರೆತು ಹೋಗಿರುವುದಾಗಿ ಮನದಲ್ಲೇ ಕಳವಳವನ್ನು ವ್ಯಕ್ತಪಡಿಸಿದರು. ಸೂಟ್ಕೇಸ್ ನೋಡಿ ಸಂತೋಷಪಟ್ಟ ವಾರಸುದಾರರಿಗೆ, ಪೋಲೀಸಿನವರು ಎಚ್ಚರಿಕೆಯನ್ನು ನೀಡಿ ಬೆಲೆಬಾಳುವ ಸೂಟ್ ಕೇಸನ್ನು ಹಿಂದಿರುಗಿಸಿದರು.
ಪಬ್ಲಿಕ್ ಹೀರೋ ಆದ ಸೋಮಶೇಖರ್!
ಮೇಲೆ ಹೇಳಿರುವ ಹಾಗೆ ಮಾನವೀಯತೆ ಉಳಿದಿರುವುದು ನಿಜವಾಗಿದೆ. ಇನ್ನು ಸೋಮಶೇಖರ್ ಅವರ ಬಗ್ಗೆ ಹೇಳುವುದಾದರೆ, ಸೋಮಶೇಖರ್ ಅವರು ಅತ್ಯಂತ ಕಡುಬಡತನದಿಂದ ಬೆಳೆದು ಬಂದವರು, ಕೆಲಸದಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆ ಇರುವ ಸಾಮಾನ್ಯ ವ್ಯಕ್ತಿ. ಬೇರೆಯವರ ವಸ್ತುವಿಗೆ ಆಸೆಪಡದೆ ಪ್ರಾಮಾಣಿಕವಾಗಿ ಹಿಂತಿರುಗಿಸಿದ ಪ್ರಶಂಸೆ ಸೋಮಶೇಖರ್ ಅವರಿಗೆ ಸಂದಿದೆ. ಪೊಲೀಸರು ಸೋಮಶೇಖರ್ ಅವರನ್ನು ಅಭಿನಂದಿಸಿ ಬಹುಮಾನವನ್ನು ಸಹ ನೀಡಿದ್ದಾರೆ ಸಾರ್ವಜನಿಕರು ತಮ್ಮ ಬೆಲೆಬಾಳುವ ವಸ್ತುಗಳನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು ಹಾಗೂ ಎಲ್ಲೆಂದರಲ್ಲಿ ಮರೆತು ಹೋಗುವುದು ಸಾಮಾನ್ಯ ಆದರೆ ಎಲ್ಲಾ ಕಡೆಯಲ್ಲೂ ಸೋಮಶೇಖರ್ ಅಂತಹ ವ್ಯಕ್ತಿ ಇರುವುದಿಲ್ಲ.