ಬೆಂಗಳೂರು: ತಮಿಳಿನ ಖ್ಯಾತ ನಟ ಸೂರ್ಯ ( Tamil Actor Surya ), ಇಂದು ನಟ ಪುನೀತ್ ರಾಜ್ ಕುಮಾರ್ ( Puneet Rajkumar ) ಸಮಾಧಿ ಸ್ಥಳ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿದರು. ರಾಜಕುಮಾರನನ್ನು ನೆನೆದು ಸಮಾಧಿ ಬಳಿಯಲ್ಲಿ ಕಣ್ಣೀರಿಟ್ಟರು.
ತಮಿಳಿನ ಖ್ಯಾತ ನಟರಾಗಿರುವ ಸೂರ್ಯ ತಮ್ಮ ಸ್ನೇಹಿತನನ್ನು ಕಳೆದುಕೊಂಡು ಭಾರದ ಹೃದಯದಲ್ಲಿ ಸಮಾಧಿಗೆ ಬೇಟಿ ನೀಡಿದರು.

ನಟ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಇಂದಿಗೆ ಎಂಟು ದಿನಗಳಾಗುತ್ತಿವೆ. ಅಪ್ಪು ನಮ್ಮನ್ನು ಅಗಲಿದ್ದರೂ, ಅವರ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿದ್ದಾರೆ. ಇಂತಹ ನಟ ಪುನೀತ್ ರಾಜ್ ಕುಮಾರ್ ಸಮಾಧಿ ಸ್ಥಳ ಕಂಠೀರವ ಸ್ಟುಡಿಯೋಗೆ ತಮಿಳು ನಟ ಸೂರ್ಯ ಭೇಟಿ ನೀಡಿ, ಸಮಾಧಿ ದರ್ಶನ ಪಡೆದರು.
ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪುನೀತ್ ಅಗಲಿಕೆ ನೋವನ್ನು ಸಹಿಸೋದಕ್ಕೆ ಆಗ್ತಾ ಇಲ್ಲ. ಅಣ್ಣಾವ್ರ ಕುಟುಂಬದೊಂದಿಗೆ ನಮ್ಮ ಒಡನಾಟವಿತ್ತು. ಅಪ್ಪು ಅಗಲಿಕೆ ನೋವಿನಿಂದ ನಮ್ಮ ಕುಟುಂಬ ಇನ್ನೂ ಹೊರಬಂದಿಲ್ಲ. ಸದಾ ನಗುನಗುತ್ತಲೇ ಇದ್ದಂತ ಅಪ್ಪು ಮುಖ ರಾಚಿ ಕಟ್ಟಿದಂತೆ ಇದೆ ಎಂದು ಕಣ್ಣೀರಿಟ್ಟರು.
ಇದನ್ನೂ ಓದಿ: ನಿರೀಕ್ಷೆಗೂ ಮೀರಿದ ಪಟಾಕಿ ಖರೀದಿ: ಪಟಾಕಿ ಮಾರುಕಟ್ಟೆಯಲ್ಲಿ ಚೇತರಿಕೆ
ಹಾಗೆಯೇ ಸದಾಶಿವನಗರದಲ್ಲಿರುವ ಪುನೀತ್ ರಾಜಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಸೂರ್ಯ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಭಾಷೆ, ನಾಡು, ಕ್ಷೇತ್ರಗಳ ಹೊರತಾಗಿ, ಚಿತ್ರರಂಗವನ್ನೂ ಮೀರಿ ಎಲ್ಲ ಕ್ಷೇತ್ರಗಳ ಗಣ್ಯರು ಪುನೀತ್ ರಾಜಕುಮಾರ್ ಮರಣಕ್ಕೆ ಕಂಬನಿ ಮಿಡಿಯುತ್ತಿದ್ದಾರೆ. ಸಮಾಧಿಗೆ ಭೇಟಿ ನೀಡುತ್ತಿದ್ದಾರೆ. ಇದು ಪುನೀತ್ ರವರ ಸ್ನೇಹಬಳಗದ ವ್ಯಾಪ್ತಿ, ಸಹೃದಯತೆ ಹಾಗೂ ಅವರ ಸಾಮಾಜಿಕ ಕಳಕಳಿಗೆ ಕೈಗನ್ನಡಿಯಾಗಿದೆ.