ಮಂಗಳೂರು: ನೀವೇನಾದರೂ ಸಾಕು ಪ್ರಾಣಿಗಳನ್ನು ಕೊಂಡು ಕೊಳ್ಳಬೇಕಾದರೆ ಎಚ್ಚರ ವಹಿಸುವುದು ಅಗತ್ಯ! ನಗರದಲ್ಲಿ ಸಾಕು ಪ್ರಾಣಿಗಳ(duplicate pet shop) ನಕಲಿ ಪೆಟ್ ಶಾಪ್ ತೆರೆದಿದ್ದು, ಸಾಕು ಪ್ರಾಣಿ ಪ್ರಿಯರೇ ಇವರ ಟಾರ್ಗೆಟ್ ಆಗಿದೆ.
ಮಂಗಳೂರಿನಲ್ಲಿ (Breed)ಜಾತಿ ನಾಯಿಗಳ ಸಾಕುಪ್ರಾಣಿ ಹೆಚ್ಚಾಗುತ್ತಿದ್ದು ಇದನ್ನೇ ಉಪಾಯ ಮಾಡಿಕೊಂಡು ಮಂಗಳೂರಿನಲ್ಲಿ ನಕಲಿ ಪೆಟ್ ಶಾಪ್ಗಳು ನಕಲಿ ವಿದೇಶಿ ತಳಿಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿದೆ.
(Verify before you Buy)
ಕೊಂಡುಕೊಳ್ಳುವ ಮುನ್ನ ಪರೀಕ್ಷಿಸಿ:
ಸಾಕು ಪ್ರಾಣಿ,ಪಕ್ಷಿಗಳನ್ನು ಕೊಂಡುಕೊಳ್ಳುವ ಮುನ್ನ ಗ್ರಾಹಕರು(Veterinary Doctor) ಪಶು ವೈದ್ಯರ ಬಳಿ ಮಾಹಿತಿ ತಿಳಿದುಕೊಳ್ಳುವುದು ಒಳ್ಳೆಯದು. ನಾನಾ ರೀತಿಯ ವಿದೇಶಿ ತಳಿಗಳು ಇರುವುದರಿಂದ ಒಂದಕ್ಕೊಂದು ವ್ಯತ್ಯಾಸ ಸಿಗುವುದಿಲ್ಲ ,(dogs ear, Breed,tail,color) ನಾಯಿಗಳ ತಳಿ,ಕಿವಿ, ಬಾಲ, ಬಣ್ಣ ಹಾಗೂ ನಾಯಿಗಳ ತಂದೆ ತಾಯಿ ಬಗ್ಗೆ ತಿಳಿದುಕೊಳ್ಳುವುದು ಅಷ್ಟೆ ಮುಖ್ಯ.

ಆನ್ಲೈನ್ ನಲ್ಲಿ ವ್ಯವಹರಿಸಬೇಡಿ:
ಪ್ರಾಣಿ ಪ್ರಿಯರು, (online sale) ಆನ್ಲೈನ್ ನಲ್ಲಿ ಮಾರಾಟ ಆಗುವ ಪ್ರಾಣಿಗಳು, ಪಕ್ಷಿಗಳನ್ನು ಖರೀದಿ ಮಾಡುವಾಗ ಎಚ್ಚರ ವಹಿಸಿ, ಆನ್ಲೈನ್ ನಲ್ಲಿ ಮೋಸ ಮಾಡುವವರು ಹೆಚ್ಚಾಗಿ ಇರುತ್ತಾರೆ. ದುಡ್ಡು ಕೊಟ್ಟು, ಪ್ರಾಣಿಗಳು ಸಿಗದೆ ಮೋಸ ಹೋಗಿರುವ ಘಟನೆಗಳು ನಡೆದಿವೆ.
ಪ್ರಾಣಿಗಳ ಬಗ್ಗೆ ಗೊತ್ತಿರುವ ಹಾಗೂ ಖರೀದಿಗೂ ಮುನ್ನ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.
ವಿದೇಶಿ ನಾಯಿಗಳು, ವಿವಿಧ ಜಾತಿಯ ಬೆಕ್ಕುಗಳು, ಹಕ್ಕಿಗಳು ಸೇರಿದಂತೆ ನಾನಾ ಜಾತಿಯ ಸಾಕುಪ್ರಾಣಿಗಳನ್ನು(mix crossing) ನಕಲು ಮಾಡಿ ಮಾರಾಟ ಮಾಡುತ್ತಿದ್ದಾರೆ ಎಂದು ನಗರದ ಕದ್ರಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಮಂಗಳೂರಿನಲ್ಲಿ ಸಾಕುಪ್ರಾಣಿ ಪ್ರಿಯರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಕುಪ್ರಾಣಿಗಳನ್ನು ಖರೀದಿಸಲು ನಗರದ ಪೆಟ್ ಶಾಪ್ ಗಳಿಗೆ ಭೇಟಿ ನೀಡುವುದು ಕೂಡ ಹೆಚ್ಚಾಗಿದೆ.
ಇದನ್ನೂ ಓದಿ: ರಾಷ್ಟ್ರಮಟ್ಟದ ಫೆನ್ಸಿಂಗ್ ಚಾಂಪಿಯನ್‌ಷಿಪ್‌ಗೆ ಕೇಚೆಟ್ಟೀರ ವಿಜಯ್ ದೇವಯ್ಯ ಆಯ್ಕೆ
ನಾನಾ ಜಾತಿಯ ತಳಿಗಳು ಮಾರಾಟ :
(Labrador) ಲ್ಯಾಬ್ರಡಾರ್,(Pug) ಪಗ್,(German shepherd) ಜರ್ಮನ್ ಶಫರ್ಡ್, (daburman)ಡಾಬರ್ ಮನ್, (rottweiler)ರೊಟ್ವೀಲರ್, (shitlu)ಶಿಟ್ಜೂ,(pomarian) ಪಮೋರಿಯನ್, (golden retriever) ಗೋಲ್ಡನ್ ರಿಟ್ರೈವರ್ ಮಾಡಲಾಗುತ್ತಿದೆ ಹಾಗೆಯೇ ಬೆಕ್ಕುಗಳಲ್ಲಿ (Persian) ಪರ್ಷಿಯನ್, (abissian) ಅಭಿಸ್ಸಿಯನ್, (Austrian mist)ಆಸ್ಟ್ರೇಲಿಯನ್ ಮಿಸ್ಟ್,(asian tabi) ಏಷಿಯನ್ ಟ್ಯಾಬಿ, (syberian)ಸೈಬೀರಿಯನ್ ಸೇರಿದಂತೆ ನಾನಾ ತಳಿಯ ಬೆಕ್ಕುಗಳನ್ನು ಮಾರಾಟ ಮಾಡಲಾಗುತ್ತಿದೆ.

ಹೆಚ್ಚಾದ ಪ್ರಕರಣಗಳು:
ನಗರದಲ್ಲಿ ಕೆಲವೊಂದು ಪೆಟ್ ಶಾಪ್ ಗಳ ಮೇಲೆ ಸಾಕಷ್ಟು ದೂರುಗಳು ಬರುತ್ತಿದ್ದು ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸಾಮಾನ್ಯವಾಗಿ ಸಾಕುಪ್ರಾಣಿಗಳಿಗೆ ಗ್ರಾಹಕರು ಮಾರಾಟ ಮಾಡುವಾಗ ಮಾಲೀಕರು ಮತ್ತು ಗ್ರಾಹಕರ ನಡುವೆ(aggreement) ಒಪ್ಪಂದ ಪತ್ರ ಮಾಡಲಾಗುತ್ತದೆ. ಒಂದು ವೇಳೆ ಮಿಶ್ರತಳಿ ಕಂಡುಬಂದರೆ ಗ್ರಾಹಕರು ಸಾಕು ಪ್ರಾಣಿಯನ್ನು ಹಿಂದಿರುಗಿಸಬಹುದು ಆದರೆ ಮಂಗಳೂರಿನಲ್ಲಿ ಸಾಕುಪ್ರಾಣಿ ಮಾರುವ ಕೆಲವರು ಒಪ್ಪಂದ ಪತ್ರವನ್ನು ನೀಡದೆ ಮಾರಾಟ ಮಾಡುತ್ತಿದ್ದಾರೆ.
ನಗರ ಪ್ರದೇಶದಲ್ಲಿ ವಿದೇಶಿ ತಳಿಯ ಎಂದು ಹೇಳಿ ಮಿಶ್ರತಳಿ ಸಾಕುಪ್ರಾಣಿಗಳನ್ನು ನೀಡಿ ವಂಚನೆ ಮಾಡಲಾಗುತ್ತಿದೆ. ಜಾತಿ ನಾಯಿಯ ಜೊತೆ ಮಿಶ್ರತಳಿಯ( Crossing)ಕ್ರಾಸಿಂಗ್ ಮಾಡಿಸಿ ನಾಯಿ ಮರಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಸಾಕುಪ್ರಾಣಿಗಳನ್ನು ಖರೀದಿಸುವವರು ಹೆಚ್ಚಾಗಿದ್ದು ಈ ಬಗ್ಗೆ ಗ್ರಾಹಕರು ಜಾಗರೂಕ ವಾಗಬೇಕು ಎಂದು ಮಂಗಳೂರಿನ ಪಶುವೈದ್ಯ ಡಾ. ಮನೋಜ್ ಅವರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಹಕರೊಬ್ಬರು ಪರ್ಶನ್ ಬೆಕ್ಕನ್ನು ಖರೀದಿಸಬೇಕೆಂದು ಪೆಟ್ ಶಾಪ್ ಗೆ ಹೋಗಿದ್ದೆವು ನಾವು (Male Persian Cat)ಗಂಡು ಬೆಕ್ಕು ಕೇಳಿದ್ದು, ನಮಗೆ ಅಂಗಡಿಯವರು(cross Persian Female cat) ಮಿಶ್ರತಳಿಯ ಹೆಣ್ಣು ಬೆಕ್ಕೊಂದು ಕೊಟ್ಟು ವಂಚನೆ ಮಾಡಿದ್ದಾರೆ. ಹೆಣ್ಣು-ಗಂಡು ಬಗ್ಗೆ ವ್ಯತ್ಯಾಸ ಗೊತ್ತಾಗದ ನಮಗೆ ವೈದ್ಯರ ಬಳಿ ಕೇಳಿದಾಗ ಸತ್ಯಾಂಶ ಗೊತ್ತಾಗಿದೆ.ದೂರು ನೀಡಿದ್ದೇವೆ ಎಂದು ತಮಗಾದ ವಂಚನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಪೆಟ್ ಶಾಪ್ ಮಾಲೀಕರು ಆನ್ಲೈನ್ ವ್ಯವಹಾರ ನಡೆಸುವುದಿಲ್ಲ:
ನಕಲಿ ಜಾಲದಲ್ಲಿ ತೊಡಗಿಕೊಂಡವರು ಗ್ರಾಹಕರಿಗೆ ಸಾಕುಪ್ರಾಣಿಗಳು ಹಾಗೂ ಸಾಕು ಪಕ್ಷಿಗಳನ್ನು ಮಾರಾಟ ಮಾಡುವಾಗ,(online) ಆನ್ಲೈನ್ನಲ್ಲಿ ವ್ಯವಹಾರ ಮಾಡದೆ(Cash Transaction) ಹಣದ ರೂಪದಲ್ಲಿ ವ್ಯವಹರಿಸುತ್ತಾರೆ ಹಾಗೂ ಗ್ರಾಹಕರಿಗೆ ಇದರಲ್ಲಿ ಯಾವುದೇ ರೀತಿಯ ದಾಖಲೆ ಇರುವುದಿಲ್ಲ. ಬ್ಯಾಂಕ್ ಟ್ರಾನ್ಸ್ಫರ್ (Google Pay, Bank Transfer) ಗೂಗಲ್ ಪ್ಲೇ ಮಾಹಿತಿಯು ಸಹ ನೀಡುತ್ತಿಲ್ಲ ಎಂದು ಗ್ರಾಹಕರು ದೂರು ನೀಡಿದ್ದಾರೆ.