ಪುದುಚೇರಿ : ದೀಪಾವಳಿ ತುಂಬಾ ಸಂಭ್ರಮದಿಂದ ಆಚರಿಸುವ ಹಬ್ಬ. ಆದರೆ ಪಟಾಕಿಗಳಿಂದಾಗಿ ಪ್ರತಿವರ್ಷ ಹಲವಾರು ಅವಘಡಗಳು ಸಂಭವಿಸಿ ಹಬ್ಬದ ಸಂಭ್ರಮಕ್ಕೆ ತಣ್ಣೀರೆರೆಚುತ್ತದೆ. ಅದೇ ರೀತಿ ಪಟಾಕಿ ಸ್ಫೋಟಗೊಂಡು ತಂದೆ-ಮಗ ಮೃತಪಟ್ಟಿರುವ ಘಟನೆಗೆ ಪುದುಚೇರಿ ಸಾಕ್ಷಿಯಾಗಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮನೆಗೆ ಪಟಾಕಿ ಸಾಗಿಸುವಾಗ ಪಟಾಕಿ ಸ್ಪೋಟಗೊಂಡು ತಂದೆ, ಮಗ ಸಾವನ್ನಪ್ಪಿರುವ ಘಟನೆ ಪುದುಚೇರಿಯಲ್ಲಿ ನಡೆದಿದೆ.

ಪುದುಚೇರಿಯಲ್ಲಿ ಬೈಕ್ ನಲ್ಲಿ ಪಟಾಕಿ ಸಾಗಿಸುವಾಗ ಪಟಾಕಿ ಸ್ಪೋಟಗೊಂಡು ತಂದೆ, ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರ ದೇಹವು ಪಟಾಕಿ ಸ್ಪೋಟಕ್ಕೆ ಛಿದ್ರ ಛಿದ್ರವಾಗಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಖರೀದಿಸಿದ ತಂದೆ ಮಗ,ಬೈಕ್ ನಲ್ಲಿ ಪಟಾಕಿ ಬಾಕ್ಸ್ ಇಟ್ಟುಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಪಟಾಕಿ ಸ್ಪೋಟಗೊಂಡ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪುನೀತ್ ಸಮಾಧಿಗೆ ಸೂರ್ಯ ಭೇಟಿ: ಗೆಳೆಯನನ್ನು ಕಳೆದುಕೊಂಡು ಗದ್ಗದಿತರಾದ ತಮಿಳು ನಟ
ಅದಲ್ಲದೇ ಈಗ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಜನರು ಈ ದೃಶ್ಯವನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.