ದಕ್ಷಿಣ ಕನ್ನಡ: ದೀಪಾವಳಿ ಸಂಭ್ರಮ ಜಿಲ್ಲೆಯಲ್ಲಿ ಜೋರಾಗಿದ್ದು,ಜನರು ಪರಿಸರ ಸ್ನೇಹಿ ಪಟಾಕಿಯತ್ತ ಮನಸ್ಸು ಮಾಡಿದ್ದರೆ.ಅಂಗಡಿಗಳಲ್ಲಿ ಹಸುರು ಪಟಾಕಿಗಳ ಮಾರಾಟಕ್ಕೆ ಅನುಮತಿ ನೀಡಲಾಗಿದೆ.ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಪಟಾಕಿ ಅಂಗಡಿಗಳಿಗೆ ಪಟಾಕಿಗಳನ್ನು ಖರೀದಿ ಮಾಡಲು ಮುಗಿಬಿದ್ದಿದ್ದಾರೆ.
ನಿರೀಕ್ಷೆಗೂ ಮೀರಿ ಪಟಾಕಿ ಮಾರಾಟ:
ಜಿಲ್ಲೆಯಲ್ಲಿ ಹಸಿರು ಪಟಾಕಿಗಳ ಖರೀದಿಗೆ ಜನ ಮುಗಿಬಿದ್ದಿದ್ದು, ನಿರೀಕ್ಷೆಗೂ ಮೀರಿ ಪಟಾಕಿಗಳು ಮಾರಾಟವಾಗುತ್ತಿದೆ ಎಂದು ಪಟಾಕಿ ಅಂಗಡಿಗಳ ಮಾಲೀಕರು ತಿಳಿಸಿದ್ದಾರೆ.ಬೇಡಿಕೆಗೆ ತಕ್ಕಷ್ಟು ಪಟಾಕಿಗಳು ಪೂರೈಕೆಯಾಗಿವೆ ಯಾವುದೇ ನಷ್ಟವಾಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಲೆ ಏರಿಕೆಯಿಂದ ಬಸವಳಿದಿದ್ದ ಜನರಿಗೆ ಬಂಪರ್ – ಪೆಟ್ರೋಲ್ ಡಿಸೇಲ್ ಬೆಲೆಯಲ್ಲಿ ಬಾರಿ ಇಳಿಕೆ
ಹಸಿರು ಪಟಾಕಿ ಮಾರಾಟಕ್ಕೆ ಅನುಮತಿ:
ಸರಕಾರದ ಆದೇಶದಂತೆ ಜಿಲ್ಲೆಯಲ್ಲಿ ಪಟಾಕಿ ಅಂಗಡಿಗಳಲ್ಲಿ (green crackers) ಹಸುರು ಪಟಾಕಿಗಳ ಮಾರಾಟಕ್ಕೆ ಅನುಮತಿ ನೀಡಲಾಗಿದೆ.
ಪರಿಸರದ ದೃಷ್ಟಿಯಿಂದ ಹಸಿರು ಪಟಾಕಿಗಳ ಮಾರಾಟ ಆಗುತ್ತಿರುವುದು ಪ್ರಶಂಸನೀಯ, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳಲ್ಲಿ ಹಸಿರು ಪಟಾಕಿ ಖರೀದಿಗಾಗಿ ಹೆಚ್ಚಿನ ಸಂಖ್ಯೆಯ ಗ್ರಾಹಕರು ಆಗಮಿಸುತ್ತಿದ್ದಾರೆ.

ಪಟಾಕಿಗೆ ಬೇಡಿಕೆ ಹೆಚ್ಚಿದೆ:
ಪಟಾಕಿ ಅಂಗಡಿಗಳ ಮಾಲೀಕರ ಅಭಿಪ್ರಾಯದಂತೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಧಿಕ ಸಂಖ್ಯೆಯಲ್ಲಿ ಪಟಾಕಿಗಳು ಮಾರಾಟವಾಗುತ್ತಿದೆ.ಬೇಡಿಕೆ ಹೆಚ್ಚಾಗಿರುವುದರಿಂದ ಅಗತ್ಯಕ್ಕೆ ತಕ್ಕಂತೆ ಸ್ಟಾಕುಗಳ ಬರುತ್ತಿಲ್ಲ. ಜೋರು ಮಳೆ ಹಿನ್ನೆಲೆಯಲ್ಲಿ (Tamilnadu)ತಮಿಳುನಾಡಿನಲ್ಲಿ ಪಟಾಕಿಗಳ ಉತ್ಪಾದನೆ ಕಡಿಮೆಯಾಗಿದೆ. ಆದರೆ ಕೆಲವೊಂದು ಜಿಲ್ಲೆಗಳಿಂದ ಬೇಡಿಕೆಗೆ ತಕ್ಕಷ್ಟು ಮಾತ್ರ ಪಟಾಕಿಗಳು ಸರಬರಾಜು ಆಗುತ್ತಿದೆ ಎಂದು ಹೇಳಿದ್ದಾರೆ.
ದೀಪಾವಳಿಯ ಹಬ್ಬಕ್ಕೂ ಮುನ್ನವೇ ಪಟಾಕಿಯನ್ನು ಖರೀದಿಸಲು ಜನರು ಆರಂಭಿಸಿದ್ದಾರೆ, ಶಿವಕಾಶಿಯಿಂದ (shivakaashi) ಬೇಡಿಕೆಗೆ ತಕ್ಕಷ್ಟು ಪಟಾಕಿಗಳು ಪೂರೈಕೆಯಾಗುತ್ತಿದೆ ಹಾಗಾಗಿ ಪಟಾಕಿಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಪಟಾಕಿಗಳ ಬೆಲೆ ಎಂದು ಹೇರಿಕೆಯಾಗಿಲ್ಲ ಗ್ರಾಹಕರಿಗೆ ರಿಯಾಯಿತಿ(discount sale) ಬೆಲೆಯಲ್ಲಿ ಪಟಾಕಿಯನ್ನು ನೀಡುತ್ತಿದ್ದೇವೆ ಎಂದು ಮಂಗಳೂರಿನ ಟ್ರೇಡರ್ಸ್ ಮಾಲೀಕ ಅನಂತ್ ಕಾಮತ್ ಅವರು ತಿಳಿಸಿದ್ದಾರೆ.

ಹಸಿರು ಪಟಾಕಿ ಪರಿಸರಕ್ಕೆ ಪೂರಕ: (scan) ಸ್ಕ್ಯಾನ್ ಮಾಡಿ ಹಸಿರು ಪಟಾಕಿ (green crackers) ಗುರುತಿಸಿ.
ಹಸಿರು ಪಟಾಕಿಗಳು ಸಿಡಿಸುವುದರಿಂದ ಪರಿಸರಕ್ಕೆ ಯಾವುದೇ ರೀತಿ ಆನೆಗಳು ಆಗುವುದಿಲ್ಲ. ಹಸಿರು ಪಟಾಕಿ ಇಂದ ಕಡಿಮೆ ಪ್ರಮಾಣದಲ್ಲಿ ಹೊಗೆಯನ್ನು ಹೊರಸೂಸುತ್ತವೆ ಹಾಗೂ ಮಾಲಿನ್ಯದ(pollution) ಪ್ರಮಾಣ ಶೇ. 30% ರಷ್ಟು ಕಡಿಮೆಯಾಗಿದೆ. ಮಾಲಿನ್ಯಕಾರಕ ಪಟಾಕಿಗಳ ಬದಲಾಗಿ ಪಟಾಕಿಗಳ ಬಳಕೆಗೆ ಸುಪ್ರೀಂ(supreme court) ಕೋರ್ಟ್ ಅನುಮತಿ ನೀಡಿದೆ. ಪಟಾಕಿಗಳ ಬಾಕ್ಸ್ ಮೇಲೆ ಹಾಗೂ ಒಳಗೆ ಭಾರತೀಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ, ರಾಷ್ಟ್ರೀಯ ಪರಿಸರ ಮತ್ತು ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆಗಳ ಹಸಿರು ಲೋಗೋ ಇರಲಿದೆ. ನೀರಿ ಮೊಬೈಲ್ ಆಯಪ್ಲಿಕೇಶನ್‌ಗಾಗಿ ಕ್ಯು ಆರ್ ಕೋಡ್ ಇರಲಿದೆ. ಹೀಗಾಗಿ ಜನರು ಹಸುರು ಪಟಾಕಿಗಳನ್ನು ಬಲು ಸುಲಭವಾಗಿ ಗುರುತಿಸಬಹುದಾಗಿದೆ.
ಮಹಾನಗರ ಪಾಲಿಕೆಯಿಂದ ಜಾಗೃತಿ ಕಾರ್ಯಕ್ರಮ:
ಪಟಾಕಿಗಳಿಂದ ಆಗುವ ಅನಾಹುತಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಮಂಗಳೂರು ಮಹಾನಗರ ಪಾಲಿಕೆಯು ಕೆಲವೊಂದು ಸಂಘ ಸಂಸ್ಥೆಗಳ ಜೊತೆಗೂಡಿ ಪಟಾಕಿಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಪಟಾಕಿ ಅಂಗಡಿಗಳಿಗೆ ಪರವಾನಿಗೆಯನ್ನು ವೇಳೆ ಹಸಿರು ಪಟಾಕಿ ಮಾರಾಟ ಮಾಡಬೇಕೆಂಬ ಷರತ್ತು ವಿಧಿಸಲಾಗಿತ್ತು. ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಮಿಕರು ಹೆಚ್ಚಾಗಿ ಕೆಲಸ ಮಾಡುವುದರಿಂದ ಆ ಸ್ಥಳಗಳಿಗೆ ತೆರಳಿ ಹಸಿರು ಪಟಾಕಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಮಂಗಳೂರು ನಗರ ಪಾಲಿಕೆಯ ಅಧಿಕಾರಿಗಳು ಮಾಡುತ್ತಿದ್ದಾರೆ.

Types of Green Crackers
ಹಸಿರು ಪಟಾಕಿಯಲ್ಲಿವೆ ವಿಧಗಳು
ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಹಸಿರು ಪಟಾಕಿಗಳು ಲಭ್ಯವಿದ್ದು. (ಪಾಪ್ಕಾರ್ನ್ ಕ್ಲಾಸಿಕ್ fountain) ಪಾಪ್ಕಾರ್ನ್ ಕ್ಲಾಸಿಕ್ ಫೌಂಟೇನ್, (nota patla ) ನೋಟ ಪಟ್ಲ, (butterfly) ಬಟರ್ಫ್ಲೈ ಎಂಬ ವಿವಿಧ ಬಣ್ಣಗಳನ್ನು ಹೊರಸೂಸುವ ಹಾಗೂ ಇಂಪಾದ ಶಬ್ದಗಳನ್ನು ಉಂಟುಮಾಡುತ್ತದೆ. (Vito Top Wheel)ವಿಟೋ ಟಾಪ್ ವೀಲ್, (helicopter) ಹೆಲಿಕ್ಯಾಪ್ಟರ್ ಪಟಾಕಿ ನೆಲದಿಂದ ಮೇಲಕ್ಕೆ ಹಾರಿ ಹೆಲಿಕ್ಯಾಪ್ಟರ್ ತರಹ ತಿರುಗುತ್ತದೆ, ಸೈರಂ ನೊಂದಿಗೆ ಇಂಪಾದ ಸಂಗೀತವನ್ನು ಹೊರಸೂಸುವ (master crackers) ಮಾಸ್ಟರ್ ಪಟಾಕಿ ಹೀಗೆ ವಿವಿಧ ರೀತಿಯ ಪಟಾಕಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಕಳೆದ ವರ್ಷ ಮಾರುಕಟ್ಟೆಗೆ ಪರಿಚಯಿಸಿದ್ದ ಪಟಾಕಿ (green crackers)ಹಸಿರು ಪಟಾಕಿಗಳ ಕುರಿತು ಜನರಲ್ಲಿ ಸಾಕಷ್ಟು ಗೊಂದಲ ಉಂಟಾಗಿ ಕೆಲವರು ಪಟಾಕಿಗಳನ್ನು ಖರೀದಿಸಿದೆ ಪಟಾಕಿ ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು. ಆದರೆ ಈ ಬಾರಿ ಒಂದು ವಾರ ಇರುವಾಗಲೇ ಹಸಿರು ಪಟಾಕಿ ಮಾರಾಟಕ್ಕೆ ಮಂಗಳೂರಿನಲ್ಲಿ(mangalore) ಅನುಮತಿ ನೀಡಿದ್ದರಿಂದ ಗ್ರಾಹಕರು ಹೆಚ್ಚಿನ ಆಸಕ್ತಿ ತೋರಿ ಪಟಾಕಿಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ಪಟಾಕಿ ಮಾರುಕಟ್ಟೆ ಚೇತರಿಕೆ ಕಾಣುತ್ತಿದ್ದು, ನಿರೀಕ್ಷೆಗೂ ಮೀರಿ ಲಾಭದಾಯಕವಾಗಿದೆ ಎನ್ನುತ್ತಾರೆ ಪಟಾಕಿ ವ್ಯಾಪಾರಸ್ಥರು.