ಜಮ್ಮು&ಕಾಶ್ಮೀರ: ಗಡಿ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಲಾದ ಭಾರತೀಯ ಸೇನಾ ಸೈನಿಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಆಚರಿಸುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಪ್ರಧಾನಮಂತ್ರಿಯವರು ಪಶ್ಚಿಮ ಗಡಿಗೆ ಭೇಟಿ ನೀಡಿ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ದೀಪಾವಳಿ ಆಚರಿಸುವ ನಿರೀಕ್ಷೆಯಿದೆ.
ಇನ್ನು ಇದಲ್ಲದೆ, ಗಡಿಯಲ್ಲಿ ಭಾರತೀಯ ಸೇನೆಯ ಸನ್ನದ್ಧತೆಯನ್ನ ಪ್ರಧಾನಿ ಪರಿಶೀಲಿಸುವ ಸಾಧ್ಯತೆಯಿದೆ.
ಇದನ್ನೂ ಓದಿ : ಫೇಸ್ ಬುಕ್ ಫೇಸ್ ರೆಕಗ್ನಿಶನ್ ಸ್ಥಗಿತ: ಎದುರಾಗುವ ಸಮಸ್ಯೆಗಳೇನು ಗೊತ್ತಾ?
ಅಂದ್ಹಾಗೆ, ಕಳೆದ ವರ್ಷ ಪ್ರಧಾನಿ ಮೋದಿ ಅವ್ರು ಸೈನಿಕರೊಂದಿಗೆ ದೀಪಾವಳಿ ಆಚರಣೆಗಾಗಿ ರಾಜಸ್ಥಾನದ ಗಡಿ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಜೈಸಲ್ಮೇರ್ʼನ ಲಾಂಗೆವಾಲಾಗೆ ಭೇಟಿ ನೀಡಿದ್ದ ಅವ್ರು ಯೋಧರನ್ನು ಶ್ಲಾಘಿಸಿ, ಸೈನಿಕರ ಶಕ್ತಿ ಮತ್ತು ಶೌರ್ಯದ ಬಗ್ಗೆ ದೇಶ ಹೆಮ್ಮೆ ಪಡುತ್ತದೆ ಎಂದು ಹೇಳಿದ್ದರು.

ಬಿಎಸ್ ಎಫ್ ಅಧಿಕಾರಿಗಳು ಅಂತರರಾಷ್ಟ್ರೀಯ ಗಡಿಯಲ್ಲಿ ಸ್ಥಳೀಯರೊಂದಿಗೆ ದೀಪಾವಳಿ ಆಚರಿಸುತ್ತಾರೆ. ಏತನ್ಮಧ್ಯೆ, ಗಡಿ ಭದ್ರತಾ ಪಡೆ (BSF) ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದ ಆರ್ ಎಸ್ ಪುರ ಸೆಕ್ಟರ್ʼನಲ್ಲಿ ಸ್ಥಳೀಯರೊಂದಿಗೆ ದೀಪಾವಳಿ ಆಚರಿಸಿದರು. ಎಎನ್ ಐ ಜೊತೆ ಮಾತನಾಡಿದ ಕಾನ್ ಸ್ಟೆಬಲ್ ರಣದೀಪ್ ಸಿಂಗ್, ಈ ದೇಶದ ಪ್ರೀತಿಯಿಂದಾಗಿ ಬಿಎಸ್ ಎಫ್ ಸೈನಿಕರು ಗಡಿ ಪ್ರದೇಶದ ಸುತ್ತಲೂ ದೀಪಾವಳಿ ಆಚರಿಸುತ್ತಿದ್ದಾರೆ ಎಂದು ಹೇಳಿದರು. ಇನ್ನು ಅಲ್ಲಿನ ಜನರು ತಮ್ಮ ಕುಟುಂಬದಂತೆ ಇದ್ದು, ಬಿಎಸ್ ಎಫ್ ಶಾಲಾ ಮಕ್ಕಳು, ನಾಗರಿಕ ಸೇವಕರು ಮತ್ತು ಸಾರ್ವಜನಿಕ ನಾಯಕರೊಂದಿಗೆ ದೀಪಾವಳಿ ಆಚರಿಸಲಿದ್ದೇವೆ ಎಂದು ಇನ್ನೊಬ್ಬ ಅಧಿಕಾರಿ ಹೇಳಿದರು.