ಬೀಜಿಂಗ್: ಸದಾ ಕುತಂತ್ರದ ಆಲೋಚನೆಯಲ್ಲಿಯೇ ಮುಳುಗಿ, ಇದಾಗಲೇ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಿಂದ ಕರೊನಾ ಹಿನ್ನೆಲೆಯಲ್ಲಿ ಛೀಮಾರಿ ಹಾಕಿಸಿಕೊಂಡಿರುವ ಚೀನಾಕ್ಕೆ ಇದೀಗ ಬಹುದೊಡ್ಡ ಸವಾಲು ಎದುರಾಗಿದೆ. ಸವಾಲಿನ ಜತೆಗೆ ಆತಂಕವನ್ನೂ ತಂದೊಡ್ಡಿದೆ.
ಇದಕ್ಕೆ ಕಾರಣ, ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ನಿಯೋಜನೆಗೊಂಡಿರುವ ಸೈನಿಕರ ಸರಣಿ ಸಾವು!
ಗಲ್ವಾನ್ ಕಣಿವೆಯಲ್ಲಿ ದಶಕದಿಂದ ಭಾರತ ಮತ್ತು ಚೀನಾದ ಸೈನಿಕರ ನಡುವೆ ಸಂಘರ್ಷ ನಡೆಯುತ್ತಲೇ ಇದ್ದು, ಕಳೆದ ವರ್ಷ ಇದು ತಾರಕಕ್ಕೇರಿತ್ತು. ಇದೀಗ ಯಾವ ಕ್ಷಣದಲ್ಲಾದರೂ ಚೀನಾ ತನ್ನ ಕುತಂತ್ರ ಬುದ್ಧಿ ಉಪಯೋಗಿಸಿ ದಾಳಿ ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಭಾರತೀಯ ಯೋಧರು ಕೂಡ ಈ ಕಣಿವೆಯ ಮೇಲೆ ಹದ್ದಿನಕಣ್ಣು ಇಟ್ಟಿದ್ದಾರೆ.

ಅಂದ ಹಾಗೆ ಚೀನಿ ಸೈನಿಕರು ಏಕಾಏಕಿ ನಿಂತನಿಂತಲ್ಲಿಯೇ ಸಾಯುತ್ತಿರುವುದಕ್ಕೆ ಕಾರಣ ಕರೊನಾ ಅಲ್ಲ. ಬದಲಿಗೆ ಈ ಕಣಿವೆಯಲ್ಲಿ ಸೈನಿಕರು ನಿಯೋಜನೆಗೊಂಡಿರುವ ಬಂಕರ್ ಗಳು ಬಹಳ ಎತ್ತರದಲ್ಲಿವೆ. ಇಷ್ಟು ಎತ್ತರದಲ್ಲಿ ಉಸಿರಾಟ ಬಹಳ ಕಷ್ಟ. ನಮ್ಮ ಅಂದರೆ ಭಾರತದ ಯೋಧರಿಗೆ ಇಂಥ ದುಃಸ್ಥಿತಿಯಲ್ಲಿಯೂ ಅದನ್ನು ಎದುರಿಸುವ ತರಬೇತಿಯ ಜತೆಗೆ ಅಲ್ಲಿ ನೆಲೆಸುವ ವಾತಾವರಣ, ಅಗತ್ಯ ಇರುವಷ್ಟು ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಆದರೆ ಚೀನಾದಲ್ಲಿ ಇದ್ಯಾವುದೇ ವ್ಯವಸ್ಥೆ ಇಲ್ಲ. ಅಲ್ಲಿಯ ಸೈನಿಕರಿಗೆ ಅಂಥ ತರಬೇತಿಯನ್ನು ನೀಡುವುದು ದೂರದ ಮಾತು ಆಕ್ಸಿಜನ್ ಪೂರೈಕೆಯೂ ಸರಿಯಾಗಿ ಆಗುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸೈನಿಕರು ಸಾಯುತ್ತಿರುವುದಾಗಿ ವರದಿಯಾಗಿದೆ. ಇದು ಈಗ ಚೀನಾ ಸರ್ಕಾರವನ್ನು ಭಾರಿ ಚಿಂತೆಗೀಡು ಮಾಡಿದೆ. ಈ ಭಾಗದಲ್ಲಿ ಅತ್ಯಧಿಕ ರೀತಿಯಲ್ಲಿ ಸೈನಿಕರ ನಿಯೋಜನೆ ಮಾಡಿರುವ ಕಾರಣ, ಇದಾಗಲೇ ಆರ್ಥಿಕ ಹಿಂಜರಿತದಿಂದ ಅಪಾರ ನಷ್ಟ ಮಾಡಿಕೊಂಡಿರುವ ಚೀನಾಕ್ಕೆ ಅಷ್ಟೂ ಸೈನಿಕರಿಗೆ ಆಕ್ಸಿಜನ್ ಪೂರೈಕೆ ಮಾಡುವುದು ಕಷ್ಟವಾಗುತ್ತಿದೆ. ಆದ್ದರಿಂದ ಸೈನಿಕರನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿ ಅದು ತೊಡಗಿದೆ.
ಇದನ್ನೂ ಓದಿ: ಫೇಸ್ ಬುಕ್ ಫೇಸ್ ರೆಕಗ್ನಿಶನ್ ಸ್ಥಗಿತ: ಎದುರಾಗುವ ಸಮಸ್ಯೆಗಳೇನು ಗೊತ್ತಾ?