ಮೈಸೂರು: ವೈದ್ಯಕೀಯ ಕೋರ್ಸ್ ಪ್ರವೇಶಕ್ಕಾಗಿ ನಡೆಯುವ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಮೈಸೂರಿನ ಮೇಘನ್ ಐದನೇ ರ್ಯಾಂಕ್ ಪಡೆಯುವ ಮೂಲಕ ಡಾಕ್ಟರ್ ಆಗುವ ಕನಸು ನನಸಾಗಿದೆ. ಸಂತಸ ಹಂಚಿಕೊಂಡಿರುವ ಮೇಘನ್, ನನಗೆ ಈ ಫಲಿತಾಂಶ ಖುಷಿ ತಂದಿದೆ. ಡಾಕ್ಟರ್ ಆಗಬೇಕೆಂದು ಕಷ್ಟಪಟ್ಟು ಓದಿದೆ. ಒಳ್ಳೆಯ ರಿಸಲ್ಟ್ ಬಂದಿದೆ. 720 ಅಂಕಗಳಿಗೆ 715 ಅಂಕಗಳು ಬಂದಿವೆ. ನನ್ನ ವಿದ್ಯಾಭ್ಯಾಸಕ್ಕೆ ತಂದೆ, ತಾಯಿ ತುಂಬಾ ಸಹಕಾರ ನೀಡಿದ್ದಾರೆ. ಅವರ ಪ್ರೋತ್ಸಾಹದಿಂದ ಈ ಫಲಿತಾಂಶ ಬರಲು ಸಾಧ್ಯವಾಯಿತು ಎಂದಿದ್ದಾರೆ.
ಮೊದಲ ದಿನದಿಂದಲೇ ನಾನು ಒಂದು ನೀಲ ನಕ್ಷೆ ತಯಾರಿಸಿಕೊಂಡು ಆ ದಿನದ ಎಲ್ಲಾ ಪಠ್ಯಗಳನ್ನು ಓದಬೇಕು. ಪರೀಕ್ಷೆ ಹತ್ತಿರ ಬಂದಾಗ ಅಣುಕು ಪರೀಕ್ಷೆಗಳನ್ನು ಬರೆಯಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದೆ. ಕಳೆದ ಎರಡು ವರ್ಷ ಕೋವಿಡ್ನಿಂದಾಗಿ ಸವಾಲಿನಿಂದ ಕೂಡಿತ್ತು. ಆ ಸಂದರ್ಭದಲ್ಲಿ ಸಮಯ ವ್ಯರ್ಥ ಮಾಡದೇ ಗುರಿ ಇಟ್ಟುಕೊಂಡು ಓದಿದೆ. ಚೆನ್ನಾಗಿ ಓದಬೇಕು ಎಂಬುದೇ ನನ್ನ ಮುಂದಿನ ಗುರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದನು.ಇದನ್ನೂ ಓದಿ: ಫಿಟ್ ಆಗಿದ್ದ ಪುನೀತ್ ಇನ್ನಿಲ್ಲ: ಅತಿಯಾಗಿ ವರ್ಕೌಟ್ ಮಾಡುವುದು ಅಪಾಯಕಾರಿಯೇ?
ಕರ್ನಾಟಕ ಸಿಇಟಿ ಪರೀಕ್ಷೆಯಲ್ಲಿ ಐದು ವಿಭಾಗದಲ್ಲಿ ಮೊದಲ ಐದು ರ್ಯಾಂಕ್ ಪಡೆದಿದ್ದ ಮೇಘನ್, ಈಗ ನೀಟ್ ಪರೀಕ್ಷೆಯಲ್ಲಿ ಐದನೇ ರ್ಯಾಂಕ್ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.