ಬೆಂಗಳೂರು:(ನ,2) ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನಗಲಿ ಇಂದಿಗೆ ೫ನೇ ದಿನ. ಮನೆಮಗನನ್ನು ಕಳೆದುಕೊಂಡಂತಹ ಭಾವ ಇಡೀ ರಾಜ್ಯಕ್ಕಾವರಿಸಿದೆ. ಜೊತೆಗೆ ರಾಜ್ ಕುಟುಂಬದಲ್ಲಿಯೂ ದುಃಖ ಮಡುಗಟ್ಟಿದೆ. ಕಂಠೀರವ ಸ್ಟುಡಿಯೋದಲ್ಲಿ ತಂದೆ-ತಾಯಿಯ ಸಮಾಧಿ ಬಳಿಯೇ ಅಪ್ಪು ಸಮಾಧಿ ಮಾಡಲಾಗಿದೆ.
ಇಂದು 5ನೇ ದಿನವಾದ ಕಾರಣ ರಾಜ್ ಕುಟುಂಬ ಇಂದು ಪುನೀತ್ ಸಮಾಧಿಗೆ ಹಾಲು-ತುಪ್ಪ ಕಾರ್ಯ ನೆರವೇರಿಸಿತು. ಹಾಲು-ತುಪ್ಪ ಕಾರ್ಯ ಮುಗಿಯುವವರೆಗೆ ಕುಟುಂಬಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು ಆದಷ್ಟು ಬೇಗ ಅಭಿಮಾನಿ ದೇವರುಗಳಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ನಟ ಶಿವರಾಜಕುಮಾರ್ ತಿಳಿಸಿದ್ದಾರೆ.

ಇಂದು ಹಾಲು-ತುಪ್ಪ ಕಾರ್ಯದ ಕಾರಣ ಕಂಠೀರವ ಸ್ಟುಡಿಯೋ ಸುತ್ತ ಬಿಗಿ ಭದ್ರತೆ ವಹಿಸಲಾಗಿತ್ತು. ಪ್ರತಿ ಗೇಟ್ ಬಳಿಯೂ ಪೋಲಿಸರನ್ನು ನಿಯೋಜನೆ ಮಾಡಲಾಗಿತ್ತು.
ಇದನ್ನೂ ಓದಿ: ಪವರ್ ಸ್ಟಾರ್ ಸಿನಿ ಜರ್ನಿ ಹೇಗಿತ್ತು ಗೊತ್ತಾ?ಯುವರತ್ನನ ಸಿನಿರತ್ನಗಳು!
ಹಾಲು-ತುಪ್ಪ ಕಾರ್ಯಕ್ಕೆ ಆಪ್ತರು, ಕುಟುಂಬಸ್ಥರಿಗೆ ಮಾತ್ರ ಆಹ್ವಾನಿಸಲಾಗಿತ್ತು. ಪುನೀತ್ ಪತ್ನಿ ಅಶ್ವಿನಿ ಮತ್ತು ಮಕ್ಕಳಾದ ಧೃತಿ ಹಾಗೂ ವಂದಿತಾ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿ, ಹಾಲು-ತುಪ್ಪ ಕಾರ್ಯ ನೆರವೇರಿಸಿದರು.

ರಾಘವೇಂದ್ರ ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಜ್ ಕುಟುಂಬದ ಪೂರ್ಣಿಮಾ , ಅಕ್ಕಂದಿರಾದ ಲಕ್ಶ್ಮೀ , ರಾಮ್ ಕುಮಾರ್ ಮತ್ತು ಅವರ ಕುಟುಂಬ, ಮಾವ ಚಿನ್ನೇಗೌಡ ಕುಟುಂಬ ಗಾಜನೂರು ಸಂಬಂಧಿಕರು, ವಿನಯ್ ರಾಘವೇಂದ್ರ , ಯುವರಾಜ್ ಕುಮಾರ್, ಶ್ರೀಮುರುಳಿ , ವಿನಯ್ ರಾಘವೇಂದ್ರ , ಮಧು ಬಂಗಾರಪ್ಪ, ಕುಮಾರ್ ಬಂಗಾರಪ್ಪ ಫಿಲ್ಮ್ ಚೇಂಬರ್ ಸದಸ್ಯರು ಕಾರ್ಯದಲ್ಲಿ ಭಾಗಿಯಾಗಿದ್ರು .