ಅಯೋಧ್ಯೆ: ರಾಮನಗರಿ ಅಯೋಧ್ಯೆ ದೀಪೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರ ತನ್ನ ಅಧಿಕಾರಾವಧಿಯ ಪಂಚಮ ದೀಪೋತ್ಸವವನ್ನು ಐತಿಹಾಸಿಕ ರೀತಿಯಲ್ಲಿ ಆಚರಿಸಲು ಹೊರಟಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಅಯೋಧ್ಯೆಯ ದೀಪೋತ್ಸವ ಸ್ಮರಣೀಯವಾಗಲಿದೆ.

ಈ ಬಾರಿಯ ದೀಪೋತ್ಸವದಲ್ಲಿ 12 ಲಕ್ಷ ಮಣ್ಣಿನ ಹಣತೆಗಳು ಬೆಳಗಲಿವೆ. ಸರಯೂ ನದಿ ದಂಡೆಯ ಮೇಲಿನ ರಾಮ್ ಕಿ ಪೈಡಿಯಲ್ಲಿ 10.02 ಲಕ್ಷ ದೀಪಗಳು ಮತ್ತು ಜನ್ಮಭೂಮಿ ಸಂಕೀರ್ಣ ಸಹಿತ ಪುರಾತನ ಮಠ, ಮಂದಿರ ಮತ್ತು ಕುಂಡ್ ಗಳಲ್ಲಿ 2 ಲಕ್ಷಕ್ಕೂ ಅಧಿಕ ದೀಪಗಳನ್ನು ಬೆಳಗಿಸಲಾಗುತ್ತಿದೆ.
ಸೋಮವಾರ ರಾಮ್ ಕಿ ಪೈಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಸ್ವಯಂಸೇವಕರು ದೀಪಗಳನ್ನು ಜೋಡಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದರು.
ಇದನ್ನೂ ಓದಿ: ಕೇವಲ 394 ಇನ್‌ಸ್ಟಾ ಪೋಸ್ಟ್ – ಆದರೆ ಫಾಲೋವರ್ಸ್ ಮಾತ್ರ 23.4 ಮಿಲಿಯನ್