ದಾವಣಗೆರೆ: ದಾವಣಗೆರೆ ಜಿಲ್ಲೆಯ ನಾಟಿ ವೈದ್ಯೆ ಸುಲ್ತಾನಿ ಬೀ (70) 2021 ರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 10 ಸಾವಿರಕ್ಕೂ ಅಧಿಕ ಹೆರಿಗೆ ಮಾಡಿಸಿರುವ ಸುಲ್ತಾನಿ ಬೀ ಚರ್ಮ ರೋಗ, ಇಸುಬು, ಹುಳಕಡ್ಡಿಯಂತ ರೋಗಕ್ಕೂ ನಾಟಿ ಔಷಧ ನೀಡುತ್ತಾರೆ.
ದಾವಣಗೆರೆ ಜಿಲ್ಲೆ ಜಗಳೂರು ಗೊಲ್ಲರಹಟ್ಟಿಯ ನಾಟಿ ವೈದ್ಯೆಯಾದ ಈ ವೃದ್ಧ ಮಹಿಳೆ ಹಲವು ದಶಕಗಳಿಂದ ಜನ ಸೇವೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕನ್ನಡ ತಾಯಿ ಭುವನೇಶ್ವರಿಯ ಏಕೈಕ ದೇಗುಲ ಎಲ್ಲಿದೆ ಗೊತ್ತಾ?
ಸುಲ್ತಾನೀ ಬಿ ಅವರಿಗೆ ಪ್ರಶಸ್ತಿ ಸಿಕ್ಕಿರುವುದು ನಾಟಿ ವೈದ್ಯರಿಗೆ ಸಂದ ಗೌರವವಾಗಿದೆ. ಸುಲ್ತಾನ್ ಬಿ ಸೇರಿ ಜಿಲ್ಲೆಯ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.ದಾವಣಗೆರೆ: ದಾವಣಗೆರೆ ಜಿಲ್ಲೆಯ ನಾಟಿ ವೈದ್ಯೆ ಸುಲ್ತಾನಿ ಬೀ (70) 2021 ರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
10 ಸಾವಿರಕ್ಕೂ ಅಧಿಕ ಹೆರಿಗೆ ಮಾಡಿಸಿರುವ ಸುಲ್ತಾನಿ ಬೀ ಚರ್ಮ ರೋಗ, ಇಸುಬು, ಹುಳಕಡ್ಡಿಯಂತ ರೋಗಕ್ಕೂ ನಾಟಿ ಔಷಧ ನೀಡುತ್ತಾರೆ. ದಾವಣಗೆರೆ ಜಿಲ್ಲೆ ಜಗಳೂರು ಗೊಲ್ಲರಹಟ್ಟಿಯ ನಾಟಿ ವೈದ್ಯೆಯಾದ ಈ ವೃದ್ಧ ಮಹಿಳೆ ಹಲವು ದಶಕಗಳಿಂದ ಜನ ಸೇವೆ ಮಾಡುತ್ತಿದ್ದಾರೆ. ಸುಲ್ತಾನೀ ಬಿ ಅವರಿಗೆ ಪ್ರಶಸ್ತಿ ಸಿಕ್ಕಿರುವುದು ನಾಟಿ ವೈದ್ಯರಿಗೆ ಸಂದ ಗೌರವವಾಗಿದೆ. ಸುಲ್ತಾನ್ ಬಿ ಸೇರಿ ಜಿಲ್ಲೆಯ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.