ಬೆಂಗಳೂರು : ಇತ್ತಿಚೇಗೆ ಅಕಾಲಿಕವಾಗಿ ನಿಧನ ಹೊಂದಿದ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂದು ಎಲ್ಲೇಡೆಯಿಂದ ಬೇಡಿಕೆಗಳ ಮಹಾಪೂರವೇ ಹರಿದುಬರುತ್ತಿದೆ. ಅಸಂಖ್ಯಾತ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಹಾಗೂ ಸಮಾಜದ ಅನೇಕ ಗಣ್ಯಾತೀಗಣ್ಯರು ಒಕ್ಕೂರಲಿನಿಂದ ಈ ಬೇಡಿಕೆಗಾಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಕರ್ನಾಟಕದ ಮುಖ್ಯಮಂತ್ರಿಗಳು ’ಪುನೀತ್ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂಬ ಬೇಡಿಕೆ ಚಿತ್ರರಂಗ ಮತ್ತು ಅಭಿಮಾನಿಗಳಿಂದ ಕೇಳಿ ಬಂದಿದೆ. ತಕ್ಷಣಕ್ಕೆ ಈ ಬೇಡಿಕೆ ಬಗ್ಗೆ ಏನು ಹೇಳಲಾಗದು. ಈ ಬಗ್ಗೆ ಪ್ರಮುಖರ ಜತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ’ ಎಂದಿದ್ದಾರೆ.

ಪುನೀತ್ ರವರ ಸಾವಿನ ಸುದ್ದಿ ತಿಳಿದಾಗಿಂದಲೂ ಅವರ ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋದಲ್ಲಿ ಶಾಸ್ತ್ರಬದ್ಧವಾಗಿ ನಡೆಯುವವರೆಗೂ ಸರ್ಕಾರದ ಜವಾಬ್ದಾರಿ ಹೊತ್ತು ಖುದ್ದು ಮಾನ್ಯ ಮುಖ್ಯ ಮಂತ್ರಿಗಳೇ ಪುನೀತ್ ಕುಟುಂಬಸ್ಥರ ಜೊತೆಗಿದ್ದು ಅವರಿಗೆ ಮಾನಸಿಕ ಸ್ಥೈರ್ಯ ಕೊಟ್ಟಿದ್ದರು.

ಅಭಿಮಾನಿಗಳು ಮತ್ತು ಗಣ್ಯರ ಈ ಒಂದು ಬೇಡಿಕೆ ಈಡೇರಿಸಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿದರೆ ಜನರ ಅಭಿಪ್ರಾಯಕ್ಕೆ ಗೌರವ ಕೊಟ್ಟ ಹಾಗೆ ಆಗುತ್ತದೆ. ಪುನೀತ್ ಅವರಿಗೆ ಕರ್ನಾಟಕ ರತ್ನ ಘೋಷಣೆ ಮಾಡುವುದರಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆಯೇ ವಿನಃ ಪುನೀತ್ ರಾಜ್‌ಕುಮಾರ ಅವರಿಗಲ್ಲ ಎನ್ನುವಂತಹ ಅಭಿಪ್ರಾಯಗಳು ಕೇಳಿ ಬಂದಿವೆ.