ಬೆಂಗಳೂರು : ಸಮಸ್ತ ಓದುಗರಿಗೂ ಹಾಗೂ ನಮ್ಮೆಲ್ಲ ಹಿತೈಷಿಗಳಿಗೂ ಕನ್ನಡ ರಾಜ್ಯೋತ್ಸವದ (Kannada Rajyotsava) ಹಾರ್ಧಿಕ ಶುಭಾಶಯಗಳು. ಆತ್ಮಿಯರೇ ನವೆಂಬರ್ 01 (November 01) ಅಂದ ತಕ್ಷಣ ನೆನಪಾಗುವುದು ಕನ್ನಡದ ಹಬ್ಬ ಕರ್ನಾಟಕ ರಾಜ್ಯೋತ್ಸವ.

ಕರ್ನಾಟಕ (Karnataka) ರಾಜ್ಯ ಮಾತ್ರವಲ್ಲದೇ, ದೇಶದೆಲ್ಲೆಡೆ ಹಾಗೂ ವಿಶ್ವದ ನಾನಾ ಕಡೆ ತಮ್ಮ ನೆಲೆ ಕಂಡುಕೊಂಡಿರುವ ಪ್ರತಿಯೊಬ್ಬ ಕನ್ನಡಿಗನೂ ಸಂಭ್ರಮಿಸುವಂತಹ ದಿನ. ಇಂತಹ ಈ ದಿನದ ಬಗ್ಗೆ ಪ್ರತಿಯೊಬ್ಬ ಕನ್ನಡಿಗನು ಮತ್ತು ಕನ್ನಡದ ಮೇಲೆ ಅಭಿಮಾನ ಹೊಂದಿದವನು ತಿಳಿದುಕೊಳ್ಳಲೇಬೇಕಾದ ಅನೇಕ ವಿಷಯಗಳನ್ನು ಇವತ್ತಿನ ಈ ವಿಶೇಷ ಸರಣಿ ಲೇಖನ (A Series of Articles) ಗಳಲ್ಲಿ ತಿಳಿಸುತ್ತೇವೆ ಬನ್ನಿ.

ಕರ್ನಾಟಕ ರಾಜ್ಯೋತ್ಸವವನ್ನು – ಕನ್ನಡ ದಿನ (Kannada Day) , ಕರ್ನಾಟಕ ರಚನಾ ದಿನ (Karnataka Formation Day) ಅಥವಾ ಕನ್ನಡ ರಾಜ್ಯೋತ್ಸವ ಎಂತಲೂ ಕರೆಯುತ್ತಾರೆ. ಸರಿಯಾಗಿ 65 ವರ್ಷಗಳ ಹಿಂದೆ ಅಂದರೆ 1956 ರಲ್ಲಿ ದಕ್ಷಿಣ ಭಾರತ (South India) ದ ಕನ್ನಡ ಮಾತನಾಡುವ ಜನರಿರುವ ಎಲ್ಲ ಪ್ರದೇಶಗಳನ್ನು ಗುರುತಿಸಿ ಅವುಗಳನ್ನು ಏಕೀಕರಣ (United) ಗೊಳಿಸಿ ಮೈಸೂರು (Mysuru) ಎಂಬ ಹೊಸ ರಾಜ್ಯ ಉದಯವಾದ ದಿನ. ಮೊದಲಿಗೆ ಮೈಸೂರು ರಾಜ್ಯವನ್ನು ಮೂರು ಭಾಗಗಳಾಗಿ ಗುರುತಿಸಿದ್ದರು.
ಇದನ್ನೂ ಓದಿ : ದೀಪದಿಂದ ದೀಪ ಹಚ್ಚುವ ಹಬ್ಬ ಬಂದೇ ಬಿಡ್ತು – ನವೆಂಬರ್ 4 ದೇಶದಾದ್ಯಂತ ದೀಪಾವಳಿ
ಹಳೆಯ ಮೈಸೂರು ಭಾಗ, ಉತ್ತರ ಕರ್ನಾಟಕ ಭಾಗ ಮತ್ತು ಮಲೆನಾಡು. ತದ ನಂತರ ಅಖಂಡ ರಾಜ್ಯದ ಪ್ರತಿಯೊಂದು ಪ್ರದೇಶಗಳ ಮಹತ್ವಕ್ಕಾಗಿ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲಾಯಿತು. ಅಂದಿನಿಂದಲೂ ಇಲ್ಲಿವರೆಗೂ ನಮ್ಮ ರಾಜ್ಯವನ್ನು ಕರ್ನಾಟಕ ಎಂದು ಮತ್ತು ಇಲ್ಲಿ ವಾಸಿಸುವ ಜನರನ್ನು ಕನ್ನಡಿಗರೆಂದು ಕರೆಯುತ್ತಾರೆ.

ಈ ದಿನವನ್ನು ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ರಜೆ (Government Holiday) ಎಂದು ಪಟ್ಟಿ ಮಾಡಲಾಗಿದೆ. ಈ ದಿನವನ್ನು ಭವ್ಯವಾದ ಹಬ್ಬದಂತೆ ಮತ್ತು ವರ್ಣರಂಜಿತ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ. ಮೊಟ್ಟ ಮೊದಲ ಬಾರಿ ಸಮಗ್ರ ಕರ್ನಾಟಕ ಏಕೀಕರಣದ ಕನಸನ್ನು ಕಂಡಿದ್ದು ಶ್ರೀಯುತ ಆಲೂರು ವೆಂಕಟ ರಾವ್ ಅವರು (Shri Aluru Venkata Rao) .

1905ರಲ್ಲಿಯೇ ಕರ್ನಾಟಕ ಏಕೀಕರಣ ಚಳುವಳಿಯೊಂದಿಗೆ ರಾಜ್ಯವನ್ನು ಏಕೀಕರಿಸುವ ಕನಸು ಕಂಡ ಮೊದಲ ವ್ಯಕ್ತಿ. ಆಲೂರು ವೆಂಕಟರಾಯರು ಕನ್ನಡ ಸಾಹಿತ್ಯಲೋಕದ ಪ್ರಮುಖರಲ್ಲೊಬ್ಬರು. ಕನ್ನಡ ಸಾಹಿತ್ಯ, ಪತ್ರಿಕೋದ್ಯಮ, ಸಾಂಸ್ಕೃತಿಕ ವಲಯದಲ್ಲಿ ನೀಡಿರುವ ಕಾಯಕಲ್ಪದಿಂದಾಗಿ ಕನ್ನಡ ಕುಲಪುರೋಹಿತರು ಎಂದು ಗೌರವಾನ್ವಿತ ಸ್ಥಾನ ಪಡೆದವರಾಗಿದ್ದಾರೆ.
ಇದನ್ನೂ ಓದಿ : The Visa Lord – Hyderabad : ವಿದೇಶಕ್ಕೆ ಹೋಗಬೇಕೆ ? ಹಾಗಾದರೆ ವೀಸಾ ದೇವರ ದರ್ಶನ ಮಾಡಿ
ಆಲೂರು ವೆಂಕಟರಾಯರು ಆ ಕಾಲದ ಸಾಮಾಜಿಕ ಚಟುವಟಿಕೆಗಳ ಮುಂಚೂಣಿಯಲ್ಲಿದ್ದರು. 1921 ರಲ್ಲಿ ಮಹಾತ್ಮ ಗಾಂಧಿಯವರು ಆರಂಭಿಸಿದ ಸತ್ಯಾಗ್ರಹ ಚಳುವಳಿಯಲ್ಲಿ ಭಾಗವಹಿಸಿದ್ದರು. ಕರ್ನಾಟಕ ಏಕೀಕರಣ, ಕರ್ನಾಟಕ ಇತಿಹಾಸ ಮಂಡಲದ ಸ್ಥಾಪನೆ, ಕನ್ನಟ ಸಾಹಿತ್ಯ ಪರಿಷತ್ ಸ್ಥಾಪನೆ, ಕರ್ನಾಟಕ ವಿಶ್ವವಿದ್ಯಾನಿಲಯದ ಕಲ್ಪನೆ, ವಿಜಯನಗರ ಮಹೋತ್ಸವ, ನಾಡಹಬ್ಬದ ಯೋಜನೆ, ಕರ್ನಾಟಕ ವಿದ್ಯಾವರ್ಧಕ ಸಂಘ (ಧಾರವಾಡ), ಈ ಎಲ್ಲಾ ಯೋಜನೆಗಳಲ್ಲಿ ಆಲೂರು ವೆಂಕಟರಾಯರು ಮಹತ್ವದ ಪಾತ್ರ ವಹಿಸಿದ್ದಾರೆ.
1907ರಲ್ಲಿಯೆ ಕನ್ನಡ ಗ್ರಂಥಕರ್ತರ ಸಮ್ಮೇಳನವನ್ನು ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಕಾಶಕರಿಗೆ ಅನುಕೂಲವಾಗಲು ಕರ್ನಾಟಕ ಗ್ರಂಥ ಮಂಡಳಿಯನ್ನು ಸ್ಥಾಪಿಸಿದ್ದರು.
ಮುಂದಿನ ಲೇಖನಗಳಲ್ಲಿ ಮತ್ತಷ್ಟು ಕನ್ನಡ ರಾಜ್ಯೋತ್ಸವ ಕುರಿತಂತೆ ವಿಷಯಗಳನ್ನು ತಿಳಿದುಕೋಳ್ಳೊಣ