ಸಮಸ್ತ ಓದುಗರಿಗೂ ಹಾಗೂ ನಮ್ಮೆಲ್ಲ ಹಿತೈಷಿಗಳಿಗೂ ಕನ್ನಡ ರಾಜ್ಯೋತ್ಸವದ (Kannada Rajyotsava) ಹಾರ್ಧಿಕ ಶುಭಾಶಯಗಳು. ದಕ್ಷಿಣ ಭಾರತದ ಕರ್ನಾಟಕ ರಾಜ್ಯವು ನಮ್ಮ ಕನ್ನಡ ಬಾಷೆಯ ಜನ್ಮಸ್ಥಳವಾಗಿದೆ. ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಮತ್ತು ಭಾರತವನ್ನು ಪ್ರತಿನಿಧಿಸುವಲ್ಲಿ ಅಥವಾ ಗುರುತಿಸುವಲ್ಲಿ ಬಹಳ ಪ್ರಮುಖವಾಗಿ ಪರಿಗಣಿಸುವ ಸ್ಥಳಗಳಾದ ಬೆಂಗಳೂರು, ಮೈಸೂರು ಮತ್ತು ಹಂಪಿಗಳು ಕೂಡ ಕರ್ನಾಟಕದಲ್ಲಿರುವುದು ನಮ್ಮ ಕನ್ನಡಿಗರ ಹೆಮ್ಮೆ.

ಕನ್ನಡವು ಕರ್ನಾಟಕದ ನಿವಾಸಿಗಳು ಮಾತನಾಡುವ ದ್ರಾವಿಡ ಭಾಷೆಯಾಗಿದೆ. ಇದು ಅಧಿಕೃತವಾಗಿ ಭಾರತೀಯ ಸಂವಿಧಾನದ ಅಡಿಯಲ್ಲಿ ಬರುವ ನಿಗದಿತ ಭಾಷೆಯಾಗಿದ್ದೂ ಭಾರತದಲ್ಲಿ ಒಟ್ಟು 43 ಮಿಲಿಯನ್ ಗೂ ಅಧಿಕ ಜನರು ಆಡಳಿತ ಅಥವಾ ವ್ಯವಹಾರ ಮತ್ತು ಇನ್ನೀತರ ದೈನಂದಿನ ಸಂವಹನಕ್ಕಾಗಿ ಬಳಸುವ ಭಾಷೆಯಾಗಿದೆ.

ನಮ್ಮ ಕನ್ನಡ ಭಾಷೆಯ ಬಗ್ಗೆ ಹೇಳುತ್ತ ಹೋದರೆ ಬರೆಯುವುದನ್ನು ಮುಗಿಸಲು ಸಾಧ್ಯವೇ ಇಲ್ಲ ಅಷ್ಟೊಂದು ದೊಡ್ಡ ಪಟ್ಟಿಯಾಗುತ್ತ ಹೋಗುತ್ತದೆ. ಕನ್ನಡ ಲಿಪಿಯಿಂದ ಪ್ರಾರಂಭವಾದ ಕನ್ನಡ ಸಾಹಿತ್ಯವೂ ಇಲ್ಲಿಯವರೆಗೂ 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇದು ಇತರ ದ್ರಾವಿಡ ಭಾಷೆಗಳ ಹೋಲಿಕೆಯಲ್ಲಿ ಒಂದು ಮಹಾನ್ ಸಾಧನೆಯಾಗಿದೆ.
ಕ್ರಿಸ್ತಪೂರ್ವ 3ನೇ ಶತಮಾನದಲ್ಲೂ ಪ್ರಚಲಿತದಲ್ಲಿದ್ದ ಭಾಷೆ ಕನ್ನಡವಾಗಿದೆ. ಕನ್ನಡ ಭಾಷೆಯ ಅಸ್ತಿತ್ವದ ಪುರಾವೆಗಳು ಭಾರತದಾದ್ಯಂತ ಮತ್ತು ಕೆಲವೊಮ್ಮೆ ವಿದೇಶಗಳಲ್ಲಿ ಸಾಕಷ್ಟು ಮತ್ತು ಹರಡಿಕೊಂಡಿವೆ. ಉದಾಹರಣೆಗೆ, ಅಶೋಕನ ಶಾಸನದಲ್ಲಿ ‘ಇಸಿಲ’ ಎಂಬ ಪದವು ಕಂಡುಬಂದಿದೆ, ಅದು ಕನ್ನಡ ಭಾಷೆಯಿಂದ ಬಂದ ಪದ ಎಂದು ನಂತರ ದೃಢೀಕರಿಸಲಾಯಿತು. ಇದಲ್ಲದೇ ಕದಂಬರ ಪ್ರಸಿದ್ಧ ಹಲ್ಮಿಡಿ ಶಾಸನವೂ 5 ನೇ ಶತಮಾನದ AD ಯಲ್ಲಿ ಕನ್ನಡ ಭಾಷೆಯ ಅಸ್ತಿತ್ವದ ಪುರಾವೆಗಳ ಅತ್ಯಂತ ಹಳೆಯ ಜೀವಂತ ಸಾಕ್ಷಿಗಳಲ್ಲಿ ಒಂದಾಗಿದೆ. ಇದರಿಂದ ನಾವು ಕನ್ನಡವು ಒಂದು ಅಭಿವೃದ್ಧಿ ಹೊಂದಿದ ಭಾಷೆಯಾಗಿತ್ತು ಎಂಬ ಅಂಶವನ್ನು ತಿಳಿದುಕೊಳ್ಳಬಹುದು.
ಮಾತನಾಡಿದಂತೆ ಬರೆಯಬಹುದಾದ ಹಾಗೂ ಬರೆದಂತೆ ಮಾತನಾಡಬಹುದಾದ ಭಾಷೆ ನಮ್ಮ ಕನ್ನಡ. ಈ ಭಾಷೆಯ ಹುಟ್ಟು, ಇದರ ಸಾಹಿತ್ಯದ ಹುಟ್ಟು ಮತ್ತು ನಂತರದ ಬೆಳವಣಿಗೆ ನಿಜವಾಗಿಯೂ ಕುತೂಹಲಕರ ಮತ್ತು ಆಕರ್ಷಕವಾಗಿದೆ. ಪ್ರಾಚೀನ ಕಾಲದಿಂದ ಅಸ್ತಿತ್ವದಲ್ಲಿರುವ ಮತ್ತು ಇನ್ನೂ ಪ್ರಬಲವಾಗಿರುವ ಕನ್ನಡ ಭಾಷೆಯಲ್ಲಿನ ಕೃತಿಗಳು ಒಂದಕ್ಕಿಂತ ಒಂದು ಅದ್ಭುತವಾಗಿದೆ.