ಬೆಂಗಳೂರು : ಕರ್ನಾಟಕವು ಒಂದು ಭಾರತದ ರಾಜ್ಯ. ಹಲವಾರು ಶಬ್ದಸಂಗ್ರಹಗಳನ್ನು ಕರ್ನಾಟಕದ ಹೆಸರಿನಲ್ಲಿ ಸೂಚಿಸಲಾಗಿದೆ. ಈ ಪ್ರದೇಶವನ್ನು ಭಾರತೀಯ ಇತಿಹಾಸದಲ್ಲಿ ‘ಕರ್ನಾಟ ದೇಶ’ ಎಂದು ಕರೆಯಲಾಗುತ್ತಿತ್ತು. ಕರ್ನಾಟಕ ಎಂಬ ಹೆಸರು ಕರ್ನಾಟ ಎಂಬ ಪದದಿಂದ ಹುಟ್ಟಿಕೊಂಡಿದೆ ಎಂದು ಊಹಿಸಲಾಗಿದೆ. ಮಹಾಭಾರತದಲ್ಲಿಯೂ ಕರ್ನಾಟದ ಅನೇಕ ಉಲ್ಲೇಖಗಳನ್ನು ಮಾಡಲಾಗಿದೆ.

ಕರ್ನಾಟಕ ಎಂಬ ಹೆಸರಿನ ಸಂಭವನೀಯ ಮೂಲ ಹುಡುಕಿದಾಗ ಕನ್ನಡ ಪದಗಳಾದ ಕರ್ ಮತ್ತು ನಾಡು ಅಂದರೆ ಕಪ್ಪುಮಣ್ಣಿನ ಭೂಮಿ ಎಂದರ್ಥ ಬಂದಿತು.

ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು ಏಕೆಂದರೆ ಈ ರಾಜ್ಯವು ಮೊದಲು ಮೈಸೂರು ಪ್ರಾಂತ್ಯದ ಭಾಗವಾಗಿರದ ಪ್ರದೇಶಗಳನ್ನು ಒಳಗೊಂಡಿದೆ.
ಖ್ಯಾತ ಬರಹಗಾರರಾದ ಎಸ್ ಬಿ ಜೋಶಿಯವರು ಕರ್ನಾಟಕವು ಕನ್ನಡ ನಾಡಿನ ಸಂಸ್ಕೃತೀಕೃತ ಆವೃತ್ತಿ ಎಂದು ಭಾವಿಸುತ್ತಾರೆ ಅವರ ಪ್ರಕಾರ ಕನ್ನ ಎಂಬುವುದು ಒಂದು ಬುಡಕಟ್ಟು ಜನಾಂಗವನ್ನು ಪ್ರತಿನಿಧಿಸುತ್ತದೆ. ಇನ್ನು ಇದೇ ಮಾತನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀಯುತ ದ.ರಾ.ಬೇಂದ್ರೆಯವರು ಹೇಳಿದ್ದಾರೆ. ಡಾ. ದ.ರಾ.ಬೇಂದ್ರೆಯವರು ಕರ್ನಾಟಕವು ಕನ್ನಡದ ಸಂಸ್ಕೃತೀಕೃತ ಆವೃತ್ತಿಯಾಗಿದೆ, ಇದು ಎರಡು ಬುಡಕಟ್ಟುಗಳಾದ ಕನ್ನ ಮತ್ತು ನಾಡರ್ ಅಸ್ತಿತ್ವವನ್ನು ಸಂಕೇತಿಸುತ್ತದೆ.
Kanna Tribe Nadar Tribe
ನಮ್ಮ ರಾಜ್ಯವು ಶ್ರೀಗಂಧಕ್ಕೆ ಹೆಸರುವಾಸಿಯಾಗಿರುವುದರಿಂದ ಕಮ್ಮಿಟ್ಟು ನಾಡು ಅನ್ನುವ ಪದದಿಂದಲೂ ಕರ್ನಾಟಕ ಎಂಬ ಹೆಸರು ಬಂದಿರಬಹುದು. ಕಮ್ಮಿಟ್ಟು ನಾಡು ಅಂದರೆ ಸುಗಂಧದ ನಾಡು ಎಂದು ಅರ್ಥ ಬರುತ್ತದೆ.


ನಮ್ಮ ನಾಡು ದಖನ್ ಪ್ರಸ್ಥಭೂಮಿ ಪ್ರದೇಶದಲ್ಲಿರುವುದರಿಂದ ಎತ್ತರದ ಭೂಮಿ ಅಥವಾ ಕರು + ನಾಡು ಎಂಬ ಸಂಸ್ಕೃತೀಕೃತ ಆವೃತ್ತಿಯಿಂದಲೂ ಈ ಹೆಸರು ಬಂದಿರಬಹುದು.

ಈ ನಾಡನ್ನು ಕರುನಾಡು ಎಂದೂ ಮತ್ತು ಇಲ್ಲಿಯ ಜನರನ್ನು ಕರುನಾಡ ಎಂದೂ ಕರೆಯಲಾಗುತ್ತಿತ್ತು ಎಂದು ನಂಬಲಾಗಿದೆ. ತಮಿಳು ಕೃತಿ ಸಿಲಪ್ಪದಿಗಾರಂ ಪ್ರಕಾರ ಇಲ್ಲಿಯ ಜನರನ್ನು ಕರುನಾಡರ್ ಎಂದು ಕರೆಯಲಾಗುತ್ತದೆ.