ಪುನೀತ್ ರಾಜಕುಮಾರ್ ನಿಧನದಿಂದ ಇಡೀ ನಾಡು ಆಘಾತಗೊಂಡಿದೆ. ಕೇವಲ ನಟನೆಯಷ್ಟೇ ಅಲ್ಲದೇ ಹಲವು ಸಮಾಜಮುಖಿ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದ ಪುನೀತ್ ಅದನ್ನು ಹೆಚ್ಚು ಪ್ರಚಾರ ಮಾಡುತ್ತಿರಲಿಲ್ಲ. ಸಾವಿರಾರು ಬಡಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಪುನೀತ್ ಹೊತ್ತಿದ್ದರು. ಈಗ ಅವರ ನಿಧನದ ನಂತರ 1800 ಮಕ್ಕಳ ಜವಾಬ್ದಾರಿ ಹೊರುವುದಾಗಿ ತಮಿಳು ಖ್ಯಾತ ನಟ ವಿಶಾಲ್ ಭಾನುವಾರ ತಿಳಿಸಿದ್ದಾರೆ. ಮುಂದಿನ ವರ್ಷದಿಂದ 1800 ಮಕ್ಕಳ ಜವಾಬ್ದಾರಿ ನನ್ನದು ಎಂದು ಅವರು ತಿಳಿಸಿದ್ದಾರೆ.

ಹೃದಯಾಘಾತದಿಂದ ಪುನೀತ್ ರಾಜ್ ಕುಮಾರ್ ಅಕ್ಟೋಬರ್ 29 ರಂದು ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಪುನೀತ್ ಓದಿಸುತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಹೊಣೆ ತಾನು ಹೊರುವುದಾಗಿ ತಮಿಳು ನಟ ಹೇಳಿದ್ದಾರೆ. ಪುನೀತ್ ರಾಜ್ ಕುಮಾರ್ 1800 ಮಕ್ಕಳನ್ನು ಓದಿಸುತ್ತಿದ್ದರು. ಇದೀಗ ಪುನೀತ್ ನಿರ್ವಹಿಸುತ್ತಿದ್ದ ಜವಾಬ್ದಾರಿ ಹೊರುವುದಾಗಿ ವಿಶಾಲ್ ಹೇಳಿಕೆ ನೀಡಿದ್ದಾರೆ. ಇನ್ಮುಂದೆ ಮಕ್ಕಳ ಶಿಕ್ಷಣದ ಜವಾಬ್ದಾರಿ ನನ್ನದು ಎಂದು ಅವರು ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ಪುನೀತ್ ಜೊತೆಗಿನ ಒಳ್ಳೆಯ ಕ್ಷಣಗಳನ್ನು ಹಂಚಿಕೊಂಡ ಪರಮೇಶ್ವರ್ ಗುಂಡ್ಕಲ್
ಪುನೀತ್ ರಾಜ್ ಕುಮಾರ್ ಸದ್ದಿಲ್ಲದೆ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ಕೂಡ ತೊಡಗಿಕೊಂಡಿದ್ದರು ಎಂಬ ವಿಚಾರ ಅವರ ನಿಧನಾನಂತರ ಹೆಚ್ಚು ಹೆಚ್ಚು ಬಯಲಾಗುತ್ತಿದೆ. ಈ ಬಗ್ಗೆ ಪುನೀತ್ ಬಗ್ಗೆ ಅಭಿಮಾನದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.