ಬೆಂಗಳೂರು: ಸ್ಯಾಂಡಲ್ವುಡ್ನ ಖ್ಯಾತ ನಟ ಪವರ್ಸ್ಟಾರ್ ಪುನೀತ್ ರಾಜ್‍ಕುಮಾರ್ ನಿನ್ನೆ ಹೃದಯಾಘಾತದಿಂದ ವಿಧಿವಶರಾಗಿದ್ದು, ಅಂತ್ಯಕ್ರಿಯೆ ಇಂದೇ ನೆರವೇರುವ ಸಾಧ್ಯತೆಯಿದೆ.
ಪುನೀತ್ ರಾಜ್ ಕುಮಾರ್ ಪುತ್ರಿ ವಿದೇಶದಿಂದ ಇಂದು ಸಾಯಂಕಾಲ 4:30 ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಮಾಹಿತಿ ಇದ್ದು ಪುತ್ರಿಯ ಆಗಮನದ ನಂತರ ಅಂತಿಮ ವಿಧಿವಿಧಾನಗಳು ನಡೆಯಲಿವೆ.
ಹೀಗಾಗಿ ಇಂದು ಸಂಜೆ 6ಗಂಟೆಗೆ ಪುನೀತ್ ರಾಜ್ ಕುಮಾರ್ ಅವರ ಅಂತ್ಯ ಸಂಸ್ಕಾರ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

ಪುನೀತ್ ರಾಜ್ ಕುಮಾರ್ಗೆ ಅಚ್ಚು ಮೆಚ್ಚಿನ ಮಗನಾಗಿದ್ದ ವಿನಯ್ ರಾಜ್‍ಕುಮಾರ್, ಪುನೀತ್ ಅವರ ಅಂತ್ಯ ಸಂಸ್ಕಾರದ ಅಂತಿಮ ವಿಧಿವಿಧಾನ ಕಾರ್ಯ ನೇರವೇರಿಸುವ ಸಾಧ್ಯತೆಯಿದೆ.
ಅಣ್ಣ ರಾಘವೇಂದ್ರ ರಾಜಕುಮಾರ್ ಅವರ ಮಗನಾದ ವಿನಯ್ ಅಪ್ಪುಗೆ ಅಚ್ಚುಮೆಚ್ಚಿನ ಮಗ. ವಿನಯ್ ರಾಜಜಕುಮಾರ್ ರವರೇ ಪುನೀತ್ ರವರ ಅಂತ್ಯಕ್ರಿಯೆ ನಡೆಸುವ ಎಲ್ಲಾ ಸಾಧ್ಯತೆಗಳಿವೆ.