ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನಕ್ಕೆ ಇಡೀ ನಾಡು ಮರುಗುತ್ತಿದೆ. ಚಿತ್ರರಂಗದ ಅನೇಕ ಗಣ್ಯರು ಪುನೀತ್ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ. ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸಿಕೊಡುವ ವೇಳೆ ಪುನೀತ್ ಎಷ್ಟು ಸರಳ ಹಾಗೂ ವಿನಯದಿಂದ ಇರುತ್ತಿದ್ದರೆಂಬ ಬಗ್ಗೆ ಪರಮೇಶ್ವರ್ ಗುಂಡ್ಕಲ್ ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದಾರೆ.
ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಆಗಿರುವ ಪರಮೇಶ್ವರ್ ಗುಂಡ್ಕಲ್ ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸಿಕೊಡುವ ಸಂದರ್ಭ ಪುನೀತ್ ಅವರ ಜೊತೆ ಕಳೆದ ಕೆಲವು ಕ್ಷಣಗಳ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಜೊತೆಗೆ ಕೊನೆಯಸಲ ಅವರ ಕಛೇರಿಗೆ ಭೇಟಿ ನೀಡಿದ್ದಾಗ ಅವರ ಹೊಸ ಡಾಕ್ಯುಮೆಂಟರಿಯ ಬಗ್ಗೆ ತೋರಿಸಿ ಆನಂದಿಸಿದ್ದರು ಎಂದು ಪರಮೇಶ್ವರ್ ಹೇಳಿದ್ದಾರೆ. ಕೋಟ್ಯಾಧಿಪತಿ ಕಾರ್ಯಕ್ರಮದ ವೇಳೆ ಇಡೀ ಸೆಟ್ ಗೆ ಗಿಫ್ಟ್ ನೀಡುತ್ತಿದ್ದರು. ಸೀಸನ್ ನಲ್ಲಿ ಒಮ್ಮೆಯಾದರೂ ಅವರ ಕಡೆಯಿಂದ ಇಡೀ ಸೆಟ್ ಗೆ ಊಟ ಕೊಡಿಸಬೇಕಿತ್ತು. ಅಂತಹ ಉದಾರಜೀವಿ ಕಳೆದುಕೊಂಡಿದ್ದು ದೊಡ್ಡ ಆಘಾತ ತಂದಿದೆ ಎಂದು ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.