ವಿಜಯನಗರ: ನಟ ಪುನೀತ್ ರಾಜ್ ಕುಮಾರ್ ರವರ ನಿಧನದ ಸುದ್ದಿ ತಿಳಿದು ತೀವ್ರ ಮನನೊಂದಿದ್ದ ಅಭಿಮಾನಿಯೊಬ್ಬರು ತುಂಗಾಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೊಸಪೇಟೆಯ ಕಮಲಾಪುರದ 14 ನೇ ವಾರ್ಡ್ ನ ಕಮ್ಮಾರ ದಿನ್ನಿ ಬಡಾವಣೆ ನಿವಾಸಿ ಕಾಳಪ್ಪ (60) ನಟ ಪುನೀತ್ ರಾಜ್ ಕುಮಾರ್ ನಿಧನದಿಂದ ತೀವ್ರ ಮನನೊಂದು ತುಂಗಾಭದ್ರಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾಳಪ್ಪ ಪುನೀತ್ ರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿದ್ದರು. ಮಧ್ಯಾಹ್ನ ಪುನೀತ್ ಅವರ ನಿಧನದ ಸುದ್ದಿ ನೋಡಿ ತೀವ್ರ ಆಘಾತಕ್ಕೆ ಒಳಗಾಗಿದ್ದರು. ಸಂಜೆ ತೀವ್ರ ದುಃಖಿತರಾಗಿ ಕಾಲುವೆಗೆ ಜಿಗಿದಿದ್ದರು. ಸ್ಥಳೀಯರು ರಕ್ಷಣೆ ಮಾಡಿದ್ದರು. ಆದರೆ ರಾತ್ರಿ ಮನೆಯಿಂದ ಹೋಗಿ ಕಾಲುವೆಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.