ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಬಳಗ ಶೋಕಸಾಗರದಲ್ಲಿ ಮುಳುಗಿದ್ದು ತಮ್ಮ ನೆಚ್ಚಿನ ನಟನ ಅಗಲಿಕೆಯನ್ನು ಸಹಿಸಲು ಕಷ್ಟಪಡುತ್ತಿದೆ. ಜೊತೆಗೆ ಕನ್ನಡ ಚಿತ್ರರಂಗವಷ್ಟೇ ಅಲ್ಲದೇ ಇಡೀ ಭಾರತೀಯ ಚಿತ್ರರಂಗ ಪುನೀತ್ ಸಾವಿಗೆ ಕಂಬನಿ ಮಿಡಿಯುತ್ತಿದೆ. ಯಶಸ್ಸಿನ ತುತ್ತತುದಿಯಲ್ಲಿದ್ದರೂ ಸಹ ಸ್ವಲ್ಪವೂ ಅಹಂ ತೋರದೇ ಸರಳ ಸಜ್ಜನಿಕೆಗೆ ಹೆಸರಾಗಿದ್ದ ಅಪ್ಪುರನ್ನು ಇಡೀ ಚಿತ್ರರಂಗ ನೆನೆದು ಕಣ್ಣಿರಾಗುತ್ತಿದೆ.
ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲದೇ ಇಡೀ ಭಾರತೀಯ ಚಿತ್ರರಂಗದಲ್ಲಿ ಪುನೀತ್ ಸ್ನೇಹಬಳಗವನ್ನು ಹೊಂದಿದ್ದರು. ‘ದೊಡ್ಮನೆ ಮಗ’ ಎಂದು ಹೆಸರಾಗಿದ್ದ ಪುನೀತ್ ಚಿತ್ರರಂಗದ ಹಿರಿಯರು ಮಗನಂತೆ, ಕಿರಿಯರು ಸ್ನೇಹಿತಂತೆ ಪ್ರೀತಿಸುತ್ತಿದ್ದರು. ಡಾ.ರಾಜ್ ಜೊತೆಗೆ ಒಡನಾಟವಿದ್ದ ಪ್ರತಿಯೊಬ್ಬರಿಗೂ ಅಪ್ಪು ಮಗುವಿನಂತೆ!
ಬಾಲಿವುಡ್ ದಂತಕತೆ ಅಮಿತಾಬ್ ಬಚ್ಚನ್, ತೆಲುಗಿನ ನಂದಮೂರಿ ಬಾಲಕೃಷ್ಣ, ತಮಿಳುನಾಡು ಸಿಎಂ ಸ್ಟ್ಯಾಲಿನ್, ಪ್ರಧಾನಿ ಮೋದಿ, ಸೇರಿ ಅನೇಕ ಗಣ್ಯರು ಪುನೀತ್ ಸಾವಿಗೆ ಕಂಬನಿ ಮಿಡಿದಿದ್ದಾರೆ.
ತೆಲುಗಿನ ಸ್ಟಾರ್ ನಟ ಜ್ಯೂನಿಯರ್ ಎನ್.ಟಿ.ಆರ್ ತಮ್ಮ ಗೆಳೆಯನ ಅಗಲಿಕೆಯಿಂದ ನೊಂದಿದ್ದಾರೆ. ಪಾರ್ಥೀವ ಶರೀರದ ದರ್ಶನಕ್ಕೆ ಆಗಮಿಸಿದ್ದ ಜ್ಯೂನಿಯರ್ ಎನ್.ಟಿ.ಆರ್ ಗದ್ಗದಿತರಾದ್ರು. ಅಣ್ಣ ಶಿವರಾಜಕುಮಾರ್ ರನ್ನು ಸಂತೈಸಿದ್ರು.
ಸ್ಟಾರ್ ಕೊರಿಯೋಗ್ರಾಫರ್ ಪ್ರಭುದೇವ ತಮ್ಮನೊಂದಿಗೆ ಆಗಮಿಸಿ ದರ್ಶನ ಪಡೆದರು. ನಟಿ ರಾಧಿಕಾ ಆಗಮಿಸಿ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವಾನ ನೀಡಿದರು.
ಇನ್ನು ಜೊತೆಜೊತೆಗೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮೋಹಕತಾರೆ ರಮ್ಯ ಗೆಳೆಯನನ್ನು ಕೊನೆಯಬಾರಿ ನೋಡಲು ಆಗಮಿಸಿದರು. ಚಿತ್ರೀಕರಣಕ್ಕೆಂದು ದುಬೈಗೆ ತೆರಳಿದ್ದ ಬಹುಭಾಷಾ ನಟ ಅರ್ಜುನ್ ಸರ್ಜಾ ಚಿತ್ರೀಕರಣ ಸ್ಥಗಿತಗೊಳಿಸಿ ಪುನೀತ್ ನೋಡಲು ಆಗಮಿಸಿದ್ದಾರೆ.
ಇವರಷ್ಟೇ ಅಲ್ಲದೇ ತೆಲು, ತಮಿಳು, ಹಿಂದಿ, ಮಲೆಯಾಳಂ ಸೇರಿ ಅನೇಕ ಚಿತ್ರರಂಗದ ಗಣ್ಯಾತಿಗಣ್ಯರು ಆಗಮಿಸಿ ಪುನೀತ್ ಅಂತಮ ದರ್ಶನ ಪಡೆದರು.
ಪ್ರತಿ ರಂಗದ್ಲೂ ಗೆಳೆಯರನ್ನು ಹೊಂದಿದ್ದ ಸರಳಜೀವಿ ಪುನೀತ್ ರನ್ನು ಎಲ್ಲರೂ ನೆನೆದು ಭಾವುಕರಾದ್ರು. ತಂದೆಯಂತೆಯೇ ವಿನಯವಂತ ಮತ್ತು ಸಜ್ಜನರಾಗಿದ್ದ ಪುನೀತ್ ರನ್ನು ಕಳೆದುಕೊಂಡ ಚಿತ್ರರಂಗ ಅನಾಥಭಾವ ವ್ಯಕ್ತಪಡಿಸುತ್ತಿದೆ.