ಬೆಂಗಳೂರು : ಕನ್ನಡದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೃದಯಾಘಾತದಿಂದ ಕೊನೆ ಉಸಿರು ಎಳೆದಿದ್ದಾರೆ. ನಗರ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪ್ರಯತ್ನ ನೀಡಿದರು, ಚಿಕಿತ್ಸೆ ಸ್ಪಂದಿಸದೇ ಅವರು ಕೊನೆ ಉಸಿರು ಎಳೆದ್ದಾರೆ.
ಬಾಲ್ಯದಲ್ಲೇ ಕನ್ನಡ ಚಿತ್ರರಂಗ ಪ್ರವೇಶಿಸಿದ ಅವರು ಹಿಂತಿರುಗಿ ನೋಡಲಿಲ್ಲ. ನಟನೆಯ ಜೊತೆಗೆ ಕಿರು ತೆರೆಯಲ್ಲೂ ಯಶಸ್ವಿಯಾಗಿದ್ದ ಅಪ್ಪು, ಗಾಯನದಲ್ಲೂ ಸೈ ಎನಿಸಿಕೊಂಡಿದ್ದರು. ಈ ನಡುವೆ ಅವರು ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿ ಗೆದ್ದಿದ್ದರು.
ಪುನೀತ್ ರಾಜ್‍ಕುಮಾರ್ ಹಿನ್ನಲೆ
ಪುನೀತ್ ರಾಜ್‍ಕುಮಾರ್ 17 ಮಾರ್ಚ್ 1975 ರಂದು ಚೆನೈನಲ್ಲಿ ಜನಿಸಿದರು. 1976ರಲ್ಲಿ ಬಾಲ ನಟನಾಗಿ ಚಿತ್ರರಂಗ ಪ್ರವೇಶ ಮಾಡಿದ ಅವರು 1989ವರೆಗೂ ಹಲವು ಚಿತ್ರಗಳಲ್ಲಿ ನಟಿಸಿದ್ದರು. ವಸಂತ ಗೀತಾ (1980), Bhagyavantha ಭಾಗ್ಯವಂತ (1981), ಚಲಿಸುವ ಮೂಡಗಳು Chalisuva Modagalu (1982), Eradu Nakshatragalu ಎರಡು ಕನಸು (1983), ಭಕ್ತ ಪ್ರಹ್ಲಾದ Prahaladha, Yarivanu ಮತ್ತು ಬೆಟ್ಟದ ಹೂವು (1985) ಅಪಾಯ ಜನರ ಮೆಚ್ಚುಗೆಯನ್ನು ಪಡೆದ ಸಿನಿಮಾಗಳಾಗಿವೆ. ರಾಮು ಪಾತ್ರಕ್ಕಾಗಿ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಬೆಟ್ಟದ ಹೂವು, ಚಲಿಸುವ ಮೋಡಗಳು ಮತ್ತು ಎರಡು ನಕ್ಷತ್ರ ಸಿನಿಮಾಗಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಪಡೆದಿದ್ದರು.
2002 ರಲ್ಲಿ ಅಪ್ಪು ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗ ಪ್ರವೇಶ ಮಾಡಿದ ಪುನೀತ್ ರಾಜ್‍ಕುಮಾರ್, ಅಭಿ (2003), ವೀರ ಕನ್ನಡಿಗ (2004), ಮೌರ್ಯ (2004), ಆಕಾಶ್ (2005), ಅಜಯ್ (2006), ಅರಸು (2007), ಮಿಲನ ಸೇರಿದಂತೆ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದರು. ವಂಶಿ (2008), ರಾಮ್ (2009), ಜಾಕಿ (2010), ಹುಡುಗರು (2011), ರಾಜಕುಮಾರ (2017), ಮತ್ತು ಅಂಜನಿ ಪುತ್ರ (2017)ದಲ್ಲಿ ನಟಿಸಿದ್ದ ಪುನೀತ್ ಅತ್ಯಂತ ಬೇಡಿಕೆಯ ನಟರಾಗಿದ್ದರು.

ಉಚಿತ ಜಾಹೀರಾತು
ಇಷ್ಟೇಲ್ಲ ಸಾಧನೆ ಮಾಡಿದ್ದ ಪುನೀತ್ ರಾಜ್‍ಕುಮಾರ್ ನಂದಿನಿ ಹಾಲು ಉತ್ಪಾದನಾ ಸಂಸ್ಥೆಗೆ ಉಚಿತ ಜಾಹೀರಾತು ಮಾಡುತ್ತಿದ್ದರು. ಕರ್ನಾಟಕ ಈ ಸಂಸ್ಥೆಗೆ ಮತ್ತು ರೈತರಿಗೆ ಅನುಕೂಲವಾಗಬೇಕು ಎನ್ನುವ ಕಾರಣಕ್ಕೆ ಉಚಿತ ಜಾಹೀರಾತು ಮಾಡಿದ್ದರು. ಇದಕ್ಕೂ ಮುನ್ನ ರಾಜಕುಮಾರ್ ಕೂಡಾ ಉಚಿತ ಜಾಹೀರಾತು ಮಾಡುತ್ತಿದ್ದರು. ತಂದೆಯ ಹಾದಿಯಲ್ಲಿದ್ದ ಪುನೀತ್, ಕಡೆವರೆಗೂ ತಾವು ಉಚಿತ ಜಾಹೀರಾತು ಭರವಸೆ ಸಂಸ್ಥೆಗೆ ನೀಡಿದ್ದರು.
ಪುನೀತ್ ರಾಜ್ಕುಮಾರ್ ಈಗ ಪತ್ನಿ ಅಶ್ವಿನಿ ರೇವಂತ್, ಇಬ್ಬರು ಪುತ್ರಿಯರು ಸೇರಿ ಕೋಟ್ಯಾಂತರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ