ಹೈದರಾಬಾದ್ : ಯುಎಸ್ ವೀಸಾ (US VISA) ಪಡೆಯುವುದು ಸ್ವಲ್ಪ ಕಠಿಣ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಕೆಲವೊಬ್ಬರ ನಂಬಿಕೆ ಪ್ರಕಾರ ವೀಸಾ ದೇವರನ್ನು (VISA LORD) ದರ್ಶನ ಮಾಡಿದರೆ ಖಂಡಿತ ವೀಸಾ ಸಿಕ್ಕೇ ಸಿಗುತ್ತದೆ.

ಇದು ಓಸ್ಮಾನ್ ಸಾಗರ್ (Osman Sagar) ಸರೋವರದ ದಡದಲ್ಲಿರುವ ಪುರಾತನ ದೇವಾಲಯಗಳಲ್ಲಿ (Old Temple) ಒಂದು ಹಾಗೇಯೆ ಹೈದರಾಬಾದ್ (Hyderabad) ಜಿಲ್ಲೆಯ ಅತ್ಯಂತ ಹಳೆಯ ದೇವಾಲಯವೂ ಆಗಿದೆ. ಸ್ವಾಮಿ ವೆಂಕಟೇಶ್ವರ ಇಲ್ಲಿ ಪೂಜಿಸಲ್ಪಡುವ ದೇವರು. ಅವನನ್ನು ವೀಸಾ ನೀಡುವ ಬಾಲಾಜಿ (Lord Balaji) ಎಂತಲೂ ಕರೆಯಲಾಗುತ್ತದೆ.
ಇದನ್ನೂ ಓದಿ : Sindhagi By Elections : ಪ್ರತಿ ಹಳ್ಳಿಗೆ 30 ರಿಂದ 40 ಲಕ್ಷ ರೂಪಾಯಿ ಹಂಚಿಕೆ ಆಗಿದೆ – ಎಚ್. ಡಿ. ಕುಮಾರಸ್ವಾಮಿ
ಹೈದರಾಬಾದ್‌ನಿಂದ ಸುಮಾರು 45 ನಿಮಿಷಗಳ ಪ್ರಯಾಣ ಮಾಡಿ ತಲುಪಬಹುದಾದ ಈ ದೇವಸ್ಥಾನವೂ ಅಮೇರಿಕದ ವೀಸಾ ಪಡೆಯ ಬಯಸುವ ಆಕಾಂಕ್ಷಿಗಳಿಗೆ (Aspirants) ಅತ್ಯಂತ ಪ್ರಮುಖವಾದ ಯಾತ್ರಾ ಸ್ಥಳ ಎಂತಲೇ ಪ್ರಸಿದ್ದವಾಗಿದೆ. ಇಲ್ಲಿ ಬಂದು ಬೇಡಿಕೊಳ್ಳುವ ಭಕ್ತಾಧಿಗಳ ವೀಸಾ ಯಾವುದೇ ತೊಂದರೆ ಇಲ್ಲದಂತೆ ನಿರಾಯಾಸವಾಗಿ ಸಿಗುತ್ತದೆ ಎಂಬುದು ಇಲ್ಲಿರುವವರ ನಂಬಿಕೆ.

ಈ ದೇವಾಲಯದ ಬಗ್ಗೆ ನಿಗೂಢ ಸಂಗತಿಯೆಂದರೆ ಇಲ್ಲಿಗೆ ಬಂದ ಪ್ರತಿಯೊಬ್ಬ ಅಮೇರಿಕದ ವೀಸಾ ಪಡೆಯ ಬಯಸುವ ಭಕ್ತನಿಗೂ ವೀಸಾ ಸಿಕ್ಕಿದೆಯಂತೆ. ಅದನ್ನು ಲಾ ಒಫ್ ಅಟ್ರ್ಯಾಕ್ಷನ್ (Law of Attraction) ಅನ್ನಬಹುದೋ ಅಥವಾ ನಿಜವಾದ ವೆಂಕಟೇಶ್ವರನ ಆಶೀರ್ವಾದವೋ ನಮಗೆ ತಿಳಿದಿಲ್ಲ. ಈ ದೇವಸ್ತಾನಕ್ಕೆ ಹೆಚ್ಚಾಗಿ ಯುವಕರೇ ಬರುವುದರಿಂದ ಇದನ್ನು ಟಂಪಲ್ ಆಫ್ ದಿ ಯೂತ್ (Temple of the Youth) ಅಂತಲೂ ಕರೆಯುತ್ತಾರೆ.
ಇದನ್ನೂ ಓದಿ : Haasanaambhe : ಇಂದಿನಿಂದ ಭಕ್ತರಿಗೆ ವಿಶ್ವರೂಪ ದರ್ಶನ ನೀಡಿದ ಪುರಾಣ ಪ್ರಸಿದ್ದ ಹಾಸನಾಂಬೆ
ಚಿಲ್ಕೂರ್ (Chilkoor) ಬಾಲಾಜಿ ದೇವಸ್ಥಾನ ರಂಗಾರೆಡ್ಡಿ (Rangareddy District) ಜಿಲ್ಲೆಯಲ್ಲಿದೆ. ಭಕ್ತ ರಾಮದಾಸ (Ramadasa) ರ ಚಿಕ್ಕಪ್ಪಂದಿರಾದ ಮಾದಣ್ಣ ಮತ್ತು ಅಕ್ಕಣ್ಣನ ಕಾಲದಲ್ಲಿ ಇದನ್ನೂ ನಿರ್ಮಿಸಲಾಗಿತ್ತು. ಈ ದೇವಾಲಯವು ಕಾಣಿಕೆಯ ಹುಂಡಿಯನ್ನು ಹೊಂದಿಲ್ಲ ಮತ್ತು ಭಕ್ತರಿಂದ ಯಾವುದೇ ಹಣವನ್ನು ಸ್ವೀಕರಿಸುವುದಿಲ್ಲ ಎಂಬುದು ಮತ್ತೊಂದು ವಿಶೇಷ.