ನವದೆಹಲಿ : ಇನ್ನೇನು ದೀಪಾವಳಿ (Deepavali) ಹಬ್ಬ ಬರುತ್ತಿದೆ. ದೇಶದಾದ್ಯಂತ ಜನರು ಸಂಭ್ರಮದ ತಯಾರಿಯಲ್ಲಿದ್ದಾರೆ. ಇದೇ ವೇಳೆ ಪಟಾಕಿ ನಿಷೇಧದ (Crackers Ban) ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಗುರುವಾರ ಹೇಳಿದೆ.

ನ್ಯಾಯಮೂರ್ತಿ ಎ. ರು. ಬೋಪಣ್ಣ ಜತೆಗೆ ನ್ಯಾಯಮೂರ್ತಿ ಎಂ. ಆರ್. ಷಾ ನೇತೃತ್ವದ ಪೀಠವು ಪಟಾಕಿ ನಿಷೇಧ ಯಾವುದೇ ನಿರ್ದಿಷ್ಟ ಹಬ್ಬಕ್ಕೆ ವಿರುದ್ಧವಾಗಿಲ್ಲ, ಆದರೆ ಪ್ರತಿಯೊಬ್ಬ ಇತರ ನಾಗರೀಕರ ಬದುಕುವ ಹಕ್ಕನ್ನು ರಕ್ಷಿಸುವ ಅಗತ್ಯವೂ ಇದೆ ಎಂದು ಒತ್ತಿ ಹೇಳಿದರು. ನಾವು ಯಾರದೇ ಸಂತೋಷ ಮತ್ತು ಸಂಭ್ರಮದ ಮಧ್ಯೆ ಬರಲು ಇಚ್ಛಿಸುವುದಿಲ್ಲ. ಆದರೆ ಸಂತೋಷಕ್ಕಾಗಿ ಇತರರ ಮೂಲಭೂತ ಹಕ್ಕಿನೊಂದಿಗೆ (Fundamental Right) ಆಟವಾಡಲು ಸಹ ಬೀಡುವುದಿಲ್ಲ ಎಂದು ಪೀಠ ಹೇಳಿದೆ.
ಇದನ್ನೂ ಓದಿ : Facebook or Fakebook : ಫೇಸ್‌ಬುಕ್ ಭಾರತದಲ್ಲಿ ‘ಫೇಕ್‌ಬುಕ್’ ರೂಪ ತಾಳಿದೆಯೇ – ಹೀಗೊಂದು ಸುದ್ದಿ ವೈರಲ್
ಈ ಆದೇಶಗಳನ್ನು ಅನುಷ್ಠಾನಗೊಳಿಸುವ ಹೊಣೆಗಾರಿಕೆ ವಹಿಸಿರುವ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ ತೋರಬೇಕು ಎಂದು ಪೀಠ ಹೇಳಿದೆ. ಶೇ 100 ರಷ್ಟು ಪಟಾಕಿಯನ್ನು ನಿಷೇಧಿಸಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ ಎಲ್ಲಾ ಪಟಾಕಿಗಳನ್ನು ನಿಷೇಧಿಸಿಲ್ಲ. ಆದರೆ ನಿಷೇಧಿತ ವಸ್ತುಗಳಿಂದ (Banned Raw Material) ತಯಾರಿಸಿದ ಪಟಾಕಿ (Crackers) ಗಳೊಂದಿಗೆ ಹಬ್ಬಗಳನ್ನು ಆಚರಿಸಲು ಅವಕಾಶ ನೀಡಬಾರದು.

ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪಟಾಕಿ ಪ್ರಕರಣದ ವಾದ ವಿವಾದಗಳಲ್ಲಿ ವಕೀಲರೊಬ್ಬರು ದೆಹಲಿಯಲ್ಲಿ ಪಟಾಕಿ ನಿಷೇಧದ ಬಗ್ಗೆ ಉಲ್ಲೇಖಿಸಿದ್ದಾರೆ. ದಿಲ್ಲಿಯ ಜನರು ಎದುರಿಸುತ್ತಿರುವ ಸಮಸ್ಯೆಗಳು ನಮಗೆ ತಿಳಿದಿದೆ. ನ್ಯಾಯಾಲಯದ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಾವು ಬಯಸುತ್ತೇವೆ ಎಂದು ಪೀಠ ಉತ್ತರಿಸಿದೆ.
ಇದನ್ನೂ ಓದಿ : The Visa Lord – Hyderabad : ವಿದೇಶಕ್ಕೆ ಹೋಗಬೇಕೆ ? ಹಾಗಾದರೆ ವೀಸಾ ದೇವರ ದರ್ಶನ ಮಾಡಿ
ಪ್ರಕರಣದ ವಿಚಾರಣೆ ಶುಕ್ರವಾರವೂ ಮುಂದುವರಿಯಲಿದೆ. ಪಟಾಕಿ ತಯಾರಕರು ನಿಷೇಧಿತ ಬೇರಿಯಂ ರಾಸಾಯನಿಕಗಳನ್ನು ಬಳಸುತ್ತಿದ್ದಾರೆ ಎಂದು ಹೇಳಿರುವ ಸಿಬಿಐನ ಪ್ರಾಥಮಿಕ ತನಿಖಾ ವರದಿಯ ಕುರಿತು ಸುಪ್ರಿಂ ಕೋರ್ಟ್ ಪಟಾಕಿ ತಯಾರಕರಿಂದ ಪ್ರತಿಕ್ರಿಯೆ ಕೇಳಿದೆ.