ಮನುಷ್ಯನಿಗೆ ರೋಗಗಳು (Disease) ಮತ್ತು ಸೋಂಕು (Viral Infections) ಗಳಿಂದ ತನ್ನ ದೇಹವನ್ನು ಆರೋಗ್ಯಕರ (Healthy) ವಾಗಿ ಮತ್ತು ಸುರಕ್ಷಿತ (Protection) ವಾಗಿರಿಸಲು ಬಲವಾದ ರೋಗ ನಿರೋಧಕ ಶಕ್ತಿ (Strong Immunity Sytem) ಬಹಳ ಅಗತ್ಯ. ಈ ಕಾರಣದಿಂದಲೇ ಕರೋನಾ (Corona) ದಂತಹ ಈ ಸಮಯದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಗ್ಗೆ ಹೆಚ್ಚಿನ ಜನರು ಪ್ರಮುಖ್ಯತೆ (Importance) ಕೊಡುತ್ತಿದ್ದಾರೆ.

ಆರೋಗ್ಯ ತಜ್ಞರ (Health Advisor) ಪ್ರಕಾರ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಮೂಲಕ ಕರೋನಾ ಮಾತ್ರವಲ್ಲದೆ ಕ್ಯಾನ್ಸರ್ (Cancer) ನಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಸಹ ಕಡಿಮೆ ಮಾಡಬಹುದು. ಆದರೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಹೇಗೆ? ನಮ್ಮ ಜೀವನಶೈಲಿ (Daily Lifestyle) ಅನೇಕ ಅಭ್ಯಾಸಗಳು (Habits) , ಆಹಾರ ಪದ್ದತಿಗಳು (Food) ಹಾಗೂ ಮಾನಸಿಕ ಒತ್ತಡಗಳು (Stress) ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ದುರ್ಬಲ (Weak) ಗೊಳಿಸಬಹುದು.

ನಿಯಮಿತವಾದ ವ್ಯಾಯಾಮ (Exercie), ಆಹಾರದಲ್ಲಿ ಪೌಷ್ಟಿಕಾಂಶ (Nutrition) ಗಳನ್ನು ಸೇರಿಸುವುದರೊಂದಿಗೆ ಹಾಗೂ ಅನೇಕ ಕೆಟ್ಟ ಚಟ (Bad Habits) ಗಳಿಂದ ದೂರವಿರುವಿಕೆಯಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು.
ಮದ್ಯಪಾನ ಮತ್ತು ಧೂಮಪಾನಕ್ಕೆ ಹೇಳಿ ‘ನೋ’ – ಆಲ್ಕೋಹಾಲ್ (Alcohol) ಸೇವನೆ ಮತ್ತು ಧೂಮಪಾನ (Smoking) ಈ ಎರಡನ್ನೂ ಕೂಡ ದೇಹದ ರೋಗ ನಿರೋಧಕ ಶಕ್ತಿಗೆ ಪ್ರಮುಕ ಶತ್ರುಗಳೆಂದು ಪರಿಗಣಿಸಲಾಗುತ್ತದೆ. ಮಧ್ಯಪಾನ ಮತ್ತು ಧೂಮಪಾನ ಮಾಡುವವರ ರೋಗನಿರೋಧಕ ಶಕ್ತಿ ಇತರ ಜನರಿಗಿಂತ ದುರ್ಬಲವಾಗಿರಬಹುದು ಎಂದು ಅಧ್ಯಯನಗಳು ತೋರಿಸುತ್ತವೆ.

ಈ ಕಾರಣದಿಂದಾಗಿ ಅಂತಹ ಜನರು ಇತರ ಜನರಿಗಿಂತ ಸೋಂಕು ಅಥವಾ ಇತರ ಕಾಯಿಲೆಗಳಿಗೆ ಹೆಚ್ಚು ಒಳಗಾಗುತ್ತಾರೆ. ಆದ್ದರಿಂದ ಮದ್ಯಪಾನ ಮತ್ತು ಧೂಮಪಾನಕ್ಕೆ ಇಂದಿನಿಂದಲೇ ‘ನೋ’ ಹೇಳಿ.
ಹೆಚ್ಚು ಸಕ್ಕರೆ ಸೇವಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಿ – ಹೆಚ್ಚು ಸಕ್ಕರೆ (Sugar) ಯನ್ನು ಸೇವಿಸುವ ಜನರು ಮಧುಮೇಹ (Diabetic) ವನ್ನು ಮಾತ್ರವಲ್ಲದೆ ರೋಗನಿರೋಧಕ ಶಕ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಹೊಂದಬಹುದು. ವಿಶೇಷವಾಗಿ ಸಕ್ಕರೆ ಸೇರಿಸಿದ ಆಹಾರಗಳು ದೇಹದ ವ್ಯವಸ್ಥೆಗೆ ಗಂಭೀರ ಹಾನಿಯನ್ನುಂಟುಮಾಡುತ್ತವೆ.

ಸಕ್ಕರೆಯ ಅತಿಯಾದ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗುತ್ತದೆ, ಇದು ಕರುಳಿನಲ್ಲಿರುವ ಬ್ಯಾಕ್ಟೀರಿಯಾ (Bacteria) ಗಳ ಕಾರ್ಯಗಳ ಮೇಲೆಯೂ ಸಹ ಪರಿಣಾಮ ಬೀರುತ್ತದೆ. ಇದು ರೋಗನಿರೋಧಕ ಶಕ್ತಿಗೆ ಹಾನಿಕಾರಕವೆಂದು ಪರಿಗಣಿಸಲಾಗಿದೆ.
ವ್ಯಾಯಾಮ ಮಾಡುವ ಅಭ್ಯಾಸವನ್ನು ಇಂದಿನಿಂದಲೇ ರೂಢಿಸಿಕೊಳ್ಳಿ – ದೈಹಿಕ ನಿಷ್ಕ್ರಿಯತೆ (Inactive) ಯಿಂದಲೂ ಕೂಡ ರೋಗನಿರೋಧಕ ಶಕ್ತಿ ದುರ್ಬಲವಾಗುತ್ತದೆ. ಇದರ ಜೊತೆಗೆ ಸಂಧಿವಾತ (Arthrities), ಮಧುಮೇಹ (Diabetes) ಮತ್ತು ಹೃದ್ರೋಗ (Heart Disease) ಗಳ ಅಪಾಯ ಹೆಚ್ಚಾಗುತ್ತವೆ.

ದೇಹವನ್ನು ಕ್ರಿಯಾಶೀಲ (Active) ವಾಗಿರಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು. ಪ್ರತಿ ದಿನ ಕನಿಷ್ಠ 20-30 ನಿಮಿಷಗಳ ವ್ಯಾಯಾಮವನ್ನು ಮಾಡಬೇಕು. ಒಟ್ಟಾರೆ ಆರೋಗ್ಯಕ್ಕೆ ಇದು ಬಹಳ ಪ್ರಯೋಜನಕಾರಿ.
ಮಾನಸಿಕ ಒತ್ತಡಗಳನ್ನು ನಿವಾರಿಸಿಕೊಳ್ಳಿ – ಮಾನಸಿಕ ಆರೋಗ್ಯ (Mental Stress) ಅಥವಾ ಮನಃಶಾಂತಿ (The Peace of Mind) ಎಂಬುದು ಇಲ್ಲವಾದರೆ ಅಲ್ಲಿಂದಲೇ ಎಲ್ಲ ರೋಗಗಳ ಮೂಲ ಪ್ರಾರಂಭವಾಗುತ್ತದೆ. ಹಾಗಾಗಿ ದೈಹಿಕ ವ್ಯಾಯಾಮ ಹಾಗು ದೈಹಿಕ ಆರೋಗ್ಯಕ್ಕೆ ಎಷ್ಟು ಮಹತ್ವ ಕೋಡುತ್ತಿರೋ ಅದಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಮನಸ್ಸಿನ ಆರೋಗ್ಯ (Mental Health) ಕ್ಕೂ ಕೋಡಬೇಕು.

ಇದಕ್ಕಾಗಿ ನಿಮಗೆ ಇಷ್ಟವಾದ ಸಂಗೀತ (Music) ಕೇಳಿ, ನೀವು ಇಷ್ಟ ಪಡುವ ಕೆಲಸ (Work you Like the Most) ಗಳನ್ನು ಮಾಡಿ, ನೀವು ಇಷ್ಟ ಪಡುವ ಜನರೊಂದಿಗೆ (Spend time with People you like) ಕಾಲ ಕಳೆಯಿರಿ ಸಾಧ್ಯವಾದರೆ ನೀವು ಇಷ್ಟ ಪಡುವ ಸ್ಥಳ (Visit Places you like the most) ಗಳಿಗೆ ಬೇಟಿ ಕೊಡಿ. ಪುಸ್ತಕ (Positive Mental Attitude Books) ಗಳನ್ನು ಓದಿ. ಇದರಿಂದ ನೀವು ಮಾನಸಿಕ ಒತ್ತಡ (Mental Stress) ಗಳಿಂದ ಮುಕ್ತಿ ಪಡೆಯಬಹುದು.

ಸರಿಯಾಗಿ ನಿದ್ದೆ (Sleep) ಮಾಡುವುದನ್ನ ಮರೆಯಬೇಡಿ – ಪ್ರಶಾಂತವಾದ ನಿದ್ದೆ (Peaceful Sleep) ಯೂ ಸಹ ನಮ್ಮ ಆರೋಗ್ಯದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಎಷ್ಟು ಸಮಯ ನಿದ್ದೆ ಮಾಡುತ್ತಿರ ಎನ್ನುವುದಕ್ಕಿಂತ ಎಷ್ಟು ಪ್ರಶಾಂತವಾಗಿ ನಿದ್ದೆ ಮಾಡುತ್ತಿರಾ ಎನ್ನುವುದು ವಿಶೇಷ ಪಾತ್ರ ವಹಿಸುತ್ತದೆ.