ಕೋಲಾರ : ನಾನು ಸತ್ತ ಮೇಲೆ ನನ್ನ ಫೋಟೋ ಇರೋ ಬ್ಯಾನರ್ (Banner) ಹಾಕಿ. ನಾನು ಸಾಯಲು ಹೋಗುತ್ತಿದ್ದೇನೆ ಎಂದು ಮೆಸೇಜ್ (Messgae) ಹಾಕಿ 17 ವರ್ಷದ ಪಿಯು ವಿದ್ಯಾರ್ಥಿ (P U Student) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯನ್ನು ಶ್ರೀನಿವಾಸಪುರದ ಗಂಗೋತ್ರಿ ಕಾಲೇಜಿ (Gangotri College) ನಲ್ಲಿ ಪ್ರಥಮ ಪಿಯು (First P U) ಓದುತ್ತಿದ್ದ ಕಿಶೋರ್ ಕುಮಾರ್ (Kishor Kumar) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ : ಮೈಕ್ರೊಪ್ಲಾಸ್ಟಿಕ್ ಎಂಬ ಕಾಣದ ರಾಕ್ಷಸ ಹಸು ಮತ್ತು ಮನುಷ್ಯರ ದೇಹಕ್ಕೆ ಎಂಟ್ರಿ – ವಿಜ್ಙಾನಿಗಳೇ ಆತಂಕ
ಆತ್ಮಹತ್ಯೆಗೂ ಮುನ್ನ ವಾಟ್ಸಪ್ ಗ್ರೂಪ್ (Whats App Group) ನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದ ಕಿಶೋರ್ ಕುಮಾರ್ ನಾನು ಸತ್ತ ಮೇಲೆ ನನ್ನ ಫೋಟೋ ಇರೋ ಬ್ಯಾನರ್ ಹಾಕಿ. ನಾನು ಸಾಯಲು ಹೋಗುತ್ತಿದ್ದೇನೆ. I am going to RIP, I miss You Friends ಎಂದು ಬರೆದಿದ್ದಾನೆ. ಆದರೆ ತನ್ನ ಈ ನಿರ್ಧಾರಕ್ಕೆ ನಿಖರ ಕಾರಣ ತಿಳಿಸಿಲ್ಲ.

ಕೋಲಾರ (Kolar) ಜಿಲ್ಲೆಯ ಶ್ರೀನಿವಾಸಪುರ (Srinivasapur) ಪಟ್ಟಣದ ಹೊರವಲಯದ ಕೆರೆಗೆ ಹಾರಿ ಕಿಶೋರ್ ಕುಮಾರ್ ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ಇಂದು ಬೆಳಗ್ಗೆ ಅಗ್ನಿಶಾಮಕದಳದ ಸಿಬ್ಬಂದಿ ವಿದ್ಯಾರ್ಥಿಯ ಶವ ಹೊರ ತೆಗೆದಿದ್ದಾರೆ.
ಇದನ್ನೂ ಓದಿ : ತಮಿಳುನಾಡಿನಲ್ಲಿ ಭೀಕರ ಅಗ್ನಿ ದುರಂತ – ಪಟಾಕಿ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ – 6 ಜನರ ಸಾವು. 25ಕ್ಕೂ ಹೆಚ್ಚು ಜನರಿಗೆ ಗಾಯ
ಸ್ಥಳಕ್ಕಾಗಮಿಸಿದ ಪೊಲೀಸರು ಕಿಶೋರ್ ಕುಮಾರ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.