ಆಹಾರ ಪದಾರ್ಥಗಳ ಸ್ವಾದವನ್ನು ಹೆಚ್ಚಿಸಲು ಬಳಕೆಯಾಗುವ ಬೆಳ್ಳುಳ್ಳಿ ತನ್ನ ಒಡಲಲ್ಲಿ ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಅನಾದಿಕಾಲದಿಂದ ಮಾನವರು ಅಡುಗೆಯಲ್ಲಿ ಬಳಕೆ ಮಾಡಿಕೊಂಡು ಬಂದಿದ್ದಾರೆ. ಆದರೆ ಆಧುನಿಕ ಯುಗದಲ್ಲಿ ಕೆಲವರು ಇದು ದುರ್ವಾಸನೆ ಬೀರುತ್ತದೆ ಎನ್ನುವ ಕಾರಣಕ್ಕೆ ಬಳಕೆ ಮಾಡಲು ಮುಂದಾಗುವುದಿಲ್ಲ.

ಆರೋಗ್ಯದ ದೃಷ್ಟಿಯಿಂದ ಇದನ್ನು ಒಗ್ಗರಣೆಯಾಗಿ, ತಂಬುಳಿ, ಚಟ್ನಿಗಳಲ್ಲಿ ಬಳಕೆ ಮಾಡುವುದು ಸೂಕ್ತವಾಗಿದೆ. ಹೆಚ್ಚಿನ ವಾಸನೆ ಹೊಂದಿರುವ, ಖಾರವಾಗಿರುವ ಬೆಳ್ಳುಳ್ಳಿಯನ್ನು ತಿಂದರೆ ತಾನು ಧೈರ್ಯಶಾಲಿ, ಬಲಶಾಲಿಗಳಾಗುತ್ತೇವೆ ಎನ್ನುವ ಭಾವನೆಯನ್ನು ರೋಮನ್ನರು ಹೊಂದಿದ್ದರು. ಇದನ್ನು ಮಧ್ಯಯುಗದಲ್ಲಿ ಪ್ಲೇಗ್‌ನಿಂದ ರಕ್ಷಣೆ ಮಾಡಿಕೊಳ್ಳಲು ಬಳಕೆ ಮಾಡಲಾಗುತ್ತಿತ್ತು. ಇದು ಔಷಧೀಯ ಗುಣ ಹೊಂದಿದೆ ಎನ್ನುವ ಮಾಹಿತಿ ಪ್ರಾಚೀನ ಕಾಲದ ಜನರಿಗೆ ಗೊತ್ತಿದ್ದರೂ ಈ ಬಗ್ಗೆ ನಿಖರವಾದ ಮಾಹಿತಿಗಳು ನಮಗೆ ಅಧುನಿಕ ಕಾಲದಲ್ಲಷ್ಟೇ ಲಭ್ಯವಾದವು.
ಇದನ್ನೂ ಓದಿ : IMMUNITY SYSTEM : ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಸರಳ ಉಪಾಯಗಳು
ಬೆಳ್ಳುಳ್ಳಿಯನ್ನು ಮೊದಲು ಏಷ್ಯಾದಲ್ಲಿ ಬೆಳೆಯಲು ಪ್ರಾರಂಭಿಸಲಾಯಿತು. ಇದರ ತವರು ಸೈಬಿರಿಯಾ ಎನ್ನಲಾಗಿದೆ. ಈಗ ಇದು ಪ್ರಪಂಚದ ಹಲವು ಕಡೆ ಬೆಳೆಯಲಾಗುತ್ತಿದೆ. ಬೆಳ್ಳುಳ್ಳಿಯ ಎಸಳನ್ನು ಭೂಮಿಯೊಳಗೆ ಹೂತು ಇದನ್ನು ಬೆಳೆಸಲಾಗುತ್ತದೆ. ಇದು ವಾರ್ಷಿಕ ಬೆಳೆಯಾಗಿದ್ದು ಈರುಳ್ಳಿಯನ್ನು ಬೆಳೆಯುವ ರೀತಿಯಲ್ಲಿ ಇದರ ಕೃಷಿ ಮಾಡಲಾಗುತ್ತದೆ.

ಆಂಟಿ ಬಯೋಟಿಕ್ : ಬೆಳ್ಳುಳ್ಳಿಯಲ್ಲಿ ಆಲಿಯಂ ಎನ್ನುವ ಆಂಟಿ ಬಯೋಟಿಕ್‌ನ್ನು ಇರುತ್ತದೆ. ಇದು ನಮ್ಮ ದೇಹದಲ್ಲಿ ಯಾವುದೇ ರೀತಿಯ ನಂಜು ಬರದಂತೆ ಪ್ರತಿರೋಧ ತೋರುವ ಗುಣವನ್ನು ಹೊಂದಿದೆ. ಬೆಳ್ಳುಳ್ಳಿ ಅಧಿಕ ರಕ್ತದ ಒತ್ತಡವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೃದ್ರೋಗಗಳಿಗೆ ಬೆಳ್ಳುಳ್ಳಿಯ ಬಳಕೆ ಉತ್ತಮ ಎಂದು ವೈದ್ಯಲೋಕ ಕಂಡುಕೊಂಡಿದೆ. ವಯಸ್ಸಾದವರಲ್ಲಿ ಕಂಡು ಬರುವ ರಕ್ತನಾಳಗಳ ಸಂಕುಚಿತ, ವಿಕಸಿತ ಸಮಸ್ಯೆಯನ್ನು ಬೆಳ್ಳುಳ್ಳಿ ನಿವಾರಿಸಬಲ್ಲದು.
ಇದನ್ನೂ ಓದಿ : ಮೈಕ್ರೊಪ್ಲಾಸ್ಟಿಕ್ ಎಂಬ ಕಾಣದ ರಾಕ್ಷಸ ಹಸು ಮತ್ತು ಮನುಷ್ಯರ ದೇಹಕ್ಕೆ ಎಂಟ್ರಿ – ವಿಜ್ಙಾನಿಗಳೇ ಆತಂಕ
ಇದು ಕಫ ನಿವಾರಿಸಲು ಉತ್ತಮವಾಗಿದೆ. ಕರುಳಿ ವ್ಯಾಧಿ ನಿವಾರಣೆಗೆ ಬೆಳ್ಳುಳ್ಳಿ ಬಳಕೆ ಸೂಕ್ತಕರವಾಗಿದೆ. ಕೀಟಗಳು ಕಡಿದಾಗ ಬೆಳ್ಳುಳ್ಳಿಯನ್ನು ಜಜ್ಜಿ ಆ ಜಾಗಕ್ಕೆ ಉಜ್ಜಿದರೆ ನವೆ ಕಡಿಮೆಯಾಗುತ್ತದೆ. ಬೆಳ್ಳುಳ್ಳಿಯ ರಸ ಶೀತ ಕಡಿಮೆ ಮಾಡಲು ಸಹಕಾರಿಯಾಗಿದೆ. ಹೊಟ್ಟೆಯ ಕ್ಯಾನ್ಸರ್, ಸ್ತನದ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ತಡೆಯಲು ಬೆಳ್ಳುಳ್ಳಿ ಉತ್ತಮ ಎಂದು ಹೇಳಲಾಗಿದೆ. ಪ್ರೊಸ್ಟೇಟ್ ಕ್ಯಾನ್ಸರ್ ಗುಣಪಡಿಸಲು ಬೆಳ್ಳುಳ್ಳಿ ಬಳಕೆ ಮಾಡಲಾಗುತ್ತದೆ. ಕಿವಿ ನೋವು ಉಂಟಾದ ಸಂದರ್ಭದಲ್ಲಿ ಬೆಳ್ಳುಳ್ಳಿಯನ್ನು ತುಂಡು ಮಾಡಿ ಹತ್ತಿಯೊಳಗಿಟ್ಟು ಕಿವಿಯೊಳಗೆ ಇಟ್ಟರೆ ನೋವು ನಿವಾರಣೆಯಾಗುತ್ತದೆ. ಬೆಳ್ಳುಳ್ಳಿಯ ಎಣ್ಣೆ ಚರ್ಮ ಅಥವಾ ಉಗುರಿಗೆ ಉಂಟಾದ ಸೋಂಕು ನಿವಾರಣೆಗೆ ರಾಮಬಾಣವಾಗಿದೆ.

ಬೆಳ್ಳುಳ್ಳಿಯೂ ಊಟ ಮಾಡುವ ಮುನ್ನ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಡಯಾಬಿಟಿಕ್ ರೋಗಿ ಅಥವಾ ಡಯಾಬಿಟಿಸ್ ಇಲ್ಲದವರಲ್ಲೂ ಕಡಿಮೆ ಮಾಡಬಲ್ಲದು. ಬೆಳ್ಳುಳ್ಳಿಯನ್ನು ನಿಯಮಿತವಾಗಿ ಮೂರು ತಿಂಗಳ ಕಾಲ ತೆಗೆದುಕೊಂಡರೆ ಡಯಾಬಿಟಿಕ್ ರೋಗಿಗಳಲ್ಲಿ ಊಟ ಮಾಡುವ ಮುನ್ನ ರಕ್ತದಲ್ಲಿರುವ ಸಕ್ಕರೆ ಅಂಶ ಕಡಿಮೆ ಕಂಡು ಬರುತ್ತದೆ. ಬೆಳ್ಳುಳ್ಳಿ ಬಳಕೆ ಕೆಟ್ಟ ಕೊಲೆಸ್ಟ್ರಾಲ್, ಒಟ್ಟಾರೆ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ. ಪ್ರತಿನಿತ್ಯ ಎಂಟು ವಾರಗಳ ಕಾಲ ಬೆಳ್ಳುಳ್ಳಿ ಸೇವನೆ ಮಾಡಿದರೆ ಇದರ ಪರಿಣಾಮ ಹೆಚ್ಚು ಇರುತ್ತದೆ.
ಇದನ್ನೂ ಓದಿ : UTTAR PRADESH : ರಿಕ್ಷಾ ಚಾಲಕನಿಗೆ ಬಂತು ಐಟಿ (IT) ನೋಟಿಸ್ – 3 ಕೋಟಿ ಪಾವತಿಗೆ ಆಗ್ರಹ
ಒಗ್ಗರಣೆಯಲ್ಲಿ ಬಳಕೆ : ಬೆಳ್ಳುಳ್ಳಿಯನ್ನು ವಾರಕ್ಕೆ ಕನಿಷ್ಠ ಎರಡು ಅಥವಾ ಮೂರು ಬಾರಿ ಅಡುಗೆಯಲ್ಲಿ ಬಳಕೆ ಮಾಡುವುದು ಅದರ ಔಷಧೀಯ ಗುಣಗಳ ಹಿನ್ನೆಲೆಯಲ್ಲಿ ಬಹಳ ಸೂಕ್ತಕರವಾಗಿದೆ. ಬೆಳ್ಳುಳ್ಳಿಯನ್ನು ಎಣ್ಣೆಯಲ್ಲಿ ಹದವಾಗಿ ಹುರಿದು ಒಗ್ಗರಣೆಯಲ್ಲಿ ಬಳಕೆ ಮಾಡಿದರೆ ಆ ಪದಾರ್ಥಕ್ಕೆ ಪರಿಮಳ ಹೆಚ್ಚಾಗುತ್ತದೆ. ಈ ರೀತಿ ಬಳಕೆ ಮಾಡುವುದರಿಂದ ಬೆಳ್ಳುಳ್ಳಿಯ ತೀವ್ರ ವಾಸನೆ ಕಡಿಮೆಯಾಗುತ್ತದೆ.