ಇತ್ತಿಚೇಗೆ ವಿಜ್ಙಾನಿಗಳು (Scientist) ಮಾಡಿದ ಒಂದು ಅಧ್ಯಯನ (Research) ದಲ್ಲಿ ಇಡೀ ಮಾನವ ಕುಲವೇ ಬೆಚ್ಚಿ ಬೀಳುವಂತ ಅಘಾತಕಾರಿ ಅಂಶವನ್ನು ಕಂಡು ಕೊಂಡಿದ್ದಾರೆ. ಈ ಭೂಮಿಯ ಮೇಲಿನ ವಿಜ್ಞಾನ ಶಾಸ್ತ್ರದಲ್ಲಿ ಇದೇ ಮೊದಲ ಬಾರಿ ಈ ರೀತಿಯ ವಿಚಿತ್ರ ಪ್ರಕರಣ ಕಂಡು ಬಂದಿದೆ ಎಂದು ಸ್ವತಃ ವಿಜ್ಞಾನಿಗಳೇ ಅಚ್ಚರಿಗೊಳಗಾಗಿದ್ದಾರೆ. ಹಾಗಾದರೆ ಆ ಅಧ್ಯಯನ ಯಾವುದಕ್ಕೆ ಸಂಭಂದಿಸಿದ್ದು ಹಾಗೂ ಅದರ ಫಲಿತಾಂಶ ಯಾಕೆ ನಿಜಕ್ಕೂ ತಜ್ಞರ ತಲೆ ಕೆಡಿಸಿದೆ ಅನ್ನುವ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಈ ವರದಿಯಲ್ಲಿ ನೋಡೊಣ ಬನ್ನಿ.

ಮಾನವನು ಆಧುನಿಕ ಜೀವನ (Modern Life Style) ಶೈಲಿಗಾಗಿ ಅನೇಕ ತಂತ್ರಜ್ಞಾನಗಳನ್ನು (Technology) ಕಂಡುಹಿಡಿಯುತ್ತ ಹಿಂದೆ ತಿರುಗಿಯೂ ನೋಡದೆಯೇ ಭವಿಷ್ಯದತ್ತ (Future) ದಾಪುಗಾಲು ಇಟ್ಟುಕೊಂಡು ಹೋಗುವಾಗ ಮಧ್ಯ ಮಧ್ಯ ಈ ತರಹದ ವೈಜ್ಞಾನಿಕ ಅಧ್ಯಯನಗಳು ಮತ್ತು ಅದರ ಫಲಿತಾಂಶಗಳು ಒಂದು ಕ್ಷಣ ಎಲ್ಲವನ್ನೂ ಮರೆಸಿ ಮತ್ತೇ ಭೂತ (Past) ಕಾಲದ ತಪ್ಪುಗಳ ನೆನಪು ಮಾಡಿಸುತ್ತವೆ.

ಆಂಸ್ಟರ್‌ಡ್ಯಾಮ್‌ನ ಬ್ರಿಡ್ಜ್ ವಿಶ್ವವಿದ್ಯಾಲಯದ ವಿಜ್ಙಾನಿಗಳು ಇತ್ತಿಚೇಗೆ ಹಸುಗಳು ಮತ್ತು ಹಂದಿಗಳ ರಕ್ತದಲ್ಲಿ ಮೈಕ್ರೋಪ್ಲಾಸ್ಟಿಕ್ (Micro Plastic) ಗಳಿರುವುದನ್ನು ಪತ್ತೆ ಹಚ್ಚಿದ್ದಾರೆ. ಇದರ ಹಿಂದೆಯೇ ಆ ತಜ್ಞರ ತಂಡ ಮೈಕ್ರೊಪ್ಲಾಸ್ಟಿಕ್ ಮನುಷ್ಯರನ್ನು ತಲುಪುವ ಕಾಲ ಬಹಳ ದೂರ ಉಳಿದಿಲ್ಲ ಅನ್ನುವಂತಹ ಎಚ್ಚರಿಕೆಯನ್ನು ಸಹ ನೀಡಿದ್ದಾರೆ. ಹಸುಗಳ ರಕ್ತದಲ್ಲಿ ಮತ್ತು ಇತರ ಅಂಗಗಳಲ್ಲಿ ಶೇಖರಗೊಳ್ಳುವ ಮೈಕ್ರೊಪ್ಲಾಸ್ಟಿಕ್ ಅಂಶಗಳು ಹಾಲಿನ ಮೂಲಕ ಇತರರನ್ನು ತಲುಪಬಹುದು ಎನ್ನುವ ಸಂದೇಹವನ್ನು ಹೊರ ಹಾಕಿದ್ದಾರೆ. ಈ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಆಹಾರ ಸರಪಳಿಯ (Food Chain) ಮೂಲಕ ಒಂದರಿಂದ ಇನ್ನೊಂದಕ್ಕೆ ಹಾದುಹೋಗಬಹುದು. ಉದಾಹರಣೆಗೆ, ಹಸುವಿನ ಹಾಲಿನಿಂದ ಅದು ಮನುಷ್ಯರನ್ನು ತಲುಪುವ ಅಪಾಯವಿದೆ.
ಇದನ್ನೂ ಓದಿ : UTTAR PRADESH : ರಿಕ್ಷಾ ಚಾಲಕನಿಗೆ ಬಂತು ಐಟಿ (IT) ನೋಟಿಸ್ – 3 ಕೋಟಿ ಪಾವತಿಗೆ ಆಗ್ರಹ
ಮಣ್ಣಿನಲ್ಲಿರುವ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಪ್ರಾಣಿಗಳನ್ನು ತಲುಪುತ್ತದೆ. ಪ್ಲಾಸ್ಟಿಕ್‌ನ ಸೂಕ್ಷ್ಮ ಕಣಗಳು ಈ ಹಿಂದೆ ಇತರ ಪ್ರಾಣಿಗಳಲ್ಲಿ ಕಂಡುಬಂದಿವೆ. ಆದರೆ ಹಸುಗಳು ಮತ್ತು ಹಂದಿಗಳ ರಕ್ತದಲ್ಲಿ ಮೈಕ್ರೋಪ್ಲಾಸ್ಟಿಕ್ ಕಂಡುಬಂದಿರುವುದು ಇದೇ ಮೊದಲು. ಆ ಪ್ರಾಣಿಗಳ ಕರುಳುಗಳು ಸಹ ಈ ಕಣಗಳನ್ನು ಒಡೆಯಲು ಸಾಧ್ಯವಾಗುವುದಿಲ್ಲ ಇದರ ಪರಿಣಾಮವಾಗಿ ಅವು ರಕ್ತವನ್ನು ತಲುಪುತ್ತವೆ ಎಂದು ಸಂಶೋಧಕರ ತಂಡದಲ್ಲಿದ್ದ ಲೆಸ್ಲಿ ಅವರು ಹೇಳುತ್ತಾರೆ.

ಇತ್ತೀಚೆಗಷ್ಟೇ ಇಟಲಿ (Italy) ಯ ವಿಜ್ಞಾನಿಗಳ ಸಂಶೋಧನೆಯಲ್ಲಿ ಮೊಟ್ಟಮೊದಲ ಬಾರಿಗೆ ಮಹಿಳೆಯೊಬ್ಬರ ಹೊಕ್ಕುಳಬಳ್ಳಿಯಲ್ಲಿ ಪ್ಲಾಸ್ಟಿಕ್‌ನ ಸೂಕ್ಷ್ಮ ಕಣಗಳು ಪತ್ತೆಯಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಕಣಗಳು ಭವಿಷ್ಯದಲ್ಲಿ ಮಗುವಿನ ಆರೋಗ್ಯ ಮತ್ತು ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಇದನ್ನು ನಿಯಂತ್ರಿಸಲು ವಿಜ್ಞಾನಿಗಳು ಕೂಡ ಕೆಲಸ ಮಾಡುತ್ತಿದ್ದಾರೆ.