ಭಾರತದಲ್ಲಿ ಅತೀ ಪ್ರಖ್ಯಾತಿ ಪಡೆದಿರುವ ಹಬ್ಬಗಳ ಪೈಕಿ ದೀಪಾವಳಿಯೂ ಒಂದು. ದೀಪಾವಳಿ (ದೀಪಗಳ ಸಾಲು) ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತ ದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು.

ದೀಪಾವಳಿಯನ್ನು ಲಕ್ಷ್ಮೀದೇವಿಯ ಜನ್ಮದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ಎಲ್ಲರ ಮನೆಯಲ್ಲಿ ಲಕ್ಷ್ಮೀದೇವಿಯ ಪೂಜೆ ಮಾಡಲಾಗುತ್ತದೆ. ಈ ಹಬ್ಬಕ್ಕೆ ಕೆಲವು ದಿನಗಳ ಮುಂಚಿತವಾಗಿಯೇ ಸಿದ್ಧತೆಗಳು ನಡೆಯುತ್ತವೆ. ದೀಪಾವಳಿಯ ದಿನದಂದು ಲಕ್ಷ್ಮಿ (ಲಕ್ಷ್ಮಿ ದೇವಿ) ನಮ್ಮ ಮನೆಗೆ ಬರುತ್ತಾಳೆ ಎಂದು ನಂಬಲಾಗಿದೆ. ಇದರಿಂದ ಜನರು ದಿನದ ಹೆಚ್ಚಿನ ಸಮಯವನ್ನು ಮನೆಯನ್ನು ಶುಚಿಗೊಳಿಸುವುದರಲ್ಲಿ ಕಳೆಯುತ್ತಾರೆ.

ದೇಶದಾದ್ಯಂತ ಅದ್ಧೂರಿಯಾಗಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ದೀಪಾವಳಿಯೂ ಒಂದು. ದೀಪಾವಳಿಯನ್ನು ಪ್ರತಿ ವರ್ಷ ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಅದೇ ರೀತಿ ಈ ವರ್ಷ ನವೆಂಬರ್ 4ರ ಗುರುವಾರದಂದು ದೀಪಾವಳಿ ಆಚರಿಸಲಾಗುತ್ತದೆ. ನವೆಂಬರ್ 4 ರಂದು ಚತುರ್ಧಶಿ ಬೆಳಿಗ್ಗೆ 4.24 ಕ್ಕೆ ಪ್ರಾರಂಭವಾಗುತ್ತದೆ. ನಂತರ ಅಮಾವಾಸ್ಯೆ ಪ್ರಾರಂಭವಾಗುತ್ತದೆ.

ಅಮಾವಾಸ್ಯೆಯು ನವೆಂಬರ್ 5 ರಂದು ಬೆಳಿಗ್ಗೆ 3.51 ರವರೆಗೆ ಇರುತ್ತದೆ. ನರಕಾಸುರನ ಸಂಹಾರದ ನೆನಪಿಗಾಗಿ ಈ ದೀಪಾವಳಿ ಯನ್ನು ನರಕಾಸುರ ಚತುರ್ಧಶಿ ಎಂದು ಕರೆಯಲಾಗುತ್ತದೆ.

ದೀಪಾವಳಿಯ ದಿನ ಪಟಾಕಿ ಸಿಡಿಸುವುದು ಮತ್ತು ಸಿಹಿ ತಿನಿಸುಗಳನ್ನು ತಿನ್ನುವುದು ಹಬ್ಬದ ಮೆರಗನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸಡಗರ ಸಂಭ್ರಮದಿಂದ ಬೆಳಿಗ್ಗೆ ಬೇಗ ಎದ್ದು ಎಣ್ಣೆ ಸ್ನಾನ ಮಾಡುವುದು. ಪೂಜೆಗಳನ್ನು ಮಾಡಿ ದೇವಸ್ಥಾನಕ್ಕೆ ಹೋಗಿ ಬಂದರೆ ಆ ಹಬ್ಬದ ಸಂತೋಷ ಮತ್ತಷ್ಟು ದ್ವಿಗುಣವಾಗುತ್ತದೆ.

ದೀಪಾವಳಿ ಹಬ್ಬದಂದು ಬಡವರು ಮತ್ತು ನಿರ್ಗತಿಕರಿಗೆ ಅನ್ನ ಅಥವಾ ಸಿಹಿತಿಂಡಿಗಳನ್ನು ದಾನ ಮಾಡಿದರೆ ಮಹಾಲಕ್ಷ್ಮಿ ದೇವಿಯ ಸಂಪೂರ್ಣ ಅನುಗ್ರಹವನ್ನು ಪಡೆಯಬಹುದು ಎಂದು ನಂಬಲಾಗಿದೆ.