ದುಬೈ : ಕ್ರಿಕಟ್ (Cricket) ವಿಶ್ವಕಪ್ (World Cup) ಇತಿಹಾಸದಲ್ಲಿ ಪಾಕಿಸ್ತಾನ (Pakistan) ಭಾರತ (India) ದ ವಿರುದ್ಧ ಎಂದು ಗೆದ್ದಿರಲಿಲ್ಲ ಆದರೆ ನೆನ್ನೆ ನಡೆದ T20 ವಿಶ್ವಕಪ್ ವೇಳೆ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿ ಇತಿಹಾಸ ನಿರ್ಮಿಸಿದೆ. ಪಂದ್ಯ ಮುಗಿದ ನಂತರ ಉಭಯ ತಂಡಗಳ ಆಟಗಾರರು ಪರಸ್ಪರ ಆಲಿಂಗಿಸಿಕೊಂಡು ಮಾತನಾಡಿದ್ದು ಬಹಳ ವಿಶೇಷವಾಗಿತ್ತು. ಪಂದ್ಯ ಮುಗಿದ ನಂತರ ಬಂದ ಈ ಸನ್ನಿವೇಶಗಳ ಚಿತ್ರಗಳು ಎಲ್ಲರ ಮನ ಗೆದ್ದಿವೆ.

ಭಾರತದ ನಾಯಕ ವಿರಾಟ್ ಕೊಹ್ಲಿ (Virat Kohli) ಪಾಕಿಸ್ತಾನದ ನಾಯಕ ಬಾಬರ್ ಅಜಮ್ (Babar Azam) ಗೆ ಈ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ ಅಭಿನಂದಿಸುತ್ತಲೇ ಬಾಬರ್ ಅಜಮ್ ಅವರನ್ನ ಅಪ್ಪಿಕೊಂಡರು. ವಿರಾಟ್‌ನ ಈ ನಡೆಯನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ಅದನ್ನು ಹೊಗಳುತ್ತಿದ್ದಾರೆ. ಭಾರತ ಮಾತ್ರವಲ್ಲ, ಪಾಕಿಸ್ತಾನದ ಅಭಿಮಾನಿಗಳೂ ಈ ಚಿತ್ರಗಳನ್ನು ಶೇರ್ ಮಾಡುತ್ತಿದ್ದಾರೆ.
ಇದನ್ನೂ ಓದಿ : PK Movie : ಅಮೀರ್ ಖಾನ್ ಅಭಿನಯದ ಪಿಕೆ ಚಿತ್ರದಲ್ಲಿ ಆ ಒಂದು ದೃಶ್ಯಕ್ಕೆ ಕತ್ತರಿ ಬಿದ್ದಿದ್ದು ಯಾಕೆ? – ಇಲ್ಲಿದೆ ನೋಡಿ ಆ ಸ್ಟೋರಿ

ಇದು ಆಟದ ಸತ್ಯ – ಹರ್ಷ ಭೋಗ್ಲೆ (Harsha Bhogle) – ವಿರಾಟ್, ರಿಜ್ವಾನ್, ಬಾಬರ್ ಮತ್ತು ಪಾಕಿಸ್ತಾನದ ಕೆಲವು ಯುವ ಆಟಗಾರರು ಧೋನಿ ಜೊತೆಗಿನ ಸಂಭಾಷಣೆ ಮಾಡುವುದನ್ನು ನೋಡುವುದು ಅದ್ಭುತ. ಈ ದೃಷ್ಟಿಕೋನವು ಎಲ್ಲಾ ಪ್ರಚಾರಗಳ ಮತ್ತು ಕ್ರಿಡಾಸಕ್ತಿಯ ಎಲ್ಲೆ ಮೀರಿಸಿತು. ಇದು ಆಟದ ನೈಜತೆ ಎಂದು ಕ್ರಿಕೆಟ್ ನಿರೂಪಕ ಹರ್ಷಾ ಭೋಗ್ಲೆ ಟ್ವೀಟ್ ಮಾಡಿದ್ದಾರೆ.
Really loved the scenes at the end between Virat and Rizwan and Babar and thereafter between some of the younger Pakistan players and Dhoni. Beyond the hype and posturing, this is the true story of sport.
— Harsha Bhogle (@bhogleharsha) October 24, 2021
ಇದನ್ನೂ ಓದಿ : Lamkhaga Pass : ಚಾರಣಕ್ಕೆ ತೆರಳಿದ ಗುಂಪು ದಿಕ್ಕು ತಪ್ಪಿ ನಾಪತ್ತೆ – 11 ಜನರ ಮೃತದೇಹಗಳು ಪತ್ತೆ

‘ಕ್ರಿಕೆಟ್ ಸ್ಪಿರಿಟ್’ ಅಂದರೆ ಇದು – ಪಾಕಿಸ್ತಾನದ ಅಭಿಮಾನಿಗಳು ಇದು ‘ಸ್ಪಿರಿಟ್ ಆಫ್ ಕ್ರಿಕೆಟ್’ ಎಂದು ಟ್ವೀಟ್ ಮಾಡಿದ್ದಾರೆ. ನಾವು ಧೋನಿ (M S Dhoni) ಮತ್ತು ಕೊಹ್ಲಿ (Virat Kohli) ಯನ್ನು ಪ್ರೀತಿಸುತ್ತೇವೆ ಎಂದು ಹೇಳಿದ್ದಾರೆ. ಧೋನಿ ಪಾಕಿಸ್ತಾನದ ಅನೇಕ ಆಟಗಾರರ ಆರಾಧ್ಯ ದೈವ ಎಂದು ಸಹ ಕೆಲವರು ಬರೆದಿದ್ದಾರೆ. ಪಂದ್ಯ ಮುಗಿದ ನಂತರ ಮೈದಾನದಲ್ಲಿ ಈ ಕುರಿತು ಸಾಕ್ಷಿ ಎಂಬಂತೆ ಪಾಕಿಸ್ತಾನದ ಕೆಲವು ಯುವ ಆಟಗಾರರು ಧೋನಿ ಜೊತೆಗೆ ಸಂಭಾಷಣೆ ನಡೆಸಿದ್ದಾರೆ.

ಅಭಿಮಾನಿಗಳ ಹೃದಯ ಗೆದ್ದ ಮಾಹಿ ಮತ್ತು ವಿರಾಟ್ – ಟೀಮ್ ಇಂಡಿಯಾ (Team India) ದ ಮೆಂಟರ್ ಧೋನಿ ಕೂಡ ಬಾಬರ್ ಅಜಮ್ ಜೊತೆ ಬಹಳ ಹೊತ್ತು ಮಾತನಾಡುತ್ತಿದ್ದರು. ಈ ಸಮಯದಲ್ಲಿ, ಶೋಯೆಬ್ ಮಲಿಕ್ (Shoaib Malik) ಕೂಡ ಜೊತೆಯಾಗಿ ನಿಂತಿದ್ದರು. ಮಹಿ ಮತ್ತು ವಿರಾಟ್ ಇಬ್ಬರೂ ಮೈದಾನದಲ್ಲಿ ತಮ್ಮ ನಡೆಗಳಿಂದ ಎರಡೂ ದೇಶಗಳ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳ ಹೃದಯವನ್ನು ಗೆದ್ದರು.