ಸ್ಪೇನ್ (Spain) ನ ರಾಜಮನೆತನದ ಮಾಜಿ ರಾಜ ಜುವಾನ್ ಕಾರ್ಲೋಸ್ (Juan Carlos I) ಗೆ ಸಂಬಂಧಿಸಿದ ಕರಾಳ ಸತ್ಯವೊಂದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಇತ್ತೀಚೆಗೆ, ಅವರ ಬಗೆಗಿನ ಈ ಸತ್ಯವು ಬಹಿರಂಗವಾಗಿದ್ದು ಅದನ್ನ ತಿಳಿದ ನಂತರ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. 1975 ರಲ್ಲಿ ಸ್ಪೇನ್ ರಾಜನ ಸಿಂಹಾಸನವನ್ನು ಅಲಂಕರಿಸಿದ ಜುವಾನ್ ಕಾರ್ಲೋಸ್ ಜೀವನಕ್ಕೆ ಸಂಬಂಧಿಸಿದ ಆ ಕರಾಳ ಸತ್ಯ ಈಗ ಇಡೀ ಜಗತ್ತಿನ ಮುಂದೆ ಬಂದಿದೆ. ಆತ ಲೈಂಗಿಕ ವ್ಯಸನಿ ಎಂದು ಹೇಳಲಾಗುತ್ತಿದೆ.

5 ಸಾವಿರ ಮಹಿಳೆಯರೊಂದಿಗೆ ಸಂಬಂಧ – ಮಾಧ್ಯಮ ವರದಿಗಳ ಪ್ರಕಾರ, ಮಾಜಿ ರಾಜ ಜುವಾನ್ ಕಾರ್ಲೋಸ್ ನ ಈ ಚಟ ಎಷ್ಟು ಹೆಚ್ಚಾಗಿತ್ತು ಎಂದರೆ ಆತನಿಂದಾಗಿ ಆ ದೇಶವೂ ಕೂಡ ಈಗ ಕಳಂಕಿತವಾಗುತ್ತಿದೆ. ರಾಜನ ಈ ದುರಾಭ್ಯಾಸದಿಂದಾಗಿ, ಅವನ ಜನರು ಆತನ ಮೇಲೆ ತುಂಬಾ ಅಸಮಾಧಾನಗೊಳ್ಳಲು ಪ್ರಾರಂಭಿಸಿದರು.
ಇದನ್ನೂ ಓದಿ : Covid 19 New Variant : ರಷ್ಯಾದಲ್ಲಿ ಅಪ್ಪಳಿಸಿದ ಮೂರನೇ ಅಲೆ – ಡೆಲ್ಟಾಗಿಂತ AY.4.2 ಅಪಾಯಕಾರಿ ರೂಪಾಂತರಕ್ಕೆ 1028 ಮಂದಿ ಬಲಿ
ಜುವಾನ್ ಕಾರ್ಲೋಸ್‌ನ ಈ ಕೆಟ್ಟ ಚಟವನ್ನು ಮಾಜಿ ಸ್ಪ್ಯಾನಿಷ್ ಪೊಲೀಸ್ ಕಮಿಷನರ್ ಜೋಸ್ ಮ್ಯಾನ್ವುಲ್ (Jose Manuel) ಅವರು ಸಂಸತ್ತಿನ ವಿಚಾರಣೆಯ ಸಮಯದಲ್ಲಿ ಬಹಿರಂಗಪಡಿಸಿದ್ದಾರೆ. ಈ ರಾಜ 5000 ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದನೆಂದು ಅವರು ಹೇಳಿಕೆ ನೀಡಿದ್ದಾರೆ.

ಸ್ತ್ರೀ ಹಾರ್ಮೋನುಗಳನ್ನು ಇತನ ದೇಹಕ್ಕೆ ಹಾಕಬೇಕು – ಜುವಾನ್ ಕಾರ್ಲೋಸ್ ಒಬ್ಬ ಲೈಂಗಿಕ ವ್ಯಸನಿಯಾಗಿದ್ದಾರೆ, ಅವರ ಈ ವ್ಯಸನವು ಈಗ ರಾಜ್ಯದ ಸಮಸ್ಯೆಯಾಗಿ ಮಾರ್ಪಟ್ಟಿದೆ ಎಂದು ಜೋಸ್ ಮ್ಯಾನ್ವುಲ್ (Jose Manuel) ಹೇಳಿದರು. ಇದೇ ವೇಳೆ ಜೋಸ್ ಮನಿಯುಲ್, ಆಶ್ಚರ್ಯಕರವಾದ ಸಲಹೆಯೊಂದನ್ನ ಕೂಡ ನೀಡಿದರು.
ಇದನ್ನೂ ಓದಿ : HORROR MOVIES : ನಿಜ ಜೀವನದ ಘಟನೆಗಳನ್ನಾಧರಿಸಿ ಚಿತ್ರಿಸಿದ ವಿಶ್ವದ ಹಾರರ್ ಚಿತ್ರಗಳು
ಈ ರಾಜನ ಲೈಂಗಿಕ ವ್ಯಸನ ಸಮಸ್ಯೆಯನ್ನು ತೊಡೆದುಹಾಕಲು ಅವರ ದೇಹದಲ್ಲಿನ ಪುರುಷ ಹಾರ್ಮೋನ್ ಅನ್ನು ಕಡಿಮೆ ಮಾಡಬೇಕು ಅದಕ್ಕಾಗಿ ಆತನ ದೇಹದಲ್ಲಿ ಸ್ತ್ರೀ ಹಾರ್ಮೋನುಗಳನ್ನು ಸೇರಿಸಬೇಕು ಎಂದು ಹೇಳಿದ್ದಾರೆ. ಕಿಂಗ್ ಜುವಾನ್ ಬಗ್ಗೆ ಒಂದು ಪುಸ್ತಕವನ್ನು ಸಹ ಬರೆಯಲಾಗಿದೆ.

ಆ ಪುಸ್ತಕದಲ್ಲಿ ಈತನ ಈ ಕಾರ್ಯಗಳು ಬಹಿರಂಗ – ಮಾಜಿ ರಾಜ ಜುವಾನ್ ತನ್ನ ಗೆಳತಿಯಾಗಲು ಪ್ರಿನ್ಸೆಸ್ ಡಯಾನಾಳನ್ನು ಸಂಪರ್ಕಿಸಿದ್ದಾನೆ ಎಂದು ಮಾಧ್ಯಮ ವರದಿಯೊಂದು ಹೇಳಿಕೊಂಡಿದೆ, ಆದರೆ ಈ ಹೇಳಿಕೆಯನ್ನು ದೃಢೀಕರಿಸಲಾಗಿಲ್ಲ.
ಇದನ್ನೂ ಓದಿ : SPACE : ಬಾಹ್ಯಾಕಾಶದಲ್ಲಿ ಮಾನವರು ಮೃತಪಟ್ಟರೆ ಅವರ ದೇಹ ಏನಾಗುತ್ತವೆ
ಅದೇ ಸಮಯದಲ್ಲಿ, ಸ್ಪ್ಯಾನಿಷ್ ಇತಿಹಾಸಕಾರರು ಆತನ ಮೇಲೆ ಜುವಾನ್ ಕಾರ್ಲೋಸ್: 5,000 ಪ್ರೇಮಿಗಳ ರಾಜ ಎಂಬ ಪುಸ್ತಕವನ್ನು ಬರೆದಿದ್ದಾರೆ. ಇತನು ಸ್ಪ್ಯಾನಿಷ್ ಗಾಯಕಿ, ಬೆಲ್ಜಿಯಂ ಗವರ್ನರ್ ಮತ್ತು ಇಟಾಲಿಯನ್ ರಾಜಕುಮಾರಿಯೊಂದಿಗೆ ಸಹ ಸಂಬಂಧ ಇಟ್ಟುಕೊಂಡಿದ್ದನು ಎನ್ನಲಾಗಿದೆ.

6 ತಿಂಗಳಲ್ಲಿ 62 ಮಹಿಳೆಯರೊಂದಿಗೆ ಸಂಬಂಧ – ಇತಿಹಾಸಕಾರರು ಬರೆದ ಈ ಪುಸ್ತಕದಲ್ಲಿ ಮಾಜಿ ರಾಜ ಜುವಾನ್ ಕಾರ್ಲೋಸ್ ಕೇವಲ 6 ತಿಂಗಳಲ್ಲಿ 62 ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾನೆ ಎಂದು ಹೇಳಲಾಗಿದೆ. ಪ್ರಸ್ತುತ ಜುವಾನ್ ಕಾರ್ಲೋಸ್ ಅಬುಧಾಬಿಯಲ್ಲಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ : Guinness World Records : ಅತಿ ದೊಡ್ಡ ಮೂಗು ಹೊಂದಿರುವ ಜಗತ್ತಿನ ಜೀವಂತ ವ್ಯಕ್ತಿ – 71 ನೇ ವಯಸ್ಸಿನಲ್ಲಿಯೂ ಬೆಳೆಯುತ್ತಿರುವ ಮೂಗು
ದೇಶದ ಪ್ರಜೆಗಳ ಹಣವನ್ನು ದುರುಪಯೋಗ ಪಡಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಗಡಿಪಾರು ಮಾಡಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಇತನ ಈ ಹಗರಣ ಬೆಳಕಿಗೆ ಬಂದ ನಂತರ ಅವನು ದೇಶ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಸ್ಪೇನ್‌ನ ಬೀದಿ ಬೀದಿಗಳಲ್ಲಿ ಅವನ ಈ ಅಶ್ಲೀಲತೆಯ ಚರ್ಚೆಗಳು ಇನ್ನೂ ಕೂಡ ಮನೆ ಮಾತಾಗಿವೆ.