ದುಬೈ : ಟಿ 20 ವಿಶ್ವಕಪ್ -2021 (T20 World Cup 2021) ಆರಂಭವಾಗಿದೆ. ಭಾನುವಾರ ನಡೆದ ಪಾಕಿಸ್ತಾನ (Pakistan) ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಅನಿರೀಕ್ಷಿತವಾಗಿ ಸೋಲನ್ನೊಪ್ಪಿಕೊಂಡಿತು. ಇದೇ ವೇಳೆ ಭಾರತ ತಂಡ ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಶಾಕ್ ಎದುರಾಗಿದೆ.

ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಪಾಕ್ ವಿರುದ್ದದ ಈ ಹೈ ವೊಲ್ಟೇಜ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಬಲ ಭುಜಕ್ಕೆ ಗಾಯವಾಗಿ (Injury) 11 ರನ್ ಗಳಿಸಿದ್ದಾಗ ಪೇವಿಲಿಯನ್ (Pavilion) ಗೆ ಹೊರಟರು. ಎರಡನೇಯ ಅವಧಿಯಲ್ಲಿ ಅವರು ಫೀಲ್ಡಿಂಗ್‌ಗೂ ಸಹ ಬರಲಿಲ್ಲ. ಪಾಂಡ್ಯ ಜಾಗದಲ್ಲಿ ಅವರ ಬದಲಾಗಿ ಇಶಾನ್ ಕಿಶನ್ (Ishan Kishan) ಫೀಲ್ಡಿಂಗ್ ಗೆ ಬಂದರು. ಹಾರ್ದಿಕ್ ಪಾಂಡ್ಯರನ್ನು ಸ್ಕ್ಯಾನಿಂಗ್‌ಗೆ ಕಳುಹಿಸಲಾಗಿದೆ ಎಂದು ಬಿಸಿಸಿಐ (BCCI) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನ್ಯೂಜಿಲೆಂಡ್ (New Zealand) ವಿರುದ್ಧದ ಮುಂದಿನ ಪಂದ್ಯಕ್ಕೆ ಹಾರ್ದಿಕ್ ಲಭ್ಯತೆ ಅನುಮಾನ ಮೂಡಿಸಿದೆ. ಈ ಪಂದ್ಯದಲ್ಲಿ ಹಾರ್ದಿಕ್ ಕೇವಲ 11 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇನ್ನೂ ಪಂದ್ಯದ ವಿಷಯಕ್ಕೆ ಬಂದರೆ, ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿತು.

ಈ ಸ್ಪರ್ದಾತ್ಮಕ ಗುರಿ ಬೆನ್ನಟ್ಟಿದ ಪಾಕಿಸ್ತಾನ ಆರಂಭಿಕರಾದ ಮೊಹಮ್ಮದ್ ರಿಜ್ವಾನ್ (Mohammad Rizwan) ಮತ್ತು ಬಾಬರ್ ಅಜಮ್ (Babar Azam) ಅವರ ಐತಿಹಾಸಿಕ ಜತೆಯಾಟ (Historical Partnership) ದಿಂದ 10 ವಿಕೆಟ್ ಗಳ ಗೆಲುವನ್ನು ಸಾಧಿಸಿತು. ಇದರ ಜೊತೆಗೆ ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾದ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ.