ಹೈದರಾಬಾದ್ : ಎಲೆಕ್ಟ್ರಿಕ್ ವಾಹನಗಳ (Electric Vehicle) ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಸ್ಪರ್ಧೆ ಹೆಚ್ಚುತ್ತಿದೆ. ಪ್ರತಿ ವಾರ ಒಂದು ಹೊಸ ಎಲೆಕ್ಟ್ರಿಕ್ ಬೈಕ್ / ಸ್ಕೂಟರ್ (Electric Scooter or Electric Bike) ಮಾರುಕಟ್ಟೆಗೆ ಬರುತ್ತಿದೆ. ಇತ್ತೀಚೆಗೆ ಮತ್ತೊಂದು ಕಂಪನಿಯು ತನ್ನ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ.

ENIGMA ಎಂಬ ಕಂಪನಿಯು ‘ಕೆಫೆ ರೇಸರ್’ (Cafe Racer) ಎಂಬ ಎಲೆಕ್ಟ್ರಿಕ್ ಬೈಕ್ ಅನ್ನು ತರಲು ಸಿದ್ಧವಾಗಿದೆ. ಈ ಬೈಕ್‌ಗಳ ಪ್ರಿ-ಬುಕಿಂಗ್ (Pre-Bookings) ಇಂದಿನಿಂದ ಕಂಪನಿಯ ಡೀಲರ್‌ಶಿಪ್‌ಗಳಲ್ಲಿ ಮತ್ತು ಕಂಪನಿಯ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. ಈ ಮೋಟಾರ್ ಸೈಕಲ್ ದೀಪಾವಳಿಯ ಮೊದಲು ಬಿಡುಗಡೆಯಾಗುತ್ತದೆ.
ಮೇಡ್ ಇನ್ ಹೈದರಾಬಾದ್ – ಎನಿಗ್ಮಾ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್ (Enigma Automobiles Pvt Ltd) , ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ದ್ವಿಚಕ್ರ ವಾಹನ ಸ್ಟಾರ್ಟ್ಅಪ್ಗಳಲ್ಲಿ (Start Up) ಒಂದಾಗಿದೆ, ಇತ್ತೀಚೆಗೆ ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್ ಸೈಕಲ್ – ‘ಕೆಫೆ ರೇಸರ್’ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಈ ಮೋಟಾರ್ ಸೈಕಲ್ ಅನ್ನು ಐದು ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗುವುದು. ಈ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಅನ್ನು ಭಾರತದಲ್ಲಿಯೇ ವಿನ್ಯಾಸಗೊಳಿಸಿದೆ ಮತ್ತು ಇಲ್ಲಿಯೇ ತಯಾರಿಸಲಾಗುತ್ತಿದೆ. ಈ ಕೆಫೆ ರೇಸರ್ 72V 50 Ah LifePo4 (ಲಿಥಿಯಂ ಫೆರೋ ಫಾಸ್ಫೇಟ್) ಬ್ಯಾಟರಿ ಚಾಲಿತವಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 140 ಕಿಮೀ ಸಂಚರಿಸಬಹುದು. ನಗರ ವ್ಯಾಪ್ತಿಯ ಬಳಕೆದಾರರಿಗೆ ಇದು ಅತ್ಯಂತ ಉಪಯೋಗವಾಗಲಿದೆ.
ಇದನ್ನೂ ಓದಿ : UTTAR PRADESH : ರಿಕ್ಷಾ ಚಾಲಕನಿಗೆ ಬಂತು ಐಟಿ (IT) ನೋಟಿಸ್ – 3 ಕೋಟಿ ಪಾವತಿಗೆ ಆಗ್ರಹ
ಇದರ ಗರಿಷ್ಠ ವೇಗ ಗಂಟೆಗೆ 136 ಕಿಲೋಮೀಟರ್. ಇದರ ಹಬ್ ಮೋಟಾರ್ ಗರಿಷ್ಠ 5.6 kW ಶಕ್ತಿಯನ್ನು ನೀಡುತ್ತದೆ. 3 – 4 ಗಂಟೆಗಳಲ್ಲಿ ಪೂರ್ಣ ಚಾರ್ಜ್ ಆಗುತ್ತದೆ. ಈ ಬೈಕ್ ಬ್ಯಾಟರಿಯು 5 ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ. ಇವುಗಳನ್ನು ಭೋಪಾಲ್, ಮಂಡಿದೀಪ್ ಮತ್ತು ಹೈದರಾಬಾದ್ (ಉಪ್ಪಲ್) ಕಂಪನಿ ಘಟಕಗಳಲ್ಲಿ ತಯಾರಿಸಲಾಗುತ್ತದೆ. ಈ ಮೋಟಾರ್‌ಸೈಕಲ್‌ಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿರುವುದರಿಂದ ದೇಶದಾದ್ಯಂತ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದು ಸಹಜವಾಗಿಯೇ ಕುತೂಹಲ ಮೂಡಿಸಿದೆ.