ಪಿತೋರ್‌ಗಢ್ (ಉತ್ತರಾಖಂಡ) : ಟಿಬೆಟ್ (Tibet) ನ ಪಶ್ಚಿಮದಲ್ಲಿ ಗ್ಯಾಂಗ್‌ಡೈಸ್ ಪರ್ವತ ಶ್ರೇಣಿಯಲ್ಲಿ ವಿಶ್ವದ ಅತ್ಯಂತ ಪವಿತ್ರ ಪರ್ವತವಿದೆ. ಗ್ಯಾಂಗ್ ರಿನ್ಪೋಚೆ (Gang Rinpoche), ಕಾಂಗ್ರಿನ್‌ಬೊಖೆ (Kangrinboqe) ಮತ್ತು ಮೌಂಟ್ ಕೈಲಾಸ (Mount Kailasa) ಎಂದು ಬೇರೆ ಬೇರೆ ಭಾಷೆಗಳಲ್ಲಿ ಜನರು ಇದನ್ನು ಕರೆಯುತ್ತಾರೆ. ಇದನ್ನು ಇಂಗ್ಲಿಷ್‌ನಲ್ಲಿ ಮೌಂಟ್ ಕೈಲಾಸ್ ಎಂದು ಕರೆಯಲಾಗುತ್ತದೆ.

ಈ ಪರ್ವತವು ಸಮುದ್ರ ಮಟ್ಟ (Sea Level) ದಿಂದ ಕೇವಲ 6,638 ಮೀ. ಎತ್ತರದಲ್ಲಿದೆ ಮತ್ತು ಟಿಬೆಟ್‌ನ ಅತಿ ಎತ್ತರದ ಪರ್ವತಗಳಲ್ಲಿ ಒಂದಾಗಿದೆ. ಆದರೂ ಇದನ್ನು ಆಧುನಿಕ ಯುಗದ ಮನುಷ್ಯ ಎಂದಿಗೂ ಹತ್ತಲು ಸಾಧ್ಯವಾಗಿಲ್ಲ. ಅದರ ವಿಶಿಷ್ಟ ಧಾರ್ಮಿಕ ಮಹತ್ವದಿಂದಾಗಿ ಅದು ಎಂದಿಗೂ ಆಗುವುದಿಲ್ಲ ಎಂದು ನಂಬಲಾಗಿದೆ. ಇನ್ನು ಈ ಮೌಂಟ್ ಕೈಲಾಸ ನಾಲ್ಕು ಧರ್ಮಗಳ ಪವಿತ್ರ ಪರ್ವತವಾಗಿದೆ.

ಹಿಂದೂ ಧರ್ಮ (Hindu) ದಲ್ಲಿ, ಇದನ್ನು ಸಾಂಪ್ರದಾಯಿಕವಾಗಿ ಶಿವನ ವಾಸಸ್ಥಾನವೆಂದು ನಂಬಲಾಗಿದೆ. ಅವನು ತನ್ನ ಪತ್ನಿ ಪಾರ್ವತಿ ಮತ್ತು ಅವರ ಮಕ್ಕಳಾದ ಗಣೇಶ ಮತ್ತು ಕಾರ್ತಿಕೇಯರೊಂದಿಗೆ ಅಲ್ಲಿ ವಾಸಿಸುತ್ತಿದ್ದರು ಎಂಬ ಐತಿಹ್ಯವಿದೆ. ಮಹಾಭಾರತದ ಪ್ರಕಾರ ಪಾಂಡವರು ತಮ್ಮ ಪತ್ನಿ ದ್ರೌಪದಿಯೊಂದಿಗೆ ವಿಮೋಚನೆಯ ಹಾದಿಯಲ್ಲಿ ಕೈಲಾಸ ಪರ್ವತನ್ನು ಚಾರಣ ಮಾಡಿದರು ಎಂದು ಹೇಳಲಾಗುತ್ತದೆ ಏಕೆಂದರೆ ಇದನ್ನು ಸ್ವರ್ಗದ ಹೆಬ್ಬಾಗಿಲು ಎಂದು ಪರಿಗಣಿಸಲಾಗಿದೆ.
ಜೈನ (Jain) ಧರ್ಮಗ್ರಂಥಗಳ ಪ್ರಕಾರ, ಅಷ್ಟಪದವು ಮೊದಲ ಜೈನ ತೀರ್ಥಂಕರ, ಋಷಭದೇವ ಮೋಕ್ಷವನ್ನು ಪಡೆದ ಸ್ಥಳವಾಗಿದೆ. ಬೌದ್ಧ (Buddhism) ಗ್ರಂಥಗಳಲ್ಲಿ ಕೈಲಾಸ ಪರ್ವತವನ್ನು ಮೇರು ಪರ್ವತ ಎಂದು ಕರೆಯಲಾಗುತ್ತದೆ. ಇದು ವಿಶ್ವವಿಜ್ಞಾನಕ್ಕೆ ಕೇಂದ್ರವಾಗಿದೆ (Central to its Cosmology) ಮತ್ತು ಕೆಲವು ಬೌದ್ಧ ಸಂಪ್ರದಾಯಗಳಿಗೆ ಪ್ರಮುಖ ಯಾತ್ರಾಸ್ಥಳವಾಗಿದೆ. ಟಿಬೆಟ್‌ನ ಸ್ಥಳೀಯ ಧರ್ಮವಾದ ಬೋನ್ (Bon) ಕೈಲಾಸವನ್ನು “ಒಂಬತ್ತು-ಅಂತಸ್ತಿನ ಸ್ವಸ್ತಿಕ್ ಪರ್ವತ” ಎಂದು ಕರೆಯುತ್ತಾರೆ.

ಇಲ್ಲಿಗೆ ಭೇಟಿ ನೀಡುವ ಭಕ್ತರು ಮಾನಸ ಸರೋವರದಲ್ಲಿ ಸ್ನಾನ ಮಾಡಿ ದೂರದಿಂದ ಕೈಲಾಸ ಪರ್ವತ ನೋಡಿ ಹಿಂತಿರುಗಬೇಕು ಏಕೆಂದರೆ ಅಲ್ಲಿಗೆ ಹೋಗಲು ಯಾರಿಗೂ ಸಾಧ್ಯವಿಲ್ಲ. ಅನೇಕ ಜನರು ಅಲ್ಲಿಗೆ ತಲುಪಲು ಪ್ರಯತ್ನಿಸಿದರು ಆದರೆ ಕೆಲವರು ಜೀವ ಕಳೆದುಕೊಂಡರೆ ಇನ್ನೂ ಕೆಲವರು ವಾಪಸ್ ಹೋಗಬೇಕಾಯಿತು. ವಾಸ್ತವವಾಗಿ ಕೈಲಾಸವು ಸುಮಾರು ಸಮುದ್ರ ಮಟ್ಟಕ್ಕಿಂತ 6638 ಮೀಟರ್ ಎತ್ತರದಲ್ಲಿದೆ ಮತ್ತು ಎವರೆಸ್ಟ್ (Mount Everest) ಗಿಂತಲೂ 2200 ಮೀಟರ್‌ಗಳಷ್ಟು ಕಡಿಮೆ ಎತ್ತರ ಹೊಂದಿದೆ.
ಇದನ್ನೂ ಓದಿ : Mummies of India : ಈಜಿಪ್ತ್‌ನಲ್ಲಿರುವ ಮಮ್ಮಿಗಳಂತೆಯೇ ಭಾರತದಲ್ಲೂ ಪತ್ತೆಯಾಗಿದೆ ನ್ಯಾಚುರಲ್ ಮಮ್ಮಿ
ಆದರೆ ಇಲ್ಲಿಯವರೆಗೂ ಯಾರಿಗೂ ಕೈಲಾಸ ಪರ್ವತವನ್ನು ಏರಲು ಸಾಧ್ಯವಾಗಲಿಲ್ಲ ಎಂಬುದು ಇದರ ನಿಗೂಢತೆಗೆ ಹಿಡಿದ ಕೈಗನ್ನಡಿ. ರಷ್ಯಾದ ವೈದ್ಯ, ಅರ್ನೆಸ್ಟ್ ಮಾಲ್ಡಸೇವ್ ಈ ಕುರಿತು ಅಧ್ಯಯನ ಮಾಡಿ, ಮೌಂಟ್ ಕೈಲಾಸ ನಿಜವಾಗಿಯೂ ದೊಡ್ಡ ಮತ್ತು ಪುರಾತನ ಪಿರಮಿಡ್ ಅದನ್ನು ಮನುಷ್ಯರಿಂದ ನಿರ್ಮಿಸಲಾಗಿದೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನೂ ಸಣ್ಣ ಸಣ್ಣ ಪಿರಮಿಡ್‌ಗಳಿವೆ ಎಂದು ಹೇಳಿದ್ದಾರೆ. ಆದರೆ ಈ ಹೇಳಿಕೆಯನ್ನು ಧೃಡಿಕರೀಸಲು ಸಾಧ್ಯವಾಗಿಲ್ಲ ಎನ್ನುವುದು ಗಮನಿಸಬೇಕಾದ ಅಂಶ.

ಕೈಲಾಸ ಪರ್ವತವನ್ನು ಏರಲು ಪ್ರಯತ್ನಿಸಿದ ಅನೇಕ ಪರ್ವತಾರೋಹಿಗಳು ಆರೋಹಣದ ಸಮಯದಲ್ಲಿ ತಮ್ಮ ಕೂದಲು ಮತ್ತು ಉಗುರುಗಳು ಸಾಮಾನ್ಯಕ್ಕಿಂತಲೂ ವೇಗವಾಗಿ ಬೆಳೆಯಲು ಪ್ರಾರಂಭಿಸಿದವು ಎಂಬ ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ ಮತ್ತು ಒಮ್ಮೆ ಈ ಪ್ರದೇಶದಲ್ಲಿ ಓಬ್ಬ ಪರ್ವತವನ್ನು ಏರಲು ಪ್ರಯತ್ನಿಸಿ ತನಗೆ ಕಡಿಮೆ ಸಮಯದಲ್ಲಿ ವಯಸ್ಸಾಗುತ್ತಿದ್ದ ಅನುಭವ ಪಟ್ಟಿದ್ದಾನೆ. ಆದ್ದರಿಂದಲೇ ಅವನು ತನ್ನ ಚಾರಣವನ್ನು ಮಧ್ಯದಲ್ಲಿ ಬಿಟ್ಟು ಹಿಂತಿರುಗಿದನು. ಸರಿಯಾಗಿ ಅದರ ಒಂದು ವರ್ಷದ ನಂತರ ಆತ ಮರಣಹೊಂದಿದನು ಎನ್ನಲಾಗಿದೆ.
ಇದನ್ನೂ ಓದಿ : ಕೇರಳದಿಂದ ಉತ್ತರಾಖಂಡದವರೆಗೆ: ಅಕ್ಟೋಬರ್‌ನಲ್ಲಿ ರಣ ಮಳೆ ಸುರಿಯಲು ಕಾರಣವೇನು? ಇಲ್ಲಿದೆ ನೋಡಿ..
ಕೈಲಾಸವನ್ನು ಏರದಿರಲು ಒಂದು ಕಾರಣವೆಂದರೆ ಯಾವಾಗಲೂ ಹವಾಮಾನ ವೈಪರೀತ್ಯ ಮತ್ತೇ ಕೆಲವೊಮ್ಮೆ ಆರೋಗ್ಯ ಏರುಪೇರಾಗುವುದು ಮತ್ತು ದಿಕ್ಕು ತಪ್ಪಿ ಅಲೆದಾಡುವುದು ಮುಂತಾದವುಗಳಾಗಿವೆ. ಕೈಲಾಸ ಪರ್ವತದ ಸುತ್ತಲೂ ಬಾಹ್ಯ ಪ್ರಪಂಚಕ್ಕೆ ಅರಿವಿಲ್ಲದ ಅನೇಕ ಗುಹೆಗಳಿವೆ ಮತ್ತು ದೈವಿಕ ಸಂತರು ಇಲ್ಲಿ ಹೋಗಿ ತಪಸ್ಸು ಮಾಡುತ್ತಾರೆ ಎಂದು ಹೇಳಲಾಗಿದೆ. ಈ ಗುಹೆಗಳನ್ನು ಕೆಲವೇ ಕೆಲವು ಜನರು ಮಾತ್ರ ನೋಡಿದ್ದಾರೆ ಎನ್ನಲಾಗಿದೆ.