ಕಿನ್ನೌರ್ (ಹಿಮಾಚಲ ಪ್ರದೇಶ) : ಅಕ್ಟೋಬರ್ 14ರಂದು ಉತ್ತರಾಖಂಡದ (Uttarakhand) ಹರ್ಷಿಲ್‌ನಿಂದ (Harsil) ಚಾರಣ ಆರಂಭಿಸಿದ್ದ ಪರ್ವತಾರೋಹಿಗಳ ತಂಡವೊಂದು ವಿಪರೀತ ಹವಾಮಾನದಿಂದಾಗಿ ಲಮ್‌ಖಾಗಾ ಪಾಸ್ (Lamkhaga Pass) ಬಳಿ ದಾರಿ ತಪ್ಪಿ ನಾಪತ್ತೆಯಾಗಿದ್ದಾರೆ. ಹಮಾಲರು ಮತ್ತು ಗೈಡ್‌ಗಳು ಸೇರಿದಂತೆ ಒಟ್ಟು 17 ಚಾರಣಿಗರು ಈ ತಂಡದಲ್ಲಿದ್ದು ಭಾರೀ ಹಿಮಪಾತದಿಂದಾಗಿ ಪರಸ್ಪರ ಸಂಪರ್ಕ ಕಡಿತಗೊಂಡು ದಾರಿ ತಪ್ಪಿದರು. ಈ ಪೈಕಿ 11 ಜನರ ಮೃತದೇಹಗಳು ಲಮ್‌ಖಾಗಾ ಪಾಸ್ (Lamkhaga Pass) ಗೆ ಹೋಗುವ ದಾರಿಯಲ್ಲಿ ದೊರೆತಿವೆ.

ಭಾರತೀಯ ವಾಯುಪಡೆ (Indian Airforce) ಯು ಉತ್ತರಾಖಂಡದ (Uttarakhand) ಲಮ್‌ಖಾಗಾ ಪಾಸ್ (Lamkhaga Pass) ನಲ್ಲಿ ಸುಮಾರು 17,000 ಅಡಿ ಎತ್ತರದಲ್ಲಿ ಪ್ರಮುಖ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ. ಹರ್ಷಿಲ್‌ನಿಂದ (Harsil) ಚಾರಣ ಆರಂಭಿಸಿದ್ದ ಪರ್ವತಾರೋಹಿಗಳು ಹಿಮಾಚಲ ಪ್ರದೇಶದ ಚಿತ್ಕುಲ್ ತಲುಪಬೇಕಿತ್ತು.
ಇದನ್ನೂ ಓದಿ : MOUNT KAILASA : ಎವರೆಸ್ಟನ್ನೇ ಏರಿದ ಮನುಷ್ಯನಿಗೆ ಆ ಒಂದು ಪರ್ವತ ಏರಲು ಆಗಿಲ್ಲ- ಇದು ಪಿರಮಿಡ್ ಎಂದ ರಷ್ಯಾ ವೈದ್ಯ
ಆದರೆ ಅಕ್ಟೋಬರ್ 17 ರಿಂದ 19 ರವರೆಗಿನ ಕೆಟ್ಟ ಹವಾಮಾನದಿಂದಾಗಿ ಅವರು ಲಮ್‌ಖಾಗಾ ಪಾಸ್ (Lamkhaga Pass) ಬಳಿ ದಿಕ್ಕು ತಪ್ಪಿ ನಾಪತ್ತೆಯಾಗಿದ್ದರು. ಉತ್ತರಾಖಂಡದ (Uttarakhand) ಹರ್ಷಿಲ್ (Harsil) ಮತ್ತು ಹಿಮಾಚಲ ಪ್ರದೇಶ (Himachal Pradesh) ದ ಕಿನ್ನೌರನ್ನು ಸಂಪರ್ಕಿಸುವ ಲಮ್‌ಖಾಗಾ ಪಾಸ್ (Lamkhaga Pass) ಅತ್ಯಂತ ಕಷ್ಟಕರವಾದ ದುರ್ಗಮ ಹಾದಿಯಾಗಿದೆ.

ವಿಪರೀತ ಹವಾಮಾನದ ಮಧ್ಯೇಯೂ ವಾಯುಪಡೆಯ (Indian Airforce) ರಕ್ಷಣಾ ಕಾರ್ಯಾಚರಣೆ – ಭಾರತೀಯ ವಾಯುಪಡೆಯು (Indian Airforce) ಶೋಧ ಕಾರ್ಯಾಚರಣೆಗಾಗಿ ಈಗಾಗಲೇ ಎರಡು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ. ರಕ್ಷಣಾ ತಂಡವು 15,700 ಅಡಿ ಎತ್ತರದಲ್ಲಿ 4 ಮೃತದೇಹಗಳನ್ನು ಪತ್ತೆ ಮಾಡಿವೆ. ಜೀವನ್ಮರಣ ಹೋರಾಟ ಮಾಡುತ್ತಿದ್ದ ಒಬ್ಬ ವ್ಯಕ್ತಿಯನ್ನು 16,800 ಅಡಿ ಎತ್ತರದಲ್ಲಿ ರಕ್ಷಿಸಲಾಗಿದೆ. ಆದರೆ ಸದ್ಯ ಆತನ ಪರಿಸ್ಥಿತಿಯೂ ಕೂಡ ಚಿಂತಾಜನಕವಾಗಿದೆ.
ಅಕ್ಟೋಬರ್ 22 ರ ಬೆಳಿಗ್ಗೆ ಸಹ ರಕ್ಷಣಾ ಸಿಬ್ಬಂದಿಗಳು ಕೆಟ್ಟ ಹವಾಮಾನ ಮತ್ತು ಬಲವಾದ ಗಾಳಿಯ ಹೊರತಾಗಿಯೂ ಮತ್ತೋಬ್ಬ ವ್ಯಕ್ತಿಯನ್ನು ರಕ್ಷಿಸಲು ಸಫಲವಾಗಿದೆ. 16,500 ಅಡಿ ಎತ್ತರದಿಂದ 5 ಶವಗಳನ್ನು ಪತ್ತೆ ಮಾಡಿ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಿಯೇ ಜಂಟಿ ಗಸ್ತು ಪಡೆ ಮತ್ತೆರೆಡು ಶವಗಳನ್ನು ಪತ್ತೆ ಮಾಡಿದೆ.

ಇದರ ನಂತರ ಜಿಲ್ಲಾಡಳಿತವು ಕ್ಯೂಆರ್‌ಟಿ ತಂಡ, ಪೊಲೀಸ್ ಮತ್ತು ಅರಣ್ಯ ಇಲಾಖೆ ತಂಡವನ್ನು ಚಿತ್ಕುಲ್ ಕಡೆಗೆ ಕಳುಹಿಸಿದೆ.
ಮೃತರನ್ನು ಈ ರೀತಿ ಗುರುತಿಸಲಾಗಿದೆ – ಅನಿತಾ ರಾವತ್ (38), ತನ್ಮಯ್ ತಿವಾರಿ (30), ವಿಕಾಸ್ ಮಕಲ್(33), ಸೌರಭ್ ಗೋಶ್ (34), ಸುಭಯನ್ ದಾಸ್ (28), ರಿಚರ್ಡ್ ಮಂಡಲ್ (31) ಮತ್ತು ಉಪೇಂದರ್ (22)
ನಾಪತ್ತೆಯಾದವರು – ಸುಖೇನ್ ಮಾಂಝಿ (43) ಮತ್ತು ಜ್ಞಾನ್ ಚಂದ್ (33)
ಚಿಂತಾಜನಕ ಸ್ಥಿತಿಯಲ್ಲಿರುವವರು – ದೇವೇಂದ್ರ ಚೌಹಾಣ್ (ಕಂಪೆನಿ ಮಾರ್ಗದರ್ಶಿ) ಮತ್ತು ಮಿಥುನ್
ನಾಪತ್ತೆಯಾಗಿರುವ ತಂಡದಲ್ಲಿ ಕೆಲವರು ಪತ್ತೆಯಾಗಿದ್ದಾರೆ ಎಂದು ಕಿನ್ನೌರ್ ಡಿಸಿ ಅಬಿದ್ ಹುಸೇನ್ ಸಾದಿಕ್ ತಿಳಿಸಿದ್ದಾರೆ. ಇನ್ನೂ ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ. ರಕ್ಷಿಸಲಾಗಿರುವ ಇಬ್ಬರ ಪೈಕಿ ಒಬ್ಬನ ಸ್ಥಿತಿ ಇನ್ನೂ ಕೂಡ ಗಂಭೀರವಾಗಿದೆ ಎಂದು ಹೇಳಲಾಗಿದೆ.