ಆನ್‌ಲೈನ್ ಶಾಪಿಂಗ್‌ಗೆ ಸಂಬಂಧಿಸಿದ ಹಲವಾರು ಟಿವಿ ಚಾನಲ್‌ಗಳು, ಅಪ್ಲಿಕೇಶನ್‌ಗಳು, ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಪುಟಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಅವುಗಳಲ್ಲಿ ಮಾರಾಟಗಾರನು ವಸ್ತುವನ್ನು ವಿವರಿಸುವ ಮೂಲಕ ಮಾರಾಟ ಮಾಡಲು ಪ್ರಯತ್ನಿಸುತ್ತಾನೆ. ನೀವು ನೋಡುತ್ತೀರಾ ಅಥವಾ ಖರೀದಿಸುತ್ತೀರಾ?

ಹಾಗೆಯೇ ಚೀನಾದಲ್ಲಿ ‘ಟೊಬಾಬೊ’ ಎಂಬ ಚೀನೀ ಶಾಪಿಂಗ್ ಆಪ್ ಇದೆ. ಅಲಿಬಾಬಾ ಗುಂಪಿಗೆ ಸೇರಿದ ಈ ಆಪ್, ತನ್ನ ಉತ್ಪನ್ನಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಜಾಹಿರಾತು ನೀಡುತ್ತದೆ. ಇದರಲ್ಲಿಯೇ ಲಿ ಜಿಯಾಕಿ ಎಂಬ ಸಂಸ್ಥೆ ಸೌಂದರ್ಯ ವರ್ಧಕ ಉತ್ಪನ್ನವಾದ ಲಿಪ್ ಸ್ಟಿಕ್ ಗಳನ್ನು ಮಾರಾಟ ಮಾಡುತ್ತದೆ. ಮಹಿಳೆಯರು ಬಳಸುವ ಲಿಪ್ ಸ್ಟಿಕ್ ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿರುವ ಲಿ ಜಿಯಾಕಿ ದೇಶಾದ್ಯಂತ ‘ಕಿಂಗ್ ಆಫ್ ಲಿಪ್ ಸ್ಟಿಕ್ಸ್’ ಹಾಗೂ ‘ಲಿಪ್ ಸ್ಟಿಕ್ ಬ್ರದರ್’ ಎಂದು ಜನಪ್ರಿಯತೆ ಗಳಿಸಿದೆ.

ಇತ್ತೀಚೆಗೆ, ಒಂದೇ ದಿನದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಲಿ ಜಿಯಾಕಿ ಸಂಸ್ಥೆ ದಾಖಲೆ ನಿರ್ಮಿಸಿತ್ತು. ಅಲಿಬಾಬಾ ಪ್ರತಿ ವರ್ಷವೂ ಶಾಪಿಂಗ್ ಉತ್ಸವವನ್ನು ಆಯೋಜಿಸುತ್ತದೆ ಮತ್ತು ತನ್ನ ಗ್ರಾಹಕರಿಗೆ ದೊಡ್ಡ ಕೊಡುಗೆಗಳನ್ನು ಪ್ರಕಟಿಸುತ್ತದೆ. ಈ ಹಿನ್ನೆಲೆಯಲ್ಲಿ ನೇರ ಪ್ರಸಾರದ ಮತ್ತು ಖರೀದಿಯ ಮೂಲಕ ಒಂದೇ ದಿನದಲ್ಲಿ ಲಿ ಜಿಯಾಕಿ 1.9 ಬಿಲಿಯನ್ ಮೌಲ್ಯದ ಸರಕುಗಳನ್ನು ಮಾರಾಟ ಮಾಡಿದ್ದಾರೆ. ಇದರೊಂದಿಗೆ ಚೀನಾದಲ್ಲಿ ಅವರ ಹೆಸರು ಮತ್ತೊಮ್ಮೆ ಚಿರಪರಿಚಿತವಾಯಿತು.

ಪ್ರತಿಯೊಬ್ಬರೂ ಇವರ ಮಾರಾಟ ಕೌಶಲ್ಯಕ್ಕೆ ಗೌರವ ಸಲ್ಲಿಸುತ್ತಿದ್ದಾರೆ. ಅವರು ಮಾರಾಟದ ವಸ್ತುಗಳನ್ನು ಪ್ರಾಮಾಣಿಕವಾಗಿ ವಿವರಿಸುತ್ತಾರೆ. ಯಾವುದೇ ವಸ್ತುಗಳು ಚೆನ್ನಾಗಿಲ್ಲದಿದ್ದರೆ. ನೀವೇ ಖರೀದಿಸಬೇಡಿ ಎಂದು ಸೂಚಿಸಿಸುತ್ತದೆ. ಅದಕ್ಕಾಗಿಯೇ ಈ ಸಂಸ್ಥೆ ಖರೀದಿದಾರರ ವಿಶ್ವಾಸ ಮತ್ತು ಮನಸ್ಸನ್ನು ಗೆದ್ದಿದ್ದಾರೆ.