ನ್ಯೂ ಮೆಕ್ಸಿಕೋ : ಹಾಲಿವುಡ್ ಚಿತ್ರ ‘ರಸ್ಟ್’ (Rust) ಸೆಟ್ ನಲ್ಲಿ ಒಂದು ದೊಡ್ಡ ಅಪಘಾತ ಸಂಭವಿಸಿದೆ. ಇಲ್ಲಿ ನಟ ಅಲೆಕ್ ಬಾಲ್ಡ್ವಿನ್ (Alec Baldwin) ಶೂಟಿಂಗ್ ಸಮಯದಲ್ಲಿ ಪ್ರಾಪ್ ಗನ್ ತೆಗೆದುಕೊಂಡು ಬ್ಲಾಂಕ್ ಫೈರಿಂಗ್ ಮಾಡಿದರು, ಆದರೆ ಅದು ಸಿನಿಮಾಟೋಗ್ರಾಫರ್ ಗೆ ತಗುಲಿ ಸ್ಥಳದಲ್ಲೇ ಆ ಛಾಯಾಗ್ರಾಹಕಿ ಮೃತಪಟ್ಟರು. 42 ವರ್ಷ ಹಲಿನಾ ಹಚಿನ್ಸ್ (Halyna Hutchins) ಎಂಬ ಮಹಿಳೆ ಮೃತ ದುರ್ದೈವಿ. ಈ ಘಟನೆಯಲ್ಲಿ ಚಿತ್ರದ ನಿರ್ದೇಶಕ ಜೋಯಲ್ ಸೌಜಾ (Joel Souza) ಅವರಿಗೂ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಾಪ್ ಗನ್ ಅನ್ನುವುದು ನಕಲಿ ಗನ್ ಅಲ್ಲ, ಬದಲಾಗಿ ಇದು ಅಸಲಿ ಗನ್ ಆದರೆ ಗುಂಡುಗಳ ಬದಲಾಗಿ, ಖಾಲಿ ಕಾರ್ಟ್ರಿಜ್ಗಳು ತುಂಬಿರುತ್ತವೆ. ಮಾಧ್ಯಮ ವರದಿಗಳ ಪ್ರಕಾರ, ಬಾಲ್ಡ್ವಿನ್ ಹಾರಿಸಿದ ಬಂದೂಕಿನಲ್ಲಿ ಕೆಲವು ಲೋಪ ದೋಷಗಳಿದ್ದವು ಮತ್ತು ಬ್ಲಾಂಕ್ ಫೈರಿಂಗ್ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ.
ಚಿತ್ರದ ನಿರ್ದೇಶಕ ಜೋಯಲ್ ಸೌಜಾ ಛಾಯಾಗ್ರಾಹಕಿ ಹಲಿನಾ ಹಚಿನ್ಸ್ ( ಮೃತ ದುರ್ದೈವಿ)
ಆದರೆ, ಪೊಲೀಸರು ಇನ್ನೂ ಯಾರ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಿಲ್ಲ. ಚಿತ್ರೀಕರಣದಲ್ಲಿ ಹಾಜರಿದ್ದ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿ ಪ್ರಕರಣ ದಾಖಲಿಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಚಾರದಲ್ಲಿ ನಟರಾದ ಬಾಲ್ಡ್ವಿನ್, ಸೌಜಾ ಮತ್ತು ರಸ್ಟ್ ನಿರ್ಮಾಪಕರು ಯಾವುದೇ ಹೇಳಿಕೆ ಕೊಟ್ಟಿಲ್ಲ.
ಇದನ್ನು ಓದಿ : ನಟ ಶಾರುಖ್ ಪುತ್ರ ಆರ್ಯನ್ ( Aryan Khan) ಜಾಮೀನು ಅರ್ಜಿ ವಜಾಗೊಳಿಸಿದ ಮುಂಬೈ ಕೋರ್ಟ್
ಫಿಲ್ಮ್ ಸೆಟ್ ನಲ್ಲಿ ಆಚಾತುರ್ಯದಿಂದ ಈ ಅಪಘಾತವಾದ ನಂತರ ಚಿತ್ರೀಕರಣವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಅಲೆಕ್ ಬಾಲ್ಡ್ವಿನ್ ಈ ಚಿತ್ರದ ಪ್ರಮುಖ ನಟ ಹಾಗೂ ನಿರ್ಮಾಪಕರು. ನ್ಯೂ ಮೆಕ್ಸಿಕೋದಲ್ಲಿರುವ ಚಿತ್ರದ ಕಛೇರಿ ನೀಡಿರುವ ಮಾಹಿತಿಯ ಪ್ರಕಾರ, ಸದ್ಯಕ್ಕೆ ನವೆಂಬರ್ ಆರಂಭದವರೆಗೆ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ಚಿತ್ರೀಕರಣದ ಬಗ್ಗೆ ಮುಂದಿನ ಯಾವುದೇ ನಿರ್ಧಾರವನ್ನು ಪೊಲೀಸರ ಕ್ರಮದ ನಂತರವೇ ತೆಗೆದುಕೊಳ್ಳಲಾಗುವುದು ಎಂದು ಚಿತ್ರ ತಂಡ ಸ್ಪಷ್ಟಪಡಿಸಿದೆ.