ಮಾಸ್ಕೋ : ರಷ್ಯಾ (Russia) ದಲ್ಲಿ ಕರೋನಾವೈಸಸ್ ಸಾಂಕ್ರಾಮಿಕ ರೋಗದ (Pandemic Disease) ಮೂರನೇ ಅಲೆ ಅಪ್ಪಳಿಸಿದೆ. ರಷ್ಯಾ (Russia) ದಲ್ಲಿ ಕಳೆದ ಹದಿನೈದು ದಿನಗಳಿಂದ ಪ್ರತಿದಿನವೂ ಸುಮಾರು 35 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿದ್ದರೆ, ಸುಮಾರು 1000ಕ್ಕೂ ಕೋವಿಡ್ ರೋಗಿಗಳು ಸಾಯುತ್ತಿದ್ದಾರೆ.

ರಷ್ಯಾ (Russia) ದಲ್ಲಿ ಕಳೆದ 24 ಗಂಟೆಗಳಲ್ಲಿ 1028 ಜನರು ಕರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ವೈರಸ್‌ನ ಡೆಲ್ಟಾ ಸ್ಟ್ರೈನ್‌ನ ಉಪ-ರೂಪಾಂತರವು ಹೊರಹೊಮ್ಮಿದ್ದು ಇದು ತೀವ್ರ ಹಾನಿಯನ್ನು ಉಂಟುಮಾಡುತ್ತದೆ ಎಂದು ವರದಿಯಾಗಿದೆ. ಈ ರೂಪಾಂತರವು ಮೊದಲನೆಯದಕ್ಕಿಂತ ಹೆಚ್ಚು ಸಾಂಕ್ರಾಮಿಕ (Pandemic Disease) ಮತ್ತು ಮಾರಕವಾಗಿದೆ.
ಇದನ್ನು ಓದಿ : Mummies of India : ಈಜಿಪ್ತ್‌ನಲ್ಲಿರುವ ಮಮ್ಮಿಗಳಂತೆಯೇ ಭಾರತದಲ್ಲೂ ಪತ್ತೆಯಾಗಿದೆ ನ್ಯಾಚುರಲ್ ಮಮ್ಮಿ
ಸಂಶೋಧಕರ ತಂಡದ ಪ್ರಕಾರ AY.4.2ನ ಉಪ-ರೂಪಾಂತರವು ಸುಮಾರು 10 ಪ್ರತಿಶತ ಹೆಚ್ಚು ಮಾರಕವಾಗಿದೆ. ಈ ಕಾರಣದಿಂದಾಗಿ ಹೊಸ ಪ್ರಕರಣಗಳು ಮತ್ತು ಸಾವುಗಳು-ನೋವುಗಳು ರಷ್ಯಾ (Russia) ದಲ್ಲಿ ದಾಖಲೆಯ ಮಟ್ಟದಲ್ಲಿ ದಾಖಲಾಗುತ್ತಿವೆ.

AY.4.2 ರೂಪಾಂತರಗಳ ಹೆಚ್ಚಿನ ಪ್ರಕರಣಗಳು ಹೆಚ್ಚುತಿದ್ದು, ಈ ಉಪ-ರೂಪಾಂತರವನ್ನು ವಿಶ್ವ ಆರೋಗ್ಯ ಸಂಸ್ಥೆ (WHO)ಯ ಆಸಕ್ತಿಯ ರೂಪಾಂತರಗಳ ಪಟ್ಟಿಯಲ್ಲಿ ಸೇರಿಸಬಹುದು ಎಂದಿದೆ. ಸಂಶೋಧನಾ ತಂಡದ ಪ್ರಕಾರ ಈ ಹೊಸ ರೂಪಾಂತರದ ಹರಡುವಿಕೆಯ ವೇಗ ನಿಧಾನವಾಗಿದೆ. ಈ ರೂಪಾಂತರದ ಪರಿಣಾಮವನ್ನು ಕಡಿಮೆ ಮಾಡಲು ಕರೋನಾ ಲಸಿಕೆ ಸಾಕಾಗುತ್ತದೆ ಎಂದು ಸಂಶೋಧಕರ ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನು ಓದಿ : TITANIC : ಟೈಟಾನಿಕ್ ದುರಂತದ ಬಗ್ಗೆ 14 ವರ್ಷ ಹಿಂದೆಯೇ ಸಿಕ್ಕಿತ್ತು ಭವಿಷ್ಯವಾಣಿ – ನಂಬಲಸಾಧ್ಯವಾದ ಸತ್ಯಗಳು
ಆದರೆ ಲಸಿಕೆ ತೆಗೆದುಕೊಳ್ಳದವರಲ್ಲಿ ಈ ರೂಪಾಂತರವು ದೇಹದಲ್ಲಿನ ಪ್ರತಿಕಾಯಗಳ ಸಾಮರ್ಥ್ಯವನ್ನು ನಾಟಕೀಯವಾಗಿ ಬದಲಾಯಿಸಬಹುದು. ಅದೇ ಸಮಯದಲ್ಲಿ ರಷ್ಯಾ (Russia) ದ ಆರೋಗ್ಯ ಸಂರಕ್ಷಣಾ ಸಂಸ್ಥೆಯು ಡೆಲ್ಟಾದ ಹೊಸ ರೂಪಾಂತರ AY.4.2ನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಮಾಧ್ಯಮ ವರದಿಯಲ್ಲಿ ಹೇಳಲಾಗಿದೆ.

ರಷ್ಯಾ (Russia) ದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕರೋನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಒಂದು ವಾರದ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಿದ್ದಾರೆ. ಈ ಸಮಯದಲ್ಲಿ ಉದ್ಯೋಗಿಗಳಿಗೆ ಪೂರ್ಣ ಸಂಬಳ ನೀಡಲಾಗುತ್ತದೆ. ಉಪ ಪ್ರಧಾನ ಮಂತ್ರಿ (Deputy Chairman of the Government of the Russian Federation) ಟಟಯಾನಾ ಗೋಲಿಕೋವಾ (Tatyana Golikova) ಅಕ್ಟೋಬರ್ 30 ರಿಂದ ಒಂದು ವಾರದ ರಜೆ ಘೋಷಿಸಲು ಸೂಚಿಸಿದರು. ಈ ಪ್ರಸ್ತಾವನೆಯನ್ನು ಅಧ್ಯಕ್ಷ ಪುಟಿನ್ (President Vladimir Putin) ಕೂಡ ಅನುಮೋದಿಸಿದ್ದಾರೆ.