ನ್ಯೂ ಯಾರ್ಕ್ : ವಿಶ್ವದ ಯಾವುದೇ ಕಡಲ ಮಾರ್ಗದಲ್ಲಿ (Sea Ways) ಸಂಭವಿಸಿದ ಭೀಕರ ದುರಂತ ಅಂತ ನೆನಪಿಸಿಕೊಂಡರೆ ತಟ್ಟನೆ ನೆನಪಾಗುವುದು 1912 ರ ಏಪ್ರಿಲ್ 15 ರಂದು ತನ್ನ ಮೊದಲ ಯಾನದಲ್ಲಿಯೇ ಸಮುದ್ರದಲ್ಲಿ ಮುಳುಗಿದ ಟೈಟಾನಿಕ್ (TITANIC) ಹಡಗು.

ಹೌದು ವೀಕ್ಷಕರೇ, 1912 ರ ಆಸುಪಾಸಿನಲ್ಲಿ ವಿಶ್ವದ ಅತ್ಯಂತ ದೊಡ್ಡ ಐಶಾರಾಮಿ ಹಡಗು ಎಂಬ ಖ್ಯಾತಿ ಪಡೆದ ಈ ಹಡಗು ತನ್ನ ಮೊದಲ ಯಾನದಲ್ಲಿಯೇ ಮಂಜು ಗಡ್ಡೆಗೆ ಡಿಕ್ಕಿ ಹೊಡೆದು ಎರಡು ಭಾಗವಾಗಿ ಬೆರ್ಪಟ್ಟು ಸಮುದ್ರದಲ್ಲಿ ಮುಳುಗಿ ಹೋಗಿತ್ತು. ಈ ದುರ್ಘಟನೆ ವೇಳೆ ಹಡಗಿನಲ್ಲಿ 2224 ಜನರು ಪ್ರಯಾಣಿಸುತ್ತಿದ್ದರು. ಅದರಲ್ಲಿ 1500 ಕ್ಕೂ ಹೆಚ್ಚು ಜನ ಕೊರೆಯುವ ಆ ಸಮುದ್ರ ನೀರಿನಲ್ಲಿ ಹಡಗಿನ ಜೊತೆಯೇ ಮುಳುಗಿ ಜಲ ಸಮಾಧಿಯಾದರು.

ಇವತ್ತಿನ ಈ ವಿಶೇಷ ಲೇಖನದಲ್ಲಿ ಟೈಟಾನಿಕ್ (TITANIC) ಎಂಬ ಆ ಬೃಹತ್ ಹಡಗಿನ ದುರಂತದ ಬಗ್ಗೆ ಕೆಲವೊಂದು ಗೊತ್ತಿರದ ಅಂಶಗಳನ್ನು ತಿಳಿಸುತ್ತೇವೆ ಬನ್ನಿ.
ಇದನ್ನು ಓದಿ : ಭಾರತೀಯ ವಾಯುಪಡೆ ವಿಮಾನ ಪತನ: ಪೈಲಟ್ ಸ್ಥಿತಿ ಗಂಭೀರ
ಕಾಕತಾಳೀಯವೋ ಅಥವಾ ಸಮಯದ ಯಾತ್ರೆ ಮಾಡಿದ್ದರೋ ಗೊತ್ತಿಲ್ಲ, ಈ ಟೈಟಾನಿಕ್ (TITANIC) ಹಡಗು ಮುಳುಗುವ ಸರಿಯಾಗಿ 14 ವರ್ಷಗಳ ಹಿಂದೆ ಅಂದರೆ 1898 ರಲ್ಲಿ ಅಮೇರಿಕಾದ ಲೇಖಕರೊಬ್ಬರು ‘ಫುಟಿಲಿಟಿ ಆರ್ ದಿ ರೆಕ್ ಒಫ್ ದಿ ಟೈಟನ್’ (Futility or The Wreck of the Titan) ಅನ್ನುವ ಕಾದಂಬರಿ ಬರೆದಿದ್ದರು. ಇದರಲ್ಲಿ ಟೈಟನ್ (Titan) ಎನ್ನುವ ಬೃಹತ್ ಹಡಗು ಸಹ ಸಮುದ್ರದಲ್ಲಿ ಸಾಗುವಾಗ ಮಂಜುಗಡ್ಡೆಗೆ ಡಿಕ್ಕಿಯಾಗಿ, ಬಿರುಕು ಬಿಟ್ಟು ಮುಳುಗಿ ಹೋಗಿತ್ತು.

ಅವರು ಬರೆದ ಈ ಕಲ್ಪನಾತೀತ ಕಾದಂಬರಿಯಲ್ಲಿಯೂ ಸಹ ಹಡಗಿನಲ್ಲಿರುವ ಎಲ್ಲರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಆ ಕಾದಂಬರಿಯ ಲೇಖಕ ಮೊರ್ಗನ್ ರಾಬರ್ಟ್ ಸನ್ (Morgan Robertson) ತಮ್ಮ ಪುಸ್ತಕದ ಮುಖ ಪುಟದಲ್ಲಿ ಹಾಕಿದ್ದ ಹಡಗಿನ ಚಿತ್ರ ಶೇ 100 ಕ್ಕೆ 100 ಪ್ರತಿಶತ 1912 ರಲ್ಲಿ ಸಂಭವಿಸಿದ ಟೈಟಾನಿಕ್ (TITANIC) ಹಡಗಿನ ಚಿತ್ರಕ್ಕೆ ಹೋಲಿಕೆಯಾಗುತ್ತಿತ್ತು. ಮತ್ತೊಂದು ಅಚ್ಚರಿಯ ವಿಷಯವೇನೆಂದರೆ ಈ ಕಾದಂಬರಿಯಲ್ಲಿ ಬರುವ ಟೈಟನ್ (Titan) ಹಡಗು ಸಹ ತನ್ನ ಮೊದಲ ಯಾನದಲ್ಲಿಯೇ ಮುಳುಗಡೆಯಾಗಿ ಅಷ್ಟು ಜನರನ್ನ ಬಲಿ ಪಡೆದಿತ್ತು.
ಇದನ್ನು ಓದಿ : BK Hariprasad; ವಿಕೃತ ಮನಸ್ಥಿತಿಯವರು ಮಾತ್ರ 100 ಕೋಟಿ ಲಸಿಕೆ(vaccine) ಕೊಟ್ಟಿದ್ದೇವೆ ಎಂದು ಸಂಭ್ರಮ ಪಡುತ್ತಾರೆ-ಬಿ.ಕೆ ಹರಿಪ್ರಸಾದ್
ಒಂದು ರಿಪೋರ್ಟ್ ಪ್ರಕಾರ ಕೇವಲ 30 ಸೆಕೆಂಡ್ ಮುಂಚಿತವಾಗಿ ಟೈಟಾನಿಕ್ (TITANIC) ಸಿಬ್ಬಂದಿಗಳು ಮಂಜು ಗಡ್ಡೆಯನ್ನು ನೋಡಿ ಕ್ಯಾಪ್ಟನ್ ಗೆ ಅಲರ್ಟ್ ಮಾಡಿದ್ದರೆ ಈ ಭೀಕರ ಅನಾಹುತವನ್ನ ತಪ್ಪಿಸಬಹುದಿತ್ತಂತೆ.

ನಿಮಗೆಲ್ಲ ವಿಶ್ವ ಪ್ರಸಿದ್ಧ ಹರ್ಷಿಸ್ ಚಾಕಲೇಟ್ (Hershey’s chocolate) ಗೊತ್ತಿರಬೇಕಲ್ಲವೇ.. ಇದರ ಮಾಲೀಕರಾದ ಮಿಲ್ಟನ್ ಹರ್ಷಿ (Milton S. Hershey) ಕೂಡ ಟೈಟಾನಿಕ್ (TITANIC) ಹಡಗಿನಲ್ಲಿ ಪ್ರಯಾಣಿಸುವವರಲ್ಲಿ ಒಬ್ಬರಾಗಿದ್ದರು. ಆದರೆ ಕೊನೆಯ ಘಳಿಗೆಯಲ್ಲಿ ಅವರು ತಮ್ಮ ಟಿಕೆಟನ್ನು ಬೇರೆಯವರಿಗೆ ಕೊಟ್ಟು ತಾವು ಪ್ರಯಾಣದಿಂದ ಹಿಂದೆ ಸರಿದಿದ್ದರು.

ಈ ದುರಂತದಲ್ಲಿ ನಿಜವಾಗಿಯೂ ನೀರಿನಲ್ಲಿ ಮುಳುಗಿ ಮೃತಪಟ್ಟವರ ಸಂಖ್ಯೆಗಿಂತ, ಮೇಲಿನಿಂದ ಬಿದ್ದು, ಶೀತಲ ನೀರಿನಲ್ಲಿ ರಕ್ತ ಹೆಪ್ಪುಗಟ್ಟಿ ಸತ್ತವರ ಸಂಖ್ಯೆಯೇ ಹೆಚ್ಚು

ಟೈಟಾನಿಕ್ (TITANIC) ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಜಪಾನಿಗನೊಬ್ಬ ಅದೃಷ್ಟವಶಾತ್ ಈ ದುರಂತದಲ್ಲಿ ಬದುಕುಳಿದು ತನ್ನ ದೇಶಕ್ಕೆ ಹೋದ ಬಳಿಕ ಈ ಘಟನೆಯನ್ನು ನೋಡಿ ಮಾನಸಿಕವಾಗಿ ನೊಂದು ತಾನು ಕೂಡ ಹಡಗಿನಲ್ಲಿಯೇ ಇದ್ದು ಸತ್ತು ಹೋಗಬೇಕಿತ್ತು. ಬದುಕಿ ಬರಬಾರದಿತ್ತು ಎಂದು ಆತ್ಮಹತ್ಯೆಗೆ ಯತ್ನಿಸಿದ್ದನಂತೆ.

1997 ರಲ್ಲಿ ಟೈಟಾನಿಕ್ (TITANIC) ದುರಂತ ಆಧರಿಸಿದ ಅಮೇರಿಕಾದ ಚಲನಚಿತ್ರ ಟೈಟಾನಿಕ್ (TITANIC) ನಲ್ಲಿ ತೋರಿಸಿದ ಒಂದು ದೃಶ್ಯ, ಹಡಗು ಮಂಜುಗಡ್ಡೆಗೆ ಡಿಕ್ಕಿಯಾಗಿ ಮುಳುಗತೊಡಗಿದಾಗ ಅಲ್ಲಿದ್ದ ಸಂಗೀತ ವಾದಕರು ತಮ್ಮ ಜೀವನವನ್ನು ಲೆಕ್ಕಿಸದೇ ಪ್ರಯಾಣಿಕರು ಗಾಬರಿಯಾಗದಿರಲೆಂದು ಸತತವಾಗಿ ನಾಲ್ಕು ಘಂಟೆಗಳ ಕಾಲ ಸಂಗೀತ ನುಡಿಸಿದ್ದರು ಮತ್ತು ಹಡಗಿನೊಂದಿಗೆ ತಾವು ಕೂಡ ಜಲ ಸಮಾಧಿಯಾದರು. ಇದು ನಿಜವಾದ ಟೈಟಾನಿಕ್ (TITANIC) ದುರಂತದಲ್ಲೂ ಕೂಡ ನಡೆದಿತ್ತು.
In the Movie ‘Titanic’ Musicians Real Life Titanic Musicians
ದುರಂತದಲ್ಲಿ ಮೃತ ಪಟ್ಟ 1500 ಕ್ಕೂ ಹೆಚ್ಚಿನ ಪ್ರಯಾಣಿಕರ ಕೇವಲ 300 ಮೃತ ದೇಹಗಳು ಸಿಕ್ಕಿದ್ದವು ಮತ್ತು ಅವುಗಳನ್ನು ಗುರುತಿಸಿದ್ದರು, ಮಿಕ್ಕೆಲ್ಲ ಪ್ರಯಾಣಿಕರ ದೇಹಗಳು ಸಿಗಲೇ ಇಲ್ಲ.

1997 ರಲ್ಲಿ ತೆರೆ ಕಂಡ ಟೈಟಾನಿಕ್ (TITANIC) ಚಿತ್ರದ ಒಟ್ಟು ಬಜೆಟ್ ನಿಜವಾದ ಟೈಟಾನಿಕ್ (TITANIC) ಹಡಗು ನಿರ್ಮಿಸಲು ತಗುಲಿದ ವೆಚ್ಚಕ್ಕಿಂತಲೂ ಸುಮಾರು ಮೂರರಿಂದ ನಾಲ್ಕು ಪಟ್ಟು ಹೆಚ್ಚು.