ಪ್ರಮುಖ ಬ್ರಿಟಿಷ್ ಆಟೋಮೊಬೈಲ್ ದೈತ್ಯ ಮೋರಿಸ್ ಗ್ಯಾರೇಜ್ (MG) ಈ ತಿಂಗಳ 11 ರಂದು MG ASTOR SUV ಅನ್ನು ಬಿಡುಗಡೆ ಮಾಡಿದೆ. ಈ ಮಧ್ಯಮ ಗಾತ್ರದ ಎಸ್‌ಯುವಿಯ ಬುಕಿಂಗ್ ಗುರುವಾರದಿಂದ ಆರಂಭವಾಯಿತು ಹಾಗೂ ಬುಕಿಂಗ್ ಆರಂಭಿಸಿದ ಕೇವಲ 20 ನಿಮಿಷಗಳಲ್ಲಿ 5,000 ಕಾರುಗಳು ಮಾರಾಟವಾದವು.

ಈ ವರ್ಷ ಒಟ್ಟು 5,000 ಎಂಜಿ ಆಸ್ಟರ್ ಕಾರುಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಎಲ್ಲವನ್ನೂ ಕೆಲವೇ ನಿಮಿಷಗಳಲ್ಲಿ ಮಾರಾಟ ಮಾಡಲಾಗಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ಇನ್ನು ಮುಂದೆ ಎಂಜಿ ಆಸ್ಟರ್ ಕಾರುಗಳನ್ನು ಖರೀದಿಸಲು ಇಚ್ಛಿಸುವ ಗ್ರಾಹಕರು ಬುಕಿಂಗ್ ಮಾಡಿ ಸುಮಾರು ಒಂದು ವರ್ಷದ ವರೆಗೂ ಕಾಯಬೇಕು ಎಂದು ಹೇಳಿದ್ದಾರೆ.

MG ASTOR SUV ಕಾರು AI ನಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ಗ್ರಾಹಕರು ರೂ 25000 ಕೊಟ್ಟು ತಮ್ಮ ಕಾರುಗಳನ್ನ ಬುಕ್ ಮಾಡಿಕೊಂಡಿದ್ದಾರೆ. MG STOR SUV ಯನ್ನು ಕಾಯ್ದಿರಿಸಿದ ಗ್ರಾಹಕರಿಗೆ ನವೆಂಬರ್‌ನಲ್ಲಿ ಕಾರನ್ನು ವಿತರಿಸಲಾಗುವುದು ಎಂದು ಕಂಪನಿ ಸ್ಪಷ್ಟಪಡಿಸಿದೆ. ಎಂಜಿ ಆಸ್ಟರ್ ಬೆಲೆ ರೂ. 9.78 ಲಕ್ಷದಿಂದ ರೂ. 17.38 ಲಕ್ಷಗಳವರೆಗೆ ಇದೆ.
ಇದನ್ನೂ ಓದಿ : TITANIC : ಟೈಟಾನಿಕ್ ದುರಂತದ ಬಗ್ಗೆ 14 ವರ್ಷ ಹಿಂದೆಯೇ ಸಿಕ್ಕಿತ್ತು ಭವಿಷ್ಯವಾಣಿ – ನಂಬಲಸಾಧ್ಯವಾದ ಸತ್ಯಗಳು
ಹಲವಾರು ವೇರಿಯಂಟ್‌ಗಳನ್ನು ಅವಲಂಬಿಸಿ ಬೆಲೆ ಬದಲಾಗುತ್ತದೆ. ಗ್ರಾಹಕರಿಂದ ಇಂತಹ ಅದ್ಭುತ ಪ್ರತಿಕ್ರಿಯೆ ದೊರೆತಿರುವುದಕ್ಕೆ ಹರ್ಷ ವ್ಯಕ್ತ ಪಡಿಸಿದ ಎಂ ಜಿ ಮೋಟಾರ್ ಇಂಡಿಯಾ ಎಂ ಡಿ ರಾಜೀವ್ ಚಾಬಾ (Rajeev Chaba), “ಎಂ ಜಿ ಆಸ್ಟರ್ ಪ್ರೀಮಿಯಂ ಮಿಡ್-ಸೆಗ್ಮೆಂಟ್ ಎಸ್‌ಯುವಿ (Premium Mid Segment SUV). ಇದು ಸೊಗಸಾದ ಬಾಹ್ಯ, ಐಷಾರಾಮಿ ಒಳಾಂಗಣ ಮತ್ತು ಭವಿಷ್ಯದ ತಂತ್ರಜ್ಞಾನವನ್ನು ಹೊಂದಿದೆ. ಆಟೋಮೊಬೈಲ್ ಉದ್ಯಮವು ಪ್ರಸ್ತುತ ಎದುರಿಸುತ್ತಿರುವ ಜಾಗತಿಕ ಬಿಕ್ಕಟ್ಟಿನಿಂದಾಗಿ ನಾವು ಈ

ವರ್ಷ ಸೀಮಿತ ಸಂಖ್ಯೆಯ ಕಾರುಗಳನ್ನು ಉತ್ಪಾದಿಸುತ್ತಿದ್ದೇವೆ. ಮುಂದಿನ ವರ್ಷ ಹೆಚ್ಚಿನ ಕಾರುಗಳನ್ನು ಉತ್ಪಾದಿಸಲು ಮತ್ತು ಮಾರಾಟ ಮಾಡಲು ನಾವು ಯೋಜಿಸಿಕೊಂಡಿದ್ದೇವೆ, ಅಷ್ಟರೊಳಗೆ ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಹೇಳಿದರು.

MG ASTOR SUV ಭಾರತದ ಮೊದಲ ಎಐ (AI) ಪವರ್ ಕಾರ್ (Power Car) – ಎಂಜಿ ಆಸ್ಟರ್ (MG Astor) ಭಾರತೀಯ ಆಟೋಮೊಬೈಲ್ (Automobile) ಮಾರುಕಟ್ಟೆಯಲ್ಲಿ ಮೊದಲ ಆರ್ಟೀಫಿಷಿಯಲ್ ಇಂಟಲಿಜೇನ್ಸ್ (Artificial Inteligence) ಕಾರಾಗಿದ್ದು 10.1 ಇಂಚಿನ ಟಚ್‌ಸ್ಕ್ರೀನ್ (Touch Screen) ಇನ್ಫೋಟೈನ್‌ಮೆಂಟ್ ಸಿಸ್ಟಮ್ (Infotainment System) ಅನ್ನು ಈ ಕಾರು ಒಳಗೊಂಡಿದೆ.
ಇದನ್ನೂ ಓದಿ : Mummies of India : ಈಜಿಪ್ತ್‌ನಲ್ಲಿರುವ ಮಮ್ಮಿಗಳಂತೆಯೇ ಭಾರತದಲ್ಲೂ ಪತ್ತೆಯಾಗಿದೆ ನ್ಯಾಚುರಲ್ ಮಮ್ಮಿ
ಇದು ಜಿಯೋ ಇ-ಸಿಮ್ (Jio e-Sim) ಜೊತೆ ಸಂಪರ್ಕಿಸುವ ಸೌಲಭ್ಯವನ್ನು ಹೊಂದಿದೆ. ಕಾರಿನಲ್ಲಿ ಅಳವಡಿಸಲಾಗಿರುವ ಎಐ (AI) ಆಧಾರಿತ ರೋಬೋಟ್ ಗ್ರಾಹಕರಿಗೆ ವೈಯಕ್ತಿಕ ಸಹಾಯಕರಾಗಿ ಧ್ವನಿ ಆದೇಶಗಳಿಗೆ ಪ್ರತಿಕ್ರಿಯಿಸುತ್ತದೆ. ಇದು ವಿಕಿಪೀಡಿಯಾ (Wikipedia), ಜೋಕ್ಸ್ (Jokes), ನ್ಯೂಸ್ (News), ಚಿಟ್ ಚಾಟ್ (Chit Chat), ನ್ಯಾವಿಗೇಷನ್ (Navigation), ಮ್ಯೂಸಿಕ್ ಸೆಲೆಕ್ಟ್ (Music Select) ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.