ಹಿಮಾಚಲ ಪ್ರದೇಶ : ಇತ್ತಿಚಿನ ಈ ಆಧುನಿಕ ದಿನಗಳಲ್ಲಿ ನ್ಯಾಚುರಲ್ ಮಮ್ಮಿಫಿಕೇಶನ್ (Natural Mummification) ಅನ್ನುವುದು ಅತ್ಯಂತ ಅಪರೂಪ, ಹಿಂದೆ ಒಂದು ಕಾಲದಲ್ಲಿ ಮೃತ ದೇಹವನ್ನು ಸಂರಕ್ಷಿಸಲು ಮಮ್ಮಿಫಿಕೇಶನ್ ಮಾಡುತ್ತಿದ್ದರು. ನಾವು ನೋಡಿದ ಅಥವಾ ಕೇಳಿದ ಬಹುತೇಕ ಮಮ್ಮಿಗಳನ್ನು (ಪಠ್ಯಪುಸ್ತಕಗಳು ಮತ್ತು ವಸ್ತುಸಂಗ್ರಹಾಲಯಗಳಲ್ಲಿ) ವಿಪರೀತ ತಾಪಮಾನ ಮತ್ತು ಶುಷ್ಕ ಗಾಳಿಯ ಒತ್ತಡಗಳ ಜೊತೆ ಎಂಬಾಲ್ಮಿಂಗ್ ಎಂಬ ರಾಸಾಯನಿಕ ಪ್ರಕ್ರಿಯೆಯೊಂದಿಗೆ ಮಮ್ಮಿ (Mummy) ಮಾಡಲಾಗುತ್ತದೆ ಮತ್ತು ನಂತರ ಅದನ್ನು ಲಿನಿನ್ (Linen Cloth) ಬಟ್ಟೆಯಲ್ಲಿ ಸುತ್ತಿಡಲಾಗುತ್ತದೆ.

1975 ರಲ್ಲಿ ಉತ್ತರ ಭಾರತದಲ್ಲಿ (North India) ಸಂಭವಿಸಿದ ಒಂದು ಭೂಕಂಪನದಿಂದ (Earthquake) ಬೌದ್ಧ ಸನ್ಯಾಸಿಯಾದ (Buddhist Monk) ಸಂಗ ಟೆನ್ಜಿನ್ (Sangha Tenzin) ಅವರ ಮಮ್ಮಿ ದೇಹವನ್ನು ಹೊಂದಿರುವ ಹಳೆಯ ಸಮಾಧಿ ತೆರೆದುಕೊಂಡಿತು. ಸ್ಥಳಿಯರು ಮತ್ತು ಪೊಲೀಸರು ಆ ಸಮಾಧಿಯನ್ನು ಅಗೆದು ತೆರೆದು ನೋಡಿದಾಗ ಆಶ್ಚರ್ಯಕರ ಸಂಗತಿಯೊಂದು ಬಯಲಾಯಿತು.
ಇದನ್ನೂ ಓದಿ : TITANIC : ಟೈಟಾನಿಕ್ ದುರಂತದ ಬಗ್ಗೆ 14 ವರ್ಷ ಹಿಂದೆಯೇ ಸಿಕ್ಕಿತ್ತು ಭವಿಷ್ಯವಾಣಿ – ನಂಬಲಸಾಧ್ಯವಾದ ಸತ್ಯಗಳು
ಧ್ಯಾನದಲ್ಲಿ ಕುಳಿತಿದ್ದ ಸ್ಥಾನದಲ್ಲಿಯೇ ಮರಣ ಹೊಂದಿದ ಸಾಧು ಸಂಗ ಟೆನ್ಜಿನ್ (Sangha Tenzin) ಅವರ ಮೃತದೇಹ ಅದಾಗಿತ್ತು. ಇವರ ಮಮ್ಮಿಯನ್ನು ತುಂಬಾ ಅಧ್ಬುತವಾಗಿ ಸಂರಕ್ಷಿಸಲಾಗಿತ್ತು. ಅವರ ತಲೆಯ ಮೇಲೆ ಇನ್ನೂ ಸಹ ಕೂದಲಗಳು ಇದ್ದವು. ಅವರ ಕುತ್ತಿಗೆ ಮತ್ತು ತೊಡೆಗಳ ಸುತ್ತ ಹಗ್ಗವನ್ನು ಹೊಂದಿದ್ದರು. ಇದು ಸುಮಾರು 996 CE ಕಾಲಘಟ್ಟದ್ದು ಎಂದು ಹೇಳಲಾಗಿದೆ.

ಸ್ಥಳೀಯ ದಂತಕಥೆಗಳ ಪ್ರಕಾರ ಆ ಹಳ್ಳಿಯ ಭಾಗಗಳಲ್ಲಿ ಚೇಳುಗಳು ಮತ್ತು ಸರಿಸೃಪಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಅಲ್ಲಿ ವಾಸವಾಗಿದ್ದವರಿಗೆ ಅನೇಕ ರೀತಿಯಲ್ಲಿ ಉಪಟಳವನ್ನು ನೀಡುತ್ತಿದ್ದವು ಎನ್ನಲಾಗಿದೆ. ಈ ಸಮಯದಲ್ಲಿ ಬೌಧ ಸನ್ಯಾಸಿ ಸಂಗ ಟೆನ್ಜಿನ್ (Sangha Tenzin) ತಾನು ದೇಹವನ್ನು ತ್ಯಜಿಸುತ್ತಿರುವುದಾಗಿಯೂ ಮತ್ತು ತನ್ನ ದೇಹವನ್ನು ಮಮ್ಮಿಫೀಕೇಷನ್ ಮಾಡಬೇಕು ಅಂತ ತಿಳಿಸಿದ್ದರು. ಅದೇ ರೀತಿಯಲ್ಲಿ ಆತನ ಅನುಯಾಯಿಗಳು ಒಪ್ಪಿ ಎಲ್ಲ ಸಿದ್ದತೆಗಳನ್ನು ಪ್ರಾರಂಭಿಸಿದರು.
ಇದನ್ನೂ ಓದಿ : Kerala Rain; ಕೇರಳದಲ್ಲಿ ಅ. 20 ರಿಂದ 24 ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ; ಶಬರಿಮಲೆ ನಿಷೇಧ ವಿಸ್ತರಣೆ
ಆ ಸನ್ಯಾಸಿಗಳು ತಮ್ಮ ದೇಹ ತೊರೆದ ನಂತರ ಆಕಾಶದಲ್ಲಿ ಕಾಮನಬಿಲ್ಲು ಕಾಣಿಸಿಕೊಂಡಿತ್ತು ಮತ್ತು ತದನಂತರ ಆ ಹಳ್ಳಿಗಳಲ್ಲಿ ಚೇಳುಗಳು ಮತ್ತು ಸರಿಸೃಪಗಳ ಹಾವಳಿ ನಿಂತು ಹೋಯಿತು ಎಂದು ಸ್ಥಳಿಯರು ಹೇಳುತ್ತಾರೆ. ಈ ಸ್ಥಳವು ಟ್ಯಾಬೊ ಮೋನಾಸ್ಟೇರಿಯಿಂದ ಸುಮಾರು 30 ಮೈಲಿ ದೂರದಲ್ಲಿದೆ.

ಪ್ರಸ್ತುತ ಟಿಬೆಟ್ (Tibet) ನ ಗಡಿಭಾಗದ ಭಾರತದ ಹಿಮಾಚಲ ಪ್ರದೇಶದಲ್ಲಿ (Himachal Pradesh) ಸಂತನ ಸಮಾಧಿ ಉತ್ಖನನ ಮಾಡಿದ ಸ್ಥಳದಿಂದ ಎರಡು ಮೈಲಿ ದೂರದಲ್ಲಿರುವ ಗುಹೆಯಲ್ಲಿರುವ ದೇವಸ್ಥಾನದಲ್ಲಿ ಸಂಗ ಟೆನ್ಜಿನ್ (Sangha Tenzin) ಅವರ ಮಮ್ಮಿ ದೇಹವನ್ನು ಇಡಲಾಗಿದೆ.

ಸಾರ್ವಜನಿಕರಿಗೆಲ್ಲ ಈ ಮಮ್ಮಿಯನ್ನು ನೋಡಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ದೇವಸ್ತಾನವೂ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (Indo Tibetan Border Police) ನಿಯಂತ್ರಣದಲ್ಲಿದ್ದು ಇಲ್ಲಿಗೆ ತಲುಪಲು ತುಂಬಾ ಹರಸಾಹಸ ಪಡಬೇಕೆನ್ನುವುದು ಅಷ್ಟೇ ಸತ್ಯ.